ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ 80 ಎಲೆಕ್ಟ್ರಿಕ್‌ ಬಸ್‌ಗಳು ರಸ್ತೆಗೆ

Last Updated 7 ಜೂನ್ 2018, 6:23 IST
ಅಕ್ಷರ ಗಾತ್ರ

ಬೆಂಗಳೂರು: ಸದ್ಯದಲ್ಲೇ 80 ಎಲೆಕ್ಟ್ರಿಕ್‌ ಬಸ್‌ಗಳು ನಗರದ ರಸ್ತೆಗಳಲ್ಲಿ ಓಡಾಡಲಿವೆ. ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ಓಡಿಸುವ ಯೋಜನೆಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದ್ದು, ಬಿಎಂಟಿಸಿ ಮತ್ತು ಬಸ್‌ ಒದಗಿಸುವ ಖಾಸಗಿ ಕಂಪನಿ ಜಂಟಿ ಮಾಲೀಕತ್ವದಲ್ಲಿ ಬಸ್‌ಗಳನ್ನು ಖರೀದಿಸಬೇಕು ಎಂದು ಷರತ್ತು ಹಾಕಿದೆ.

‘ಕೇಂದ್ರ ಸರ್ಕಾರ 12 ಮೀ. ಉದ್ದದ ಹವಾನಿಯಂತ್ರಿತ ಬಿಎಂಟಿಸಿ ಬಸ್‌ಗೆ ₹1 ಕೋಟಿ ಹಾಗೂ ಸಾಮಾನ್ಯ ಬಸ್‌ಗೆ ₹ 75 ಲಕ್ಷ ಸಬ್ಸಿಡಿ ನೀಡಲಿದೆ. ಬಸ್‌ಗಳು ರಸ್ತೆಗೆ ಇಳಿಯುವ ಮೊದಲು ಕೆಲವು ಪ್ರಕ್ರಿಯೆಗಳು ಪೂರ್ಣವಾಗಬೇಕಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಹೇಳಿದರು.

ಬಸ್‌ ಬೆಲೆಯ ಶೇ 60ರಷ್ಟು ಅಥವಾ ₹1 ಕೋಟಿ ಇವೆರಡರಲ್ಲಿ ಯಾವುದು ಕಡಿಮೆಯೊ ಅದನ್ನು ನೀಡುವುದಾಗಿ ಕೇಂದ್ರ ಹೇಳಿತ್ತು. ಆದರೆ, ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ಗಳ ತಂತ್ರಜ್ಞಾನ ಹೊಸದಾಗಿರುವುದರಿಂದ ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ಪಡೆಯಲು ತೀರ್ಮಾನಿಸಿತು.

ಆನಂತರ, ಖಾಸಗಿ ಕಂಪೆನಿಗಳು ಖರೀದಿಸುವ ಬಸ್‌ಗಳು ನಿಗಮದ ಜಂಟಿ ಮಾಲೀಕತ್ವದಲ್ಲಿ ಇರಬೇಕು ಎಂಬ ಷರತ್ತಿನೊಂದಿಗೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ.

ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸಲು ಗುತ್ತಿಗೆ ಪಡೆದಿರುವ ಕಂಪನಿಯು ಬಿಎಂಟಿಸಿ ಬಸ್‌ಗಳ ನಿರ್ವಹಣಾ ವೆಚ್ಚಕ್ಕಿಂತಲೂ ಕಡಿಮೆ ದರಕ್ಕೆ ಓಡಿಸುವ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT