ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ನಿರ್ಮಿಸಿದ ಸೇತುವೆಗಳು

Last Updated 15 ಜೂನ್ 2018, 13:13 IST
ಅಕ್ಷರ ಗಾತ್ರ

ಅದ್ಭುತ ಎನಿಸುವ ಮತ್ತು ಬೆರಗುಗೊಳಿಸುವ ಹಲವು ನಿರ್ಮಾಣಗಳನ್ನು ಮಾನವ ನಿರ್ಮಿಸಿದ್ದಾನೆ. ಅದರಲ್ಲೂ ಆಶ್ಚರ್ಯಕ್ಕೆ ಗುರಿ ಮಾಡುವ ರೀತಿ ನದಿ, ಸಮುದ್ರಗಳಿಗೆ ಅಡ್ಡಲಾಗಿ ಬೃಹತ್ ಸೇತುವೆಗಳನ್ನು ನಿರ್ಮಿಸಿದ್ದಾನೆ. ಆದರೆ ಮಾನವನ ಊಹೆಗೂ ನಿಲುಕದಂತೆ ಪ್ರಕೃತಿ ಕೂಡ ಸುಂದರ ಸೇತುವೆಗಳನ್ನು ನಿರ್ಮಿಸಿದೆ. ಅಂತಹ ಕೆಲವು ಸಹಜ ಸೇತುವೆಗಳ ಮಾಹಿತಿ ಇಲ್ಲಿದೆ.

ಫೇರಿ ಬ್ರಿಡ್ಜ್‌
ಇದು ಚೀನಾದ ಗುಂವಾಂಗ್ಷಿ ಪ್ರಾಂತ್ಯದಿಂದ ಸುಮಾರು 40 ಕಿ.ಮೀ ದೂರದಲ್ಲಿ, ಫೆಂಗ್‌ಷಾನ್ ಪ್ರದೇಶದ ವಾಯವ್ಯ ದಿಕ್ಕಿನಲ್ಲಿ ಹರಿಯುವ ಬುಲಿಲು ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಾಣವಾಗಿದೆ. 2010ರಲ್ಲಿ ಈ ಸೇತೆವುಯನ್ನು ಮೊದಲ ಬಾರಿಗೆ ಅಳತೆ ಮಾಡಲಾಯಿತು. ಇದು ಒಟ್ಟು 415 ಅಡಿ ಉದ್ದ ಇದೆ.

*


ಜಿಯಾಂಗ್‌ಚೌ ಇಮ್ಮೊರ್ಟಲ್ ಬ್ರಿಡ್ಜ್‌ 
ಇದು ಕೂಡ ಚೀನಾದ ಗುಂವಾಗ್ಷಿ ಪ್ರಾಂತ್ಯದ ಜಿಯಾಂಗ್‌ಚೌ ಗ್ರಾಮದಿಂದ 2 ಕಿ.ಮೀ ದೂರದಲ್ಲಿದೆ. ಫೆಂಗ್ಷಾನ್ ಪ್ರದೇಶದಿಂದ 30 ಕಿ.ಮೀ ದೂರದಲ್ಲಿದೆ. 340 ಅಡಿ ಉದ್ದ ಇರುವ ಈ ಸೇತುವೆ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಪ್ರಕೃತಿ ಸಹಜವಾಗಿ ನಿರ್ಮಾಣವಾಗಿರುವ ಈ ಸೇತುವೆ ಅಂದ ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

*

ಲ್ಯಾಂಡ್‌ ಸ್ಕೇಪ್ ಆರ್ಚ್‌
ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಒಂದಾದ ಯುಟಾ ರಾಜ್ಯದಲ್ಲಿ ಈ ಸೇತುವೆ ನಿರ್ಮಾಣವಾಗಿದೆ. ದೊಡ್ಡ ಬಂಡೆಗಲ್ಲಿನ ನಡುವಿನ ಭಾಗ ಸವೆದು ಈ ಸೇತುವೆ ನಿರ್ಮಾಣವಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟು 290 ಅಡಿ ಉದ್ದ ಇರುವೆ ಈ ಸೇತುವೆಯ ಕಲ್ಲುಬಂಡೆ ಕೇವಲ 6 ಅಡಿ ದಪ್ಪ ಇದೆ. ಆಶ್ಚರ್ಯಕ್ಕೆ ಗುರಿ ಮಾಡುವ ಹಲವು ಪ್ರಕೃತಿ ಸಹಜ ನಿರ್ಮಾಣಗಳು ಇಲ್ಲಿ ಇರುವುದರಿಂದ ಈ ಪ್ರದೇಶಕ್ಕೆ ಡೇವಿಲ್ಸ್‌ ಗಾರ್ಡನ್‌ ಎಂತಲೂ ಕರೆಯುತ್ತಾರೆ. ಈ ನಿರ್ಮಾಣಗಲನ್ನು ವೀಕ್ಷಿಸಲು ಹಲವು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

*

ಕಾಮನಬಿಲ್ಲು ಸೇತುವೆ (ರೇನ್‌ಬೊ ಬ್ರಿಡ್ಜ್)
ನದಿಯ ತೊರೆಯೊಂದಕ್ಕೆ ಅಡ್ಡಲಾಗಿ ನಿರ್ಮಾಣವಾಗಿರುವ ಈ ಸೇತುವೆ ನೆಲಮಟ್ಟದಿಂದ 1,200 ಅಡಿ ಎತ್ತರದಲ್ಲಿದೆ. ಆಕಾಶದಲ್ಲಿ ಕಾಮನಬಿಲ್ಲು ಮೂಡಿದಂತೆ ಕಾಣುವುದರಿಂದ ಇದಕ್ಕೆ ರೇನ್‌ಬೊ ಬ್ರಿಡ್ಚ್‌ ಎಂದು ಕರೆಯುತ್ತಾರೆ. ಇದು ಕೂಡ ಅಮೆರಿಕದ ಯುಟಾ ಪ್ರದೇಶದ ಪೌವೆಲ್ ಸರೋವರಕ್ಕೆ ಸನಿಹದಲ್ಲಿದೆ. ಈ ಸೇತುವೆ 234 ಅಡಿ ಉದ್ದವಿದ್ದು, 245 ಅಡಿ ಎತ್ತರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT