ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಾಲ್‌ ನಿರ್ಮಾಣ: ಈಡೇರದ ಬೇಡಿಕೆ

ವಾರ್ಡ್‌ ನಂಬರ್ 11ರ ವ್ಯಾಪ್ತಿಯ ನಿವಾಸಿಗಳ ಯಾತನಾಮಯ ಬದುಕು
Last Updated 11 ಜೂನ್ 2018, 4:02 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರದ ದಕ್ಷಿಣ ಭಾಗದ ಕೊನೆಯಲ್ಲಿರುವ ಈ ವಾರ್ಡ್‌ನಲ್ಲಿ ಬಹುತೇಕ ಕಡೆ ಚರಂಡಿಗಳಿಲ್ಲ. ಕೆರೆಗಳ ನಿರ್ಲಕ್ಷ್ಯ, ಬಳ್ಳಾರಿ ನಾಲಾ ಪಕ್ಕದ ನಿವಾಸಿಗಳ ಸ್ಲಂ ನಿವಾಸಿಗಳ ಯಾತನಾಮಯ ಬದುಕು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮಳೆಗಾಲದಲ್ಲಿ ನಾಲಾ ಪ್ರವಾಹ ಹಾಗೂ ಮಾಲಿನ್ಯದ ಸಮಸ್ಯೆಗಳು ಕಾಡುತ್ತಿವೆ.

‘ಅನಗೋಳ– ಅಲಾರವಾಡ ಮಧ್ಯದ ಚರಂಡಿ ನಿರ್ಮಾಣದ ಬೇಡಿಕೆಗೆ ದಶಕದಿಂದ ಪರಿಹಾರ ಸಿಕ್ಕಿಲ್ಲ. ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು ಹಾಗೂ ಕೆನಾಲ್‌ನ್ನು ನಾಲಾ ಪಕ್ಕದ ಗದ್ದೆಗಳಿಗಿಂತ ಸ್ವಲ್ಪ ಕೆಳಮಟ್ಟದಲ್ಲಿ ನಿರ್ಮಿಸಿ, ನೀರಿನ ಪ್ರವಾಹವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಹಲಗಾ ಬಳಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸಿ ಎಂಬ ಬೇಡಿಕೆಯೂ ಈಡೇರಿಲ್ಲ’ ಎಂದು ಸಾಯಿನಗರ ನಿವಾಸಿ ದಾದಾ ಪಾಟೀಲ ಹೇಳಿದರು.

ಕಡಿಮೆ ಹಣದಲ್ಲಿ ಜಾಗ ಖರೀದಿಸಿ, ವಾಸಿಸಲು ಸೂರು ಕಟ್ಟಿಕೊಂಡಿರುವ ಬಡ ಜನತೆಗೆ ಬಳ್ಳಾರಿ ನಾಲಾ ಮಾಲಿನ್ಯವು ಶಾಪವಾಗಿ ಪರಿಗಣಿಸಿದೆ. ನಿವಾಸಿಗಳಿಗೆ ತಾವು ವಾಸಿಸುವ ಮನೆಯು ನಿರ್ಮಿಸಿಕೊಳ್ಳುವಾಗಿರುವ ಖುಷಿಯನ್ನು ಹಾಳು ಮಾಡಿದೆ.

ಮಂಗಾಯಿ ನಗರದ ಐತಿಹಾಸಿಕ ಎರಡು ಕೆರೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸಾಮಾನ್ಯವಾಗಿ ಗ್ರಾಮೀಣ‍ಪ್ರ ದೇಶವನ್ನೇ ಹೊಂದಿರುವ ಈ ಭಾಗದಲ್ಲಿ ದನಕರುಗಳ ಸಾಕಾಣಿಕೆ ಪ್ರಮುಖ ಕಸಬು ಆಗಿದೆ. ದನಕರುಗಳಿಗೆ ಒಂದು ಕೆರೆ ಬಳಸಲಾಗುತ್ತಿದೆ. ರೈತರೇ ಇದನ್ನು ಸಂರಕ್ಷಣೆ ಮಾಡಿಕೊಂಡಿದ್ದಾರೆ. ಆದರೆ, ಕೆರೆಯಲ್ಲಿ ಬೆಳೆದಿರುವ ಕಸ ಕಂಟಿಗಳಿಂದ ಕೆರೆಗೆ ಇಳಿಯಲು ಭಯ ಪಡುವ ಸನ್ನಿವೇಶ ಇಲ್ಲಿದೆ. ಅದನ್ನು ನವೀಕರಿಸಬೇಕು ಎಂಬ ಮನವಿಗೆ ಮಹಾನಗರ ಪಾಲಿಕೆಯು ಒಪ್ಪಿದೆ. ಆದರೆ, ನಿಧಿ ಕೊರತೆಯ ನೆಪದಲ್ಲಿ ನನೆಗುದಿಗೆ ಬೀಳುವಂತೆ ಮಾಡಲಾಗಿದೆ ಎಂದು ಕೃಷಿಕರಾದ ಅಶೋಕ ಶಹಪುರ ಹೇಳಿದರು.

ಈ ಭಾಗದ ಇನ್ನೊಂದು ಕೆರೆ ಕೇವಲ ಚರಂಡಿ ನೀರಿನ ತಾಣವಾಗಿದೆ. ಸುತ್ತಲಿನ ಭಾಗದ ಚರಂಡಿ ನೀರು ಹರಿದು ಈ ಕೆರೆ ತುಂಬಿದೆ. ಸುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಬೀರಿದೆ. ಕೆರೆಗೆ ಸೇರುವ ಹೊಲಸು ನೀರನ್ನು ಪ್ರತ್ಯೇಕ ಕಾಲುವೆ ಮೂಲಕ ಬಳ್ಳಾರಿ ನಾಲಾಕ್ಕೆ ಸೇರಿಸಿದರೆ ಕೆರೆಯಲ್ಲಿ ಶುದ್ಧ ನೀರನ್ನು ಕಾಣಬಹುದು. ಕಳೆದ ಐದು ವರ್ಷದಿಂದ ಈ ಯೋಜನೆ ಕಡತದಿಂದ ಹೊರಗೆ ಬಂದಿಲ್ಲ ಎಂದು ಅವರು ಹೇಳಿದರು.

ಇಲ್ಲಿಯ ನಿವಾಸಿಗಳಿಗೆ ಅತ್ಯಂತ ಸೂಕ್ತವಾಗುವ ಸರ್ಕಾರಿ ಆಸ್ಪತ್ರೆ ಜೈಲ್‌ ಶಾಲೆಯ ಪಕ್ಕದಲ್ಲಿದೆ. ಆದರೆ, ಅದಕ್ಕೆ ಆಧುನಿಕ ಸೌಲಭ್ಯಗಳ ಹಾಗೂ ಸಿಬ್ಬಂದಿ ಕೊರತೆ ಇದೆ. ಸರ್ಕಾರಿ ಆಸ್ಪತ್ರೆಯ ಸೇವೆ ನಾಗರಿಕರಿಗೆ ಇಲ್ಲದಾಗಿದೆ. ಈ ಆಸ್ಪತ್ರೆಯನ್ನು 100 ಹಾಸಿಗೆಗೆ ಪರಿವರ್ತಿಸಿ, ಸುಸಜ್ಜಿತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರೂ ಅಧಿಕಾರಿಗಳು, ಹಿಂದಿನ ಶಾಸಕರು ಆಸಕ್ತಿ ತೋರಿಸಿಲ್ಲ ಎಂದು ಅಪ್ಪಾಸಾಬ ಹಿರೋಜಿ ಹೇಳಿದರು.

ಸದಸ್ಯರ ಅಭಿಪ್ರಾಯ: ‘₹ 10 ಲಕ್ಷ ಕೊಡ್ತೀವಿ, ಕೆರೆಗಳನ್ನು ದುರಸ್ಥಿಗೊಳಿಸಿಕೊಳ್ಳಿ ಎಂದು ಅಧಿಕಾರಿಗಳು ಹೇಳ್ತಾರೆ, ಆದರೆ, ಈ ಹಣದಲ್ಲಿ ಅದು ಸಾಧ್ಯವಿಲ್ಲ. ಶಾಸಕರು, ಸಂಸದರು ಸಹಾಯ ಮಾಡಿದರೆ ಕೆರೆಗಳಿಗೆ ಮರುಜೀವ ತುಂಬಬಹುದು’ ಎಂದು ಮಹಾನಗರ ಪಾಲಿಕೆ ಸದಸ್ಯ ಸಂಜಯ ಸವ್ವಾಸೇರಿ ಹೇಳಿದರು.

ನಾಲ್ಕು ವರ್ಷದಲ್ಲಿ ಈ ವಾರ್ಡ್‌ನಲ್ಲಿ 16 ಕೊಳವೆ ಬಾವಿ ಕೊರೆಯಿಸಿ, ಒಂದು ಬಾವಿಗೆ ಪಂಪಸೆಟ್‌ ಅಳವಡಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಸಾಯಿನಗರದಿಂದ ಬ್ರಹ್ಮನಗರದವರೆಗೆ ಸುಮಾರು 2 ಕಿಮಿ ಉದ್ದದ ಪೈಪ್‌ ಅಳವಡಿಕೆಯಾಗಿದೆ. ನೀರು ಪೂರೈಕೆಗೆ ಜಲಮಂಡಳಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ಈ ವಾರ್ಡ್‌ಗೆ ಅಮೃತ ಸಿಟಿ ಯೋಜನೆ ಹಾಗೂ ಸ್ಮಾರ್ಟ್‌ಸಿಟಿ ಯೋಜನೆಯಡಿ ಕವಡೆಕಾಸೂ ಸಿಕ್ಕಿಲ್ಲ ಎಂದು ಅವರು ಅಸಮಾದಾನ ವ್ಯಕ್ತಪಡಿಸಿದರು.

11 ನೇ ವಾರ್ಡ್‌ ವ್ಯಾಪ್ತಿ

ರಾಜವಾಡಾ ಕಂಪೌಂಡ್‌, ವಿಠಲದೇವರ ಮಂದಿರ, ಆನಂದ ಮಾರ್ಗ, ವಜೆ ಗಲ್ಲಿ, ಸಿದ್ಧಿವಿನಾಯಕ ಮಾರ್ಗ, ವಿಷ್ಣು ಗಲ್ಲಿ, ವಿಠಲದೇವ ಗಲ್ಲಿ, ದಾಮಣೆ ರೋಡ್‌, ಮಂಗಾಯಿ ಪಾಟೀಲ ಗಲ್ಲಿ, ಸಾಯಿ ಕಾಲೊನಿ.

ಆರ್‌.ಎಲ್‌. ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT