ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆಗೆ ಮುಂದಾದ ಪಂಚಾಯ್ತಿ ಸದಸ್ಯರು

ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಒತ್ತಾಯ; ಪ್ರತಿಭಟನೆ
Last Updated 9 ಜೂನ್ 2018, 5:43 IST
ಅಕ್ಷರ ಗಾತ್ರ

ಬೆಳಗಾವಿ: ಎಐಸಿಸಿ ಕಾರ್ಯದರ್ಶಿ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಜಿಲ್ಲಾ ಪಂಚಾಯ್ತಿಯ 14 ಸದಸ್ಯರು, ತಾಲ್ಲೂಕು ಪಂಚಾಯ್ತಿಯ 27 ಸದಸ್ಯರು ಹಾಗೂ ಎಪಿಎಂಸಿಯ 3 ಸದಸ್ಯರು ತಮ್ಮ ಸ್ಥಾನಗಳಿಗೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಲು ಶುಕ್ರವಾರ ನಿರ್ಧರಿಸಿದ್ದಾರೆ.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಜನಪ್ರತಿನಿಧಿಗಳು, ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಾಗೂ ಪಕ್ಷದ ಹೈಕಮಾಂಡ್‌ ವಿರುದ್ಧ ಘೋಷಣೆ ಕೂಗಿದರು.

ಇದಕ್ಕೂ ಮುಂಚೆ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ‘ಪಕ್ಷ ಕಟ್ಟಲು ಸತೀಶ ಅವರು ಸಾಕಷ್ಟು ಕೊಡುಗೆ ನೀಡಿ ದ್ದಾರೆ. ಜಿಲ್ಲೆಯಲ್ಲಿ ಎಂಟು ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಇಂತಹ ವರಿಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

‘ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ, ಹೊರಬರಬೇಕೆಂದು ಸತೀಶ ಅವರಿಗೆ ಒತ್ತಾಯಿಸುತ್ತೇವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಗಂಗಾಧರಸ್ವಾಮಿ ತವಗಮಠ ಮಾತ ನಾಡಿ, ‘ಸತೀಶ ಅವರು ಪ್ರಭಾವಿಯಾಗಿ ಬೆಳೆಯುತ್ತಿರುವುದನ್ನು ಪರಮೇಶ್ವರ್‌ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಚಿವ ಸ್ಥಾನ ತಪ್ಪಿಸಿದ್ದಾರೆ. ನಾವು ಆಯ್ಕೆಯಾಗಿರುವ ಸಂಸ್ಥೆಗಳ ಮುಖ್ಯಸ್ಥರಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಪ್ರತ್ಯೇಕವಾಗಿ ರಾಜೀನಾಮೆ ಸಲ್ಲಿಸುತ್ತೇವೆ’ ಎಂದು ಹೇಳಿದರು.

‘ಕೊನೆಯ ಹಂತದವರೆಗೂ ಸತೀಶ ಅವರ ಹೆಸರು ಲಿಸ್ಟ್‌ನಲ್ಲಿತ್ತು. ಸಚಿವರ ಹೆಸರುಗಳನ್ನು ಘೋಷಿಸುವ ಹಂತದಲ್ಲಿ ಅವರ ಹೆಸರು ಕೈಬಿಡಲಾಗಿದೆ. ಇದರಿಂದ ಸತೀಶ ಅವರಿಗೆ ಅವಮಾನ ಮಾಡಿದಂತಾಗಿದೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ’ ಎಂದರು.

ಒಂದೇ ಕುಟುಂಬದಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲು ಸಾಧ್ಯವೇ? ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಆಕ್ರೋಶಗೊಂಡ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದಗೌಡ ಸುಣಗಾರ, ‘ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು ಎರಡು ಸಚಿವ ಸ್ಥಾನ ನೀಡಿದರೆ ತಪ್ಪಿಲ್ಲ’ ಎಂದರು.

ರಾಜೀನಾಮೆಗೆ ನಿರ್ಧರಿಸಿದವರು

ಜಿಲ್ಲಾ ಪಂಚಾಯ್ತಿ ಸದಸ್ಯರು: ದಡ್ಡಿ ಕ್ಷೇತ್ರದ ಮನೀಶಾ ರಮೇಶ ಪಾಟೀಲ, ಹೆಬ್ಬಾಳದ ಗಂಗಾಧರಸ್ವಾಮಿ ತವಗಮಠ, ಪಾಶ್ಚಾಪೂರದ ಮಂಜುನಾಥ ಪಾಟೀಲ, ಠಾಣಾಹತ್ತರಗಿಯ ಫಕೀರವ್ವ ಹಂಚಿನಮನಿ, ಹುದಲಿಯ ಮಲ್ಲವ್ವಾ ಯಲ್ಲಪ್ಪ, ಕಡೋಲಿಯ ಅರುಣ ಕಟಾಂಬಳೆ, ಕಾಕತಿಯ ಸಿದ್ದಗೌಡ ಸುಣಗಾರ, ಬೆಳಗುಂದಿಯ ಮೋಹನ ಮೊರೆ, ಯಳ್ಳೂರನ ರಮೇಶ ಗೋರಲ, ಬಾಗೇವಾಡಿಯ ಶಂಕರಗೌಡ ಪಾಟೀಲ, ಸಾಂಬ್ರಾದ ಕೃಷ್ಣಾ ಅನಿಗೋಕರ, ಮಬನೂರಿನ ಫಕೀರಪ್ಪ ಹದ್ದನವರ, ನೇಸರಗಿಯ ನಿಂಗಪ್ಪ ಅರಿಕೇರಿ ಹಾಗೂ ರಾಯಬಾಗದ ಸವದತ್ತಿಯ ಜಯಶ್ರೀ ಅನಂತ ಮೋಹಿತೆ.

ಎಪಿಎಂಪಿ ಸದಸ್ಯರು: ಅಪ್ಪಾಸಾಬ ಜಾಧವ (ಅಧ್ಯಕ್ಷ), ಆನಂದ ಪಾಟೀಲ, ಭರಮಗೌಡ ಪಾಟೀಲ, ಮಹಾದೇವ ಕನಗಾಳೆ (ಸದಸ್ಯರು)

ತಾಲ್ಲೂಕು ಪಂಚಾಯ್ತಿ ಸದಸ್ಯರು: ನಿಂಗಪ್ಪ ಬಂಜಿರಾಮ, ಫರೀದಾ ಮುಲ್ಲಾ, ಪರಪ್ಪ ಖೋತ, ಅಶ್ವಿನಿ ಗುಟಗುದ್ದಿ, ನಿಂಗನಗೌಡ ಪಾಟೀಲ, ಸುರೇಶ ಮಾರುತಿ ಬೆಣ್ಣೆ, ನೀಲವ್ವ ಕುಡಜೋಗಿ, ಭಾರತಿ ಕೋಕಿತಕರ, ಯಲ್ಲಪ್ಪ ಬೆಡಸೂರಿ, ಖತಾಲಸಾಬ ದಸ್ತಗೀರ, ಶೋಭಾ ಜರಳಿ, ಸುನೀತಾ ಬಿಸಿರೊಟ್ಟಿ, ಸುನೀತಾ ಘೋಟಿ, ಸಾಬುರಾವ ದೇಸಾಯಿ, ಲಗಮವ್ವ ಕಲ್ಲೋಣಿ, ಮಲಪ್ರಭಾ ಗಾವಡೆ, ರಾಜು ಬಾಬುಗಾವಡೆ, ಮಾರುತಿ ಸನದಿ, ಚಂದ್ರವ್ವ ನಾಯಿಕ, ಭೀಮಪ್ಪ ಮಳಗಲಿ, ಅನಸಾರಿ ನಸರೀನಬಾನು, ಗಜಾನನ ಕಾಗಣೇಕರ, ಯಲ್ಲಪ್ಪ ಕೋಳೆಕರ, ಕಾಂಚನ ಕಾಂಬಳೆ, ಶಂಕರ ಕೋನು, ಲಗಮವ್ವ ಗುಜನಾಳ ಹಾಗೂ ಭೀಮರಾವ ನಾಯಿಕ.

ಮಹಾನಗರ ಪಾಲಿಕೆ ಸದಸ್ಯರು; ಜಯಶ್ರೀ ಮಾಳಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT