ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಪರಿಸರ ಉಳಿಸುವಲ್ಲಿ ನಾವೆಲ್ಲ ವಿಫಲ

ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಜಾಗೃತಿ ಅಭಿಯಾನದಲ್ಲಿ ಡಿಡಿಪಿಐ ಬಿ.ಕೆ.ನಂದನೂರು ಹೇಳಿಕೆ
Last Updated 6 ಜೂನ್ 2018, 9:30 IST
ಅಕ್ಷರ ಗಾತ್ರ

ರಾಯಚೂರು: ‘ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ನೀರು ಹಾಗೂ ಪರಿಸರವನ್ನು ಉಳಿಸಿಕೊಡುವಲ್ಲಿ ಅಸಮರ್ಥರಾಗಿದ್ದೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರು ಕಳವಳ ವ್ಯಕ್ತಪಡಿಸಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಗ್ರೀನ್ ರಾಯಚೂರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.

’ಹಿಂದಿನ ಪೀಳಿಗೆಯವರು ನೆಟ್ಟ ಗಿಡಗಳಿಂದ ಆಕ್ಸಿಜನ್ ಪಡೆಯುತ್ತಿದ್ದೇವೆ. ಅವರು ನಮಗೆ ನಿಸರ್ಗದ ಸಂಪನ್ಮೂಲ ಬಿಟ್ಟು ಹೋಗಿದ್ದಾರೆ. ಆದರೆ, ಮಿತಿಯಿಲ್ಲದ ಬಳಕೆಯಿಂದ 100 ವರ್ಷಗಳಲ್ಲಿ ಆಗುವಷ್ಟು ಹಾನಿಯನ್ನು ಒಂದು ದಶಕದಲ್ಲಿ ಮಾಡಲಾಗಿದ್ದು, ಈಗ ಆತಂಕ ಎದುರಾಗಿದೆ’ ಎಂದರು.

ಜಲಚರ ಹಾಗೂ ವ್ಯನ್ಯ ಜೀವಿಗಳು ವಾಸಿಸಲು ಕೂಡ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಶುದ್ಧವಾದ ಗಾಳಿಗಾಗಿ ನಾಲ್ಕು ಜನರು ಒಂದು ಕಡೆ ಸೇರದಂತೆ ನಿಷೇಧಾಜ್ಞೆ ಜಾರಿಯಾಗುವ ಪರಿ ಸ್ಥಿತಿಯೂ ನಿರ್ಮಾಣವಾಗಬಹುದು ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದಂತೆ ಪರಿಸರಕ್ಕಾಗಿ ಹೋರಾಡುವ ಪ್ರತಿಜ್ಞೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಿಂದ ಶಾಲೆಗಳಲ್ಲಿ ಈ ಬಾರಿ ಸಸಿಗಳನ್ನು ನೆಡಲು ಕ್ರಮ ಜರುಗಿಸಲಾಗಿದೆ ಎಂದರು.

ನಗರಸಭೆ ಪೌರಾಯುಕ್ತ ರಮೇಶ ನಾಯಕ ಮಾತನಾಡಿ, ನಗರವನ್ನು ಪ್ಲಾಸ್ಟಿಕ್ ಬಳಕೆ ಮುಕ್ತವಾಗಿಸಲು ನಗರ ಸಭೆ ಪಣತೊಟ್ಟಿದೆ ಎಂದು ಹೇಳಿದರು.

ನಗರದ ಯಾವುದೇ ರಸ್ತೆಯಲ್ಲೂ ಹೋದರೂ ಪ್ಲಾಸ್ಟಿಕ್ ಯಥೇಚ್ಛವಾಗಿ ಬಿದ್ದಿರುತ್ತದೆ. ಎಲ್ಲೆಂದರೆಲ್ಲ ಕಸ ಹಾಗೂ ಪ್ಲಾಸ್ಟಿಕ್ ಎಸೆಯಲಾಗುತ್ತಿದೆ. ಪ್ಲಾಸ್ಟಿಕ್ ವಿಷಕಾರಿ ಅಂಶ ಹೊಂದಿದ್ದು, ಎಲ್ಲರ ಮನೆ ಸೇರಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗಿದ್ದು, ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕ ಕಾರ್ಯದರ್ಶಿ ಬಸಪ್ಪ ಗದ್ದಿ ಉಪನ್ಯಾಸ ನೀಡಿ, ಆಯುಷ್ಯ ಹೆಚ್ಚಾಗಲು ಪರಿಸರ ಅಗತ್ಯವಾಗಿದ್ದು, ಗಾಳಿ, ನೀರು ಹಾಗೂ ಭೂಮಿ ಸೇರಿದಂತೆ ಎಲ್ಲವನ್ನೂ ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ಭೂಮಿ ಹಿಗ್ಗಿಲ್ಲ. ಆದರೆ, ಜನಸಂಖ್ಯೆ ಹಿಗ್ಗಿದೆ. ಮುಂದೆಯೂ ಹಿಗ್ಗುತ್ತದೆ. ದೇಶ ಆರ್ಥಿಕವಾಗಿ ಮಾತ್ರ ಬೆಳೆದರೆ ಸಾಲದು, ಸಾಮಾಜಿಕ ಹಾಗೂ ಪರಿಸರದ ವಿಷಯದಲ್ಲೂ ಮುಂದುವರೆಯಬೇಕು. ಬೆಳೆಯುತ್ತಿರುವ ಜನಸಂಖ್ಯೆಗೆ ಶುದ್ಧವಾದ ಪರಿಸರ ಒದಗಿಸುವ ನಿಟ್ಟಿನಲ್ಲಿ ಮುಂದೆ ಸಾಗಬೇಕು ಎಂದರು.

ಶಾಲಾ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಬೇಕು. ಕಿರಾಣಿ ಅಂಗಡಿಗೆ ಹೋದಾಗ ಪ್ಲಾಸ್ಟಿಕ್ ಚೀಲ ಬಳಸದೆ ಬಟ್ಟೆ ಚೀಲವನ್ನು ಬಳಕೆ ಮಾಡಬೇಕು. ಶಾಲೆ ಹಾಗೂ ಮನೆಯಲ್ಲಿ ಸಸಿ ನೆಟ್ಟು ಪೋಷಣೆ ಮಾಡಿ ಗುರುತು ಉಳಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕಾರ್ಯಕ್ರಮ ಉದ್ಘಾಟಿಸಿದರು. ಪರಿಸರ ಅಧಿಕಾರಿ ಎಂ.ಎಸ್.ನಟೇಶ  ಪ್ರಾಸ್ತಾವಿಕವಾಗಿ ಮಾತನಾಡಿದರು.

ಚಂದ್ರಶೇಖರ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸೈಯದ್ ಹಫೀಜುಲ್ಲಾ, ಗ್ರೀನ್ ರಾಯಚೂರಿನ ಕೊಂಡ ಕೃಷ್ಣಮೂರ್ತಿ, ರಾಜೇಶ ಕುಮಾರ ಇದ್ದರು.‘ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ನೀರು ಹಾಗೂ ಪರಿಸರವನ್ನು ಉಳಿಸಿಕೊಡುವಲ್ಲಿ ಅಸಮರ್ಥರಾಗಿದ್ದೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರು ಕಳವಳ ವ್ಯಕ್ತಪಡಿಸಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಗ್ರೀನ್ ರಾಯಚೂರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.

’ಹಿಂದಿನ ಪೀಳಿಗೆಯವರು ನೆಟ್ಟ ಗಿಡಗಳಿಂದ ಆಕ್ಸಿಜನ್ ಪಡೆಯುತ್ತಿದ್ದೇವೆ. ಅವರು ನಮಗೆ ನಿಸರ್ಗದ ಸಂಪನ್ಮೂಲ ಬಿಟ್ಟು ಹೋಗಿದ್ದಾರೆ. ಆದರೆ, ಮಿತಿಯಿಲ್ಲದ ಬಳಕೆಯಿಂದ 100 ವರ್ಷಗಳಲ್ಲಿ ಆಗುವಷ್ಟು ಹಾನಿಯನ್ನು ಒಂದು ದಶಕದಲ್ಲಿ ಮಾಡಲಾಗಿದ್ದು, ಈಗ ಆತಂಕ ಎದುರಾಗಿದೆ’ ಎಂದರು.

ಜಲಚರ ಹಾಗೂ ವ್ಯನ್ಯ ಜೀವಿಗಳು ವಾಸಿಸಲು ಕೂಡ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಶುದ್ಧವಾದ ಗಾಳಿಗಾಗಿ ನಾಲ್ಕು ಜನರು ಒಂದು ಕಡೆ ಸೇರದಂತೆ ನಿಷೇಧಾಜ್ಞೆ ಜಾರಿಯಾಗುವ ಪರಿ ಸ್ಥಿತಿಯೂ ನಿರ್ಮಾಣವಾಗಬಹುದು ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದಂತೆ ಪರಿಸರಕ್ಕಾಗಿ ಹೋರಾಡುವ ಪ್ರತಿಜ್ಞೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಿಂದ ಶಾಲೆಗಳಲ್ಲಿ ಈ ಬಾರಿ ಸಸಿಗಳನ್ನು ನೆಡಲು ಕ್ರಮ ಜರುಗಿಸಲಾಗಿದೆ ಎಂದರು.

ನಗರಸಭೆ ಪೌರಾಯುಕ್ತ ರಮೇಶ ನಾಯಕ ಮಾತನಾಡಿ, ನಗರವನ್ನು ಪ್ಲಾಸ್ಟಿಕ್ ಬಳಕೆ ಮುಕ್ತವಾಗಿಸಲು ನಗರ ಸಭೆ ಪಣತೊಟ್ಟಿದೆ ಎಂದು ಹೇಳಿದರು.

ನಗರದ ಯಾವುದೇ ರಸ್ತೆಯಲ್ಲೂ ಹೋದರೂ ಪ್ಲಾಸ್ಟಿಕ್ ಯಥೇಚ್ಛವಾಗಿ ಬಿದ್ದಿರುತ್ತದೆ. ಎಲ್ಲೆಂದರೆಲ್ಲ ಕಸ ಹಾಗೂ ಪ್ಲಾಸ್ಟಿಕ್ ಎಸೆಯಲಾಗುತ್ತಿದೆ. ಪ್ಲಾಸ್ಟಿಕ್ ವಿಷಕಾರಿ ಅಂಶ ಹೊಂದಿದ್ದು, ಎಲ್ಲರ ಮನೆ ಸೇರಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗಿದ್ದು, ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕ ಕಾರ್ಯದರ್ಶಿ ಬಸಪ್ಪ ಗದ್ದಿ ಉಪನ್ಯಾಸ ನೀಡಿ, ಆಯುಷ್ಯ ಹೆಚ್ಚಾಗಲು ಪರಿಸರ ಅಗತ್ಯವಾಗಿದ್ದು, ಗಾಳಿ, ನೀರು ಹಾಗೂ ಭೂಮಿ ಸೇರಿದಂತೆ ಎಲ್ಲವನ್ನೂ ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ಭೂಮಿ ಹಿಗ್ಗಿಲ್ಲ. ಆದರೆ, ಜನಸಂಖ್ಯೆ ಹಿಗ್ಗಿದೆ. ಮುಂದೆಯೂ ಹಿಗ್ಗುತ್ತದೆ. ದೇಶ ಆರ್ಥಿಕವಾಗಿ ಮಾತ್ರ ಬೆಳೆದರೆ ಸಾಲದು, ಸಾಮಾಜಿಕ ಹಾಗೂ ಪರಿಸರದ ವಿಷಯದಲ್ಲೂ ಮುಂದುವರೆಯಬೇಕು. ಬೆಳೆಯುತ್ತಿರುವ ಜನಸಂಖ್ಯೆಗೆ ಶುದ್ಧವಾದ ಪರಿಸರ ಒದಗಿಸುವ ನಿಟ್ಟಿನಲ್ಲಿ ಮುಂದೆ ಸಾಗಬೇಕು ಎಂದರು.

ಶಾಲಾ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಬೇಕು. ಕಿರಾಣಿ ಅಂಗಡಿಗೆ ಹೋದಾಗ ಪ್ಲಾಸ್ಟಿಕ್ ಚೀಲ ಬಳಸದೆ ಬಟ್ಟೆ ಚೀಲವನ್ನು ಬಳಕೆ ಮಾಡಬೇಕು. ಶಾಲೆ ಹಾಗೂ ಮನೆಯಲ್ಲಿ ಸಸಿ ನೆಟ್ಟು ಪೋಷಣೆ ಮಾಡಿ ಗುರುತು ಉಳಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕಾರ್ಯಕ್ರಮ ಉದ್ಘಾಟಿಸಿದರು. ಪರಿಸರ ಅಧಿಕಾರಿ ಎಂ.ಎಸ್.ನಟೇಶ  ಪ್ರಾಸ್ತಾವಿಕವಾಗಿ ಮಾತನಾಡಿದರು.

ಚಂದ್ರಶೇಖರ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸೈಯದ್ ಹಫೀಜುಲ್ಲಾ, ಗ್ರೀನ್ ರಾಯಚೂರಿನ ಕೊಂಡ ಕೃಷ್ಣಮೂರ್ತಿ, ರಾಜೇಶ ಕುಮಾರ ಇದ್ದರು.

**
ಪರಿಸರ ಮಾಲಿನ್ಯದ ಪ್ರಮಾಣ ಅವಲೋಕಿಸಿದರೆ ಮುಂದಿನ ಭವಿಷ್ಯ ಏನಾಗಬಹುದು ಎಂಬ ಆತಂಕ ಮೂಡುವಂತಾಗಿದೆ
ಬಿ.ಕೆ.ನಂದನೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT