ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಮಲ್ಲಗಂಬ ದಿನಾಚರಣೆ

ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟನೆ
Last Updated 17 ಜೂನ್ 2018, 12:48 IST
ಅಕ್ಷರ ಗಾತ್ರ

ಸಿರಿಗೆರೆ: ವಿದ್ಯಾರ್ಥಿಗಳು ಆಸಕ್ತಿಗನುಸಾರ ಸುಸಂಸ್ಕೃತ ಜೀವನ ರೂಪಿಸಿಕೊಳ್ಳಲು ಕಲೆ ಪೂರಕ ವಾಗಬಲ್ಲದು. ಮಲ್ಲ ಕಂಬದಂತಹ ಕಲೆ ದೈಹಿಕಕ್ಷಮತೆ ಜೊತೆಗೆ ಆತ್ಮರಕ್ಷಣೆಗೆ ಸಹಕಾರಿ ಎಂದು ಉಪನ್ಯಾಸಕ ರಾಜಶೇಖರಯ್ಯ ಅಭಿಪ್ರಾಯಪಟ್ಟರು.

ಎಂ.ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಲ್ಲಕಂಬ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ವಿದ್ಯಾರ್ಥಿಗಳಿಗೆ ಜ್ಞಾನ ಪ್ರಸರಣದ ಜತೆಗೆ ಸಾಂಸ್ಕೃತಿಕ ಹಾಗೂ ಜನಪದ ಕಲೆಗಳನ್ನು ಉಳಿಸಿ–ಬೆಳೆಸುವಲ್ಲಿ ತರಳಬಾಳು ವಿದ್ಯಾಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. ಆಧುನಿಕ ಯುಗದಲ್ಲೂ ಇಂತಹ ಕಲೆಗಳನ್ನು ಪ್ರೋತ್ಸಾಹಿ ಸುತ್ತಿ ರುವುದು ಸಂತಸದ ವಿಚಾರ ಎಂದರು.

ತರಬೇತುದಾರ ಮಂಜುನಾಥ ಬಿ.ಕೊಳಚಿ ಮಾತನಾಡಿ, ‘ ಜಗತ್ತಿನಲ್ಲಿ ಯಾವ ದೇಶದಲ್ಲೂ ಇರಲಾರದಷ್ಟು ಕಲಾಪ್ರಕಾರಗಳು ನಮ್ಮಲ್ಲಿವೆ. ದೇಸಿಯ ಕಲೆಗಳನ್ನು ಬೆಳೆಸಬೇಕು’ ಎಂದರು.

ಮಲ್ಲಕಂಬದ ಪರಿಕರಗಳಿಗೆ ಪೂಜಾ ಕಾರ್ಯವನ್ನು ಆಯೋಜಿಸಲಾಗಿತ್ತು. ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಚ್.ಮಂಜುನಾಥ, ಎಸ್‌.ಟಿ. ಉಮೇಶ್‌, ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT