ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಸೌರಭ್‌, ಉತ್ತೇಜಿತಾಗೆ ಪ್ರಶಸ್ತಿ

Last Updated 17 ಜೂನ್ 2018, 18:03 IST
ಅಕ್ಷರ ಗಾತ್ರ

ಬೆಂಗಳೂರು: ಪರಿಣಾಮಕಾರಿ ಆಟ ಆಡಿದ ಸೌರಭ್‌ ವರ್ಮಾ ಮತ್ತು ಸಾಯಿ ಉತ್ತೇಜಿತಾ ರಾವ್ ಚುಕ್ಕಾ ಅವರು ಅಖಿಲ ಭಾರತ ಸೀನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಕೆಬಿಎ ಕೋರ್ಟ್ಸ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸೌರಭ್‌ 17–21, 21–14, 21–18ರಲ್ಲಿ ಮಧ್ಯಪ್ರದೇಶದ ಪ್ರತುಲ್‌ ಜೋಷಿ ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ‍ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಎರ ಡನೇ ಶ್ರೇಯಾಂಕಿತೆ ಉತ್ತೇಜಿತಾ 21–15, 7–21, 21–15ರಲ್ಲಿ ತೆಲಂ ಗಾಣದ ರಿತುಪರ್ಣ ದಾಸ್‌ ಅವರನ್ನು ಮಣಿಸಿದರು.

ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಎಂ.ಆರ್‌.ಅರ್ಜುನ್‌ ಮತ್ತು ಶ್ಲೋಕ್‌ ರಾಮಚಂದ್ರನ್‌ 21–14, 21–16ರಲ್ಲಿ ಜಿ.ಕೃಷ್ಣಪ್ರಸಾದ್‌ ಮತ್ತು ಧ್ರುವ ಕಪಿಲಾ ಎದುರು ಗೆದ್ದರು.

ಮಹಿಳೆಯರ ಡಬಲ್ಸ್‌ ವಿಭಾಗದ ಅಂತಿಮ ಘಟ್ಟದ ಹಣಾಹಣಿಯಲ್ಲಿ ರಿತುಪರ್ಣ ಪಾಂಡ ಮತ್ತು ಅರಾತ ಸಾರಾ ಸುನಿಲ್‌ 21–10, 21–12ರಲ್ಲಿ ಸಿಮ್ರನ್‌ ಸಿಂಘಿ ಮತ್ತು ರಿತಿಕಾ ಠಾಕರ್‌ ಅವರನ್ನು ಸೋಲಿಸಿದರು. ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಧ್ರುವ ಕಪಿಲಾ ಮತ್ತು ಮೇಘನಾ ಜಕ್ಕಂಪುಡಿ 19–21, 21–12, 21–9ರಲ್ಲಿ ಅರಾತ ಸಾರಾ ಸುನಿಲ್‌ ಮತ್ತು ಅರುಣ್‌ ಜಾರ್ಜ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT