ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರ ಮೇಲಿದೆ ಎಲ್ಲರ ಗಮನ

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ರಷ್ಯಾದಲ್ಲಿ ಕಾಲ್ಚೆಂಡಿನಾಟದ ಸೊಗಸು ಅನಾವರಣಗೊಳ್ಳುವ ಕಾಲ ಸನ್ನಿಹಿತವಾಗಿದೆ. ಈ ಬಾರಿ ಯಾವ ತಂಡ ಪ್ರಶಸ್ತಿ ಗೆಲ್ಲಬಹುದು. ಯಾವ ಆಟಗಾರ ಮೋಡಿ ಮಾಡಬಲ್ಲ ಎಂಬ ಲೆಕ್ಕಾಚಾರವೂ ಜೋರಾಗಿದೆ.

ತಮ್ಮ ಸೊಬಗಿನ ಆಟದ ಮೂಲಕ ಅಭಿಮಾನಿಗಳಿಗೆ ಮುದ ನೀಡಲು ಆಟಗಾರರೂ ಕಾತರರಾಗಿದ್ದಾರೆ. ಈ ಬಾರಿ ಫುಟ್‌ಬಾಲ್‌ ಪ್ರಿಯರ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಪ್ರಮುಖ ಆಟಗಾರರ ಕುರಿತ ಮಾಹಿತಿ ಇಲ್ಲಿದೆ.

******

ಕ್ರಿಸ್ಟಿಯಾನೊ ರೊನಾಲ್ಡೊ
ಪೋರ್ಚುಗಲ್‌

ಜೆರ್ಸಿ ಸಂಖ್ಯೆ:7
ವಯಸ್ಸು: 33
ಆಡುವ ವಿಭಾಗ: ಫಾರ್ವರ್ಡ್‌
ಅಂತರರಾಷ್ಟ್ರೀಯ ಸಾಧನೆ
ಪಂದ್ಯ: 150
ಗೋಲು: 81
ವಾರ್ಷಿಕ ಆದಾಯ: ₹724.84 ಕೋಟಿ
ಬಲ: ಫ್ರೀ ಕ್ರಿಕ್‌, ಪೆನಾಲ್ಟಿ, ಲಾಂಗ್‌ ಶಾಟ್ಸ್‌ ಮತ್ತು ಹೆಡರ್‌ಗಳ ಮೂಲಕ ಗೋಲು ಗಳಿಸುವುದರಲ್ಲಿ ನಿಸ್ಸೀಮ.

***

2). ಲಯೊನೆಲ್‌ ಮೆಸ್ಸಿ
ಅರ್ಜೆಂಟೀನಾ

ಜೆರ್ಸಿ ಸಂಖ್ಯೆ:10
ವಯಸ್ಸು: 30
ಆಡುವ ವಿಭಾಗ: ಫಾರ್ವರ್ಡ್.
ಅಂತರರಾಷ್ಟ್ರೀಯ ಸಾಧನೆ
ಪಂದ್ಯ:  124
ಗೋಲು:  64
ವಾರ್ಷಿಕ ಆದಾಯ:₹ 745.36 ಕೋಟಿ
ಬಲ: ಡ್ರಿಬ್ಲಿಂಗ್‌ ಮೂಲಕ ಎದುರಾಳಿಗಳನ್ನು ಕಂಗೆಡಿಸಬಲ್ಲರು. ಎಡಗಾಲಿನಿಂದ ಚೆಂಡನ್ನು ಒದ್ದು ಗುರಿ ಸೇರಿಸುವುದರಲ್ಲಿ ಎತ್ತಿದ ಕೈ.

***

3) ನೇಮರ್‌
ಬ್ರೆಜಿಲ್‌

ಜೆರ್ಸಿ ಸಂಖ್ಯೆ: 10
ವಯಸ್ಸು: 26
ಆಡುವ ವಿಭಾಗ: ಫಾರ್ವರ್ಡ್.
ಅಂತರರಾಷ್ಟ್ರೀಯ ಸಾಧನೆ
ಪಂದ್ಯ:  84
ಗೋಲು:  54
ವಾರ್ಷಿಕ ಆದಾಯ: ₹ 604.02 ಕೋಟಿ.
ಬಲ: ಚುರುಕಿನ ಡ್ರಿಬ್ಲಿಂಗ್‌, ಫ್ರೀ ಕಿಕ್‌ ಮತ್ತು ಪೆನಾಲ್ಟಿ ಅವಕಾಶಗಳಲ್ಲಿ ಗೋಲು ಗಳಿಸುವುದರಲ್ಲಿ ನಿಪುಣ.

***

4) ಲೂಯಿಸ್‌ ಸ್ವಾರೆಜ್‌
ಉರುಗ್ವೆ

ಜೆರ್ಸಿ ಸಂಖ್ಯೆ:  9ವಯಸ್ಸು: 31
ಆಡುವ ವಿಭಾಗ:  ಸ್ಟ್ರೈಕರ್‌
ಅಂತರರಾಷ್ಟ್ರೀಯ ಸಾಧನೆ
ಪಂದ್ಯ: 98
ಗೋಲು: 51
ವಾರ್ಷಿಕ ಆದಾಯ: ₹ 180.54 ಕೋಟಿ.
ಬಲ: ಚೆಂಡನ್ನು ಶರವೇಗದಲ್ಲಿ ಒದ್ದು ಗುರಿ ಮುಟ್ಟಿಸಬಲ್ಲರು. ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ ಗೋಲು ಗಳಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.

*******

5) ಪಾಲ್‌ ಪೋಗ್ಬಾ
ಫ್ರಾನ್ಸ್‌

ಜೆರ್ಸಿ ಸಂಖ್ಯೆ: 6
ವಯಸ್ಸು: 25
ಆಡುವ ವಿಭಾಗ: ಮಿಡ್‌ ಫೀಲ್ಡರ್‌.
ಅಂತರರಾಷ್ಟ್ರೀಯ ಸಾಧನೆ
ಪಂದ್ಯ: 53
ಗೋಲು: 9
ವಾರ್ಷಿಕ ಆದಾಯ: ₹ 198.89 ಕೋಟಿ
ಬಲ: ಪಾದರಸದಂತಹ ಚಲನೆ, ಟ್ಯಾಕ್ಲಿಂಗ್‌ ಮತ್ತು ಡ್ರಿಬ್ಲಿಂಗ್‌ ಮೂಲಕ ಎದುರಾಳಿಗಳ ಬಲಿಷ್ಠ ರಕ್ಷಣಾಕೋಟೆಯನ್ನು ದಿಟ್ಟತನದಿಂದ ಭೇದಿಸಬಲ್ಲರು.

****

6) ಸರ್ಜಿಯೊ ರಾಮೊಸ್‌
ಸ್ಪೇನ್‌

ಜೆರ್ಸಿ ಸಂಖ್ಯೆ:4
ವಯಸ್ಸು: 32
ಆಡುವ ವಿಭಾಗ: ಡಿಫೆಂಡರ್‌‌
ಅಂತರರಾಷ್ಟ್ರೀಯ ಸಾಧನೆ
ಪಂದ್ಯ: 151
ಗೋಲು: 13
ವಾರ್ಷಿಕ ಆದಾಯ: ₹ 57.52 ಕೋಟಿ‌
ಬಲ: ಚೆಂಡನ್ನು ತಲೆತಾಗಿಸಿ (ಹೆಡರ್‌) ಗುರಿ ತಲುಪಿಸು‌ವುದರಲ್ಲಿ ನಿಪುಣ. ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿ ಅದನ್ನು ಗೋಲು ಪೆಟ್ಟಿಗೆಯೊಳಗೆ ತೂರಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.

********

7) ಜೇಮ್ಸ್‌ ರಾಡ್ರಿಗಸ್‌
ಕೊಲಂಬಿಯಾ

ಜೆರ್ಸಿ ಸಂಖ್ಯೆ: 11
ವಯಸ್ಸು: 26
ಆಡುವ ವಿಭಾಗ: ಮಿಡ್‌ಫೀಲ್ಡರ್‌.
ಅಂತರರಾಷ್ಟ್ರೀಯ ಸಾಧನೆ
ಪಂದ್ಯ: 62
ಗೋಲು: 21
ವಾರ್ಷಿಕ ಆದಾಯ: ₹171.94 ಕೋಟಿ
ಬಲ: ಫ್ರೀ ಕಿಕ್‌ ಮತ್ತು ಬೈಸಿಕಲ್‌ ಕಿಕ್‌ಗಳ ಮೂಲಕ ಗೋಲು ದಾಖಲಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.

**

8) ಮಹಮ್ಮದ್‌ ಸಲಾ
ಈಜಿಪ್ಟ್‌

ಜೆರ್ಸಿ ಸಂಖ್ಯೆ: 11
ವಯಸ್ಸು: 25
ಆಡುವ ವಿಭಾಗ: ಫಾರ್ವರ್ಡ್‌.
ಅಂತರರಾಷ್ಟ್ರೀಯ ಸಾಧನೆ
ಪಂದ್ಯ: 57
ಗೋಲು: 33
ವಾರ್ಷಿಕ ಆದಾಯ: ₹20.27 ಕೋಟಿ
ಬಲ: ಡ್ರಿಬ್ಲಿಂಗ್‌ ಮೂಲಕ ಎದುರಾಳಿಗಳನ್ನು ಕಂಗೆಡಿಸಬಲ್ಲರು. ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಬಲ್ಲರು.

***
9) ಮ್ಯಾನುಯೆಲ್‌ ನ್ಯುಯರ್‌
ಜರ್ಮನಿ

ಜೆರ್ಸಿ ಸಂಖ್ಯೆ: 1
ವಯಸ್ಸು: 32
ಆಡುವ ವಿಭಾಗ: ಗೋಲ್‌ಕೀಪರ್.
ಅಂತರರಾಷ್ಟ್ರೀಯ ಸಾಧನೆ
ಪಂದ್ಯ: 75
ವಾರ್ಷಿಕ ಆದಾಯ: ₹ 54. 18 ಕೋಟಿ
ಬಲ: ವಿಶ್ವದ ಶ್ರೇಷ್ಠ ಗೋಲ್‌ಕೀಪರ್‌ ಎಂಬ ಹಿರಿಮೆ. ಎದುರಾಳಿಗಳು ಶರವೇಗದಲ್ಲಿ ಗುರಿಯೆಡೆಗೆ ಒದ್ದ ಚೆಂಡನ್ನು ಎಡ, ಬಲ ಮತ್ತು ಮೇಲಕ್ಕೆ ಜಿಗಿದು ಅಮೋಘ ರೀತಿಯಲ್ಲಿ ತಡೆಯಬಲ್ಲರು.

***
10) ಎಡೆನ್‌ ಹಜಾರ್ಡ್‌
ಬೆಲ್ಜಿಯಂ

ಜೆರ್ಸಿ ಸಂಖ್ಯೆ: 0
ವಯಸ್ಸು: 27
ಆಡುವ ವಿಭಾಗ: ಫಾರ್ವರ್ಡ್‌
ಅಂತರರಾಷ್ಟ್ರೀಯ ಸಾಧನೆ:‍
ಪಂದ್ಯ: 85
ಗೋಲು: 22
ವಾರ್ಷಿಕ ಆದಾಯ:₹ 127.92 ಕೋಟಿ.
ಬಲ: ಆಕ್ರಮಣಕಾರಿ ಶೈಲಿಯ ಆಟದ ಮೂಲಕ ಗಮನ ಸೆಳೆದವರು. ಎದುರಾಳಿ ರಕ್ಷಣಾ ವ್ಯೂಹವನ್ನು ಭೇದಿಸಿ ಚಾಕಚಕ್ಯತೆಯಿಂದ ಚೆಂಡನ್ನು ಗುರಿ ತಲುಪಿಸಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT