ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಉಳಿಸಿ ಗುಣಪಡಿಸುವ ‘ಜನೌಷಧಿ’

ಕೆಂಪೇಗೌಡ ವೃತ್ತದ ಬಳಿ ಆರಂಭಗೊಂಡ ಮಳಿಗೆ, ಜನರಿಂದ ಉತ್ತಮ ಪ್ರತಿಕ್ರಿಯೆ
Last Updated 18 ಜೂನ್ 2018, 7:05 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ (ಜೆನೆರಿಕ್‌) ಕೇಂದ್ರವು ಇಲ್ಲಿನ ಕೆಂಪೇಗೌಡ ವೃತ್ತದ ಬಳಿ ಆರಂಭಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನಗರದ ವಿವಿಧ ಮಳಿಗೆ ಮತ್ತು ಆಸ್ಪತ್ರೆಗಳಲ್ಲಿ ದೊರೆಯುವ ಔಷಧಿಗಳ ದರಕ್ಕೆ ಹೋಲಿಸಿದರೆ ಶೇ 50 ರಿಂದ 80ಕ್ಕೂ ಕಡಿಮೆ ದರದಲ್ಲಿ ಎಲ್ಲಾ ರೀತಿಯ ಔಷಧಿಗಳು ಇಲ್ಲಿ ಲಭ್ಯ ಇವೆ.

ಬಹುತೇಕ ಮಳಿಗೆಗಳಲ್ಲಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ತಯಾರಾದ ಔಷಧಿಗಳು ಮಾರಾಟವಾದರೆ, ಇಲ್ಲಿ ಅಂಥ ಸಂಸ್ಥೆಗಳ ಬದಲಾಗಿ ಕಾಯಿಲೆ ಗುಣಪಡಿಸಬಲ್ಲ ಅಂಶಗಳುಳ್ಳ ಔಷಧಿಗಳು ಸಿಗುತ್ತವೆ. ನಗರ ಮತ್ತು ಗ್ರಾಮೀಣ ಪ್ರದೇಶದ ವಾಸಿಗಳು ನಿಧಾನವಾಗಿ ಜನೌಷಧಿ ಕೇಂದ್ರದತ್ತ ಆಸಕ್ತಿ ತಳೆಯುತ್ತಿದ್ದು, ಅತ್ಯಂತ ಕಡಿಮೆ ದರದಲ್ಲಿ ಔಷಧಿ ಸಿಗುವುದು ಮತ್ತು ಹಣ ಉಳಿತಾಯ ಆಗುವುದು ಸಂತಸ ತಂದಿದೆ.

ಜನೌಷಧಿ ಕೇಂದ್ರ ಆರಂಭಿಸುವಂತೆ ಹಲವು ವರ್ಷಗಳಿಂದ ಇದ್ದ ಬೇಡಿಕೆ ಒಂದೆಡೆ ಈಡೇರಿದ್ದರೆ, ಮತ್ತೊಂದೆಡೆ ಎಲ್ಲ ರೀತಿಯ ಕಾಯಿಲೆ ಮತ್ತು ಅನಾರೋಗ್ಯ ಸಮಸ್ಯೆಗಳಿಗೆ ಔಷಧಿ ಲಭ್ಯ ಎಂಬುದು ಹೆಚ್ಚಿನ ಜನರಿಗೆ ಮನಗಾಣ
ಬೇಕಿದೆ. ಈ ಮಹತ್ವದ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರದ ಸಿಬ್ಬಂದಿ ಜಾಗೃತಿ ಕಾರ್ಯದಲ್ಲಿ ತೊಡಗಿಸಿ
ಕೊಂಡಿದ್ದಾರೆ ಎಂದು ಕೇಂದ್ರ ಮಾಲೀಕ ಕೆ.ಎಸ್. ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಆರಂಭಗೊಂಡು ಮೂರು ತಿಂಗಳಾಗಿದ್ದು, ಔಷಧಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿದ್ದೇವೆ. ಕರಪತ್ರಗಳ ವಿತರಣೆ, ಜಾಹೀರಾತು, ಸ್ನೇಹಿತರು ಮತ್ತು ಆಪ್ತರ ಮೂಲಕ ಎಲ್ಲರಿಗೂ ಅತ್ಯಂತ ಕಡಿಮೆ ದರದಲ್ಲಿ ಔಷಧಿ ಸಿಗುವುದರ ವಿವರಣೆ ನೀಡುತ್ತಿದ್ದೇನೆ ಎಂದರು.

ಮಧುಮೇಹ ಔಷಧಿಗೆ ಬೇಡಿಕೆ: ರಾಮನಗರದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಕಾಯಿಲೆಗೆ ಸಂಬಂಧಿಸಿದ ಔಷಧಿಗೆ ಹೆಚ್ಚಿನ ಬೇಡಿಕೆ ಇದೆ. ಇನ್ಸುಲಿನ್‌ ಸೇರಿದಂತೆ ಅಗತ್ಯ ಔಷಧಿಗಳನ್ನು ಕಾಯಿಲೆ ಪೀಡಿತರು ಅಥವಾ ಸಂಬಂಧಿಕರು ಇಲ್ಲಿಂದ ತೆಗೆದುಕೊಂಡು ಹೋಗುತ್ತಾರೆ ಎಂದು ಅವರು ಹೇಳಿದರು.

ಕಡಿಮೆ ದರದಲ್ಲಿ ಔಷಧಿ ಸಿಗುವ ಕಾರಣ ಒಂದು ಅಥವಾ ಎರಡು ತಿಂಗಳಿಗೆ ಸಾಕಾಗುವಷ್ಟ ಔಷಧಿಗಳನ್ನು ಖರೀದಿಸುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಹಣ ಉಳಿತಾಯವಾಗುವ ಕಾರಣ ಆ ಹಣವನ್ನು ಬೇರೆಡೆ ವಿನಿಯೋಗಿಸುತ್ತಿರುವ ಸಮಾಧಾನ ಅವರಿಗಿದೆ ಎಂದರು.

ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ವತಿಯಿಂದ ಜಾರಿಗೆ ಜನ ಔಷಧಿ ಮಳಿಗೆಯಲ್ಲಿ ಎಲ್ಲಾ ತರಹ ಔಷಧಿಗಳು ದೊರೆಯುತ್ತವೆ. ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲಿ ಎಲ್ಲ ತರಹ ಔಷಧಿಗಳು ಬಡವರಿಗೆ ಎಟಕುವ ಬೆಲೆಗಳಲ್ಲಿ ಔಷಧಿಗಳು ಲಭ್ಯವಿರುವಂತಾಗಿದೆ. ಹಾಗಾಗಿ ಔಷಧಿಗಳು ಸಿಗಲಿಲ್ಲ ಅಥವಾ ಔಷಧಿ ಕರತೆಯಿಂದಾಗಿ ಬಡವರು ಪ್ರಾಣ ಕಳೆದುಕೊಳ್ಳುವಂತೆ ಆಗಬಾರದು ಎಂದರು.

ಪ್ರಮಾಣೀಕರಿಸಿದ ಔಷಧಿ ಲಭ್ಯ: ಔಷಧಿ ಪಡೆಯಲು ರೋಗಕ್ಕೆ ಸಂಬಂಧಿಸಿದಂತೆ ವೈದ್ಯರು ನೀಡಿರುವ ಚೀಟಿಯನ್ನು ಜನೌಷಧಿ ಕೇಂದ್ರದ ಸಿಬ್ಬಂದಿಗೆ ತೋರಿಸಬೇಕು. ಔಷಧಿಯೊಳಗಿನ ಅಂಶಗಳನ್ನು ಪರಿಶೀಲಿಸುವ ಅವರು ಅದೇ ಅಂಶಗಳುಳ್ಳ ಔಷಧಿಯನ್ನು ನೀಡುತ್ತಾರೆ. ಕೇಂದ್ರ ಸರ್ಕಾರದ ಸೂಚನೆ ಅನ್ವಯ ಪ್ರಮಾಣೀಕರಿಸಿ, ಪರಿಶೀಲಿಸಿ ಔಷಧಿ ವಿತರಿಸಲಾಗುತ್ತದೆ.

ಮಧುಮೇಹ, ರಕ್ತದೊತ್ತಡ, ಹೃದ್ರೋಗ, ಮಂಡಿನೋವು ಅನಾರೋಗ್ಯ ಸಮಸ್ಯೆಗಳಿಗೆ ಇಲ್ಲಿ ಔಷಧಿ ಸಿಗುತ್ತವೆ. ಇಂಜೆಕ್ಷನ್, ಇನ್ಸುಲಿನ್‌ ಮುಂತಾದವು ಕಡಿಮೆ ದರದಲ್ಲಿ ಸಿಗುತ್ತವೆ
- ಕೆ.ಎಸ್. ಕೃಷ್ಣ ಕೇಂದ್ರ, ಮಾಲೀಕ

200 ಬಗೆಯ ಔಷಧಿಗಳು l ಲಭ್ಯ800 ಔಷಧಿಗಳು

ಹಂತಹಂತವಾಗಿ ಲಭ್ಯ
ಪ್ರತಿಷ್ಠಿತ ಕಂಪನಿಗಳ

ಔಷಧಿಗಳಿಗೆ ಸೆಡ್ಡು

–ಎಸ್.ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT