ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರುತ್ತಿದ್ದಾರೆ ಕಲಾಂ!

Last Updated 6 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಕಲಾಂ ಬೆಳ್ಳಿತೆರೆಯ ಮೇಲೆ ಬರುವುದಕ್ಕೆ ಎಲ್ಲ ಹಾದಿಯೂ ಸುಗಮವಾಗಿದೆ. ಡಾ.ಅಬ್ದುಲ್‌ ಕಲಾಂಎಂಬ ಹೆಸರಿನ ಜೀವನಚರಿತ್ರೆ ಆಧರಿಸಿದ ಹೊಸ ಸಿನಿಮಾ, ಡಿಸೆಂಬರ್‌ ಮೊದಲ ವಾರ ತೆರೆಗೆ ಬರಲಿದೆ. ಬೋಮನ್‌ ಇರಾನಿ ಈ ಚಿತ್ರದಲ್ಲಿ ವಿಭಿನ್ನವಾಗಿ ಪಾತ್ರ ನಿರ್ವಹಿಸಿದ್ದಾರೆ.

ಮಿಸೈಲ್‌ ಮ್ಯಾನ್‌ ಎಂದೇ ಹೆಸರುವಾಸಿಯಾಗಿ ಕೊನೆಗೆ ಭಾರತದ ರಾಷ್ಟ್ರಪತಿ ಹುದ್ದೆಗೇರಿದ ಕಲಾಂ ಸಾಹೇಬರ ಕಥೆಯನ್ನು ನಿರ್ದೇಶಿಸಿದವರು ಅನಿಲ್‌ ಸುಂಕರ. ಕಲಾಂ ಅವರ ಬಾಲ್ಯದಿಂದ ಕಥೆ ಶುರುವಾಗಿ ಯಶಸ್ಸಿನ ತುತ್ತ ತುದಿಗೇರಿದ ಅಲ್ಲಿವರೆಗೆ ಇದೆಯಂತೆ. ಅದರಲ್ಲೂ ಪೋಖ್ರಾನ್‌ ಪರಮಾಣು ಪರೀಕ್ಷೆಯ ರಹಸ್ಯವನ್ನು ಕಲಾಂ ಕಾಪಾಡಿಕೊಂಡ ಬಗ್ಗೆ ಹೆಚ್ಚು ವಿವರಗಳಿವೆಯಂತೆ.

2012ರಲ್ಲಿ ಐ ಆ್ಯಮ್‌ ಕಲಾಂ ಎನ್ನುವ ಮಕ್ಕಳ ಚಿತ್ರವೊಂದು ಬಂದಿತ್ತು. ಆ ಚಿತ್ರಕ್ಕೂ ಕಲಾಂ ಅವರ ಸಾಧನೆಯೇ ಸ್ಫೂರ್ತಿಯಾಗಿತ್ತು. ಈಗ ಜೀವನ ಚರಿತ್ರೆ ಆಧರಿಸಿದ ಸಾಹಸ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT