ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಪೆಲ್ಲಿಂಗ್‌ ಬೀ’ ನಮ್ಮವರೇ ಮುಂದು

Last Updated 6 ಜೂನ್ 2018, 19:40 IST
ಅಕ್ಷರ ಗಾತ್ರ

ಭಾರತೀಯ ಮೂಲದ ಅಮೆರಿಕ ಹುಡುಗ ಕಾರ್ತಿಕ್‌ ನೆಮ್ಮಾನಿ ಈ ಸಲದ ಪ್ರತಿಷ್ಠಿತ ‘ಸ್ಕ್ರಿಪ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ’ ಸ್ಪರ್ಧೆಯಲ್ಲಿ ಜಯಿಸಿ ಬರೋಬ್ಬರಿ 42 ಸಾವಿರ ಅಮೆರಿಕನ್‌ ಡಾಲರ್‌ (ಸುಮಾರು 30 ಲಕ್ಷ ರೂಪಾಯಿ) ನಗದು ಬಹುಮಾನವನ್ನು ಮನೆಗೆ ಹೊತ್ತೊಯ್ದಿದ್ದಾನೆ. 'koinonia' ಎಂಬ ಪದದ ಸರಿಯಾದ ಸ್ಪೆಲ್ಲಿಂಗ್‌ ಹೇಳಿದ್ದಕ್ಕೆ ಆತ ಈ ಬಹುಮಾನ ಗಿಟ್ಟಿಸಿದ್ದಾನೆ. ಟೆಕ್ಸಾಸ್‌ನ ಮೆಕ್‌ಕಿನ್ನಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಕಾರ್ತಿಕ್‌ಗೆ ಸ್ಪರ್ಧೆಯಲ್ಲಿ ಪೈಪೋಟಿ ಒಡ್ಡಿದವರು ಮತ್ತೊಬ್ಬ ಭಾರತೀಯ ಮೂಲದ ಅಮೆರಿಕನ್‌ ವಿದ್ಯಾರ್ಥಿ ನಯ್ಸಾ ಮೋದಿ. ಕಾರ್ತಿಕ್‌ಗೆ ನಗದು ಬಹುಮಾನವಲ್ಲದೆ ನ್ಯೂಯಾರ್ಕ್‌ ಮತ್ತು ಹಾಲಿವುಡ್‌ ಪ್ರವಾಸ ಭಾಗ್ಯವೂ ಸಿಕ್ಕಿದೆ. ಆತನ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಪಿಜ್ಜಾ ಪಾರ್ಟಿ ಅವಕಾಶವೂ ಒದಗಿ ಬಂದಿದೆಯಂತೆ. ಈ ಸ್ಪರ್ಧೆಯಲ್ಲಿ ಕಳೆದ 11 ವರ್ಷಗಳಿಂದ ಏಷ್ಯಾ ಮೂಲದ ವಿದ್ಯಾರ್ಥಿಗಳೇ ಪ್ರಶಸ್ತಿ ಗೆಲ್ಲುತ್ತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT