ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಸಮಸ್ಯೆ: ಜನರ ಪರದಾಟ

Last Updated 16 ಜೂನ್ 2018, 11:27 IST
ಅಕ್ಷರ ಗಾತ್ರ

ಕೆಂಭಾವಿ: ಪಟ್ಟಣದ ನಾಡ ಕಚೇರಿಯಲ್ಲಿ ಕಂಪ್ಯೂಟರ್‌ಗಳ ಸಮಸ್ಯೆಯಿಂದಾಗಿ ಕಚೇರಿ ಸಿಬ್ಬಂದಿಗೆ ಹಾಗೂ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ.

ಕಚೇರಿಯಲ್ಲಿ ಮೂರು ಕಂಪ್ಯೂಟರ್‌ಗಳು ಹಾಳಾಗಿದ್ದು, ಇದುವರಿಗೂ ಸರಿಪಡಿಸಿಲ್ಲ. ಕೇವಲ ಒಂದು ಕಂಪ್ಯೂಟರ್‌ನಲ್ಲಿಯೇ ಕೆಲಸ ಮಾಡಲಾಗುತ್ತಿದೆ. ಇದರಿಂದಾಗಿ ನಾಡ ಕಚೇರಿಗೆ ಬರುವ ಜನರಿಗೆ ಸಕಾಲಕ್ಕೆ ಯಾವುದೇ ದಾಖಲೆಗಳು ದೊರೆಯದೇ ಪರದಾಡುವಂತಾಗಿದೆ.

ಶಾಲೆ, ಕಾಲೇಜುಗಳು ಆರಂಭವಾಗಿವೆ. ರೈತರು ಬಿತ್ತನೆಗೆ ಸಿದ್ಧರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಜಾತಿ, ಆದಾಯ ಹಾಗೂ ವಾಸಸ್ಥಳ ಪ್ರಮಾಣ ಪತ್ರಗಳು ಸಕಾಲಕ್ಕೆ ಸಿಗುತ್ತಿಲ್ಲ. ರೈತರು ಬಿತ್ತನೆಬೀಜ, ಗೊಬ್ಬರವನ್ನು ರಿಯಾಯಿತಿಯಲ್ಲಿ ಖರೀದಿಸಲು ಜಮೀನಿನ ಪಹಣೆ ಅಗತ್ಯವಿದೆ. ಕಂಪ್ಯೂಟರ್‌ ಸಮಸ್ಯೆಯಿಂದಾಗಿ ನಾಡಕಚೇರಿಯಲ್ಲಿ ಪಹಣೆ ಕೂಡ ಸಕಾಲಕ್ಕೆ ಸಿಗುತ್ತಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.

‘ಸರ್ವರ್‌ ಸಮಸ್ಯೆಯಿಂದಾಗಿ ನೆಟ್‌ವರ್ಕ್‌ ಸಿಗುತ್ತಿಲ್ಲ. ಒಂದೇ ಕಂಪ್ಯೂಟರ್‌ ಇರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ದಾಖಲೆಗಳನ್ನು ನೀಡಲು ತೊಂದರೆಯಾಗುತ್ತಿದೆ’ ಎಂದು ನಾಡ ಕಚೇರಿ ಸಿಬ್ಬಂದಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT