ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ಭಯೋತ್ಪಾದನೆ ಖಂಡನೀಯ, ಭಯೋತ್ಪಾದನೆಗೆ ಧರ್ಮ ಇಲ್ಲ’: ಸಿ.ಎಂ.ಇಬ್ರಾಹಿಂ

'ಪ್ರಮೋದ್ ಮುತಾಲಿಕ್ ಎಂಥವರು ಜಗತ್ತಿಗೇ ಗೊತ್ತಿದೆ'
Last Updated 18 ಜೂನ್ 2018, 15:40 IST
ಅಕ್ಷರ ಗಾತ್ರ

ಬೆಂಗಳೂರು: 'ನನಗೂ ಐಎಸ್ಐಗೂ ಸಂಬಂಧ ಇಲ್ಲ. ಪ್ರಮೋದ್ ಮುತಾಲಿಕ್ ಎಂಥವರು ಎಂಬುದು ಜಗತ್ತಿಗೇ ಗೊತ್ತಿದೆ' ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

'ಭಯೋತ್ವಾದನೆಗೆ ಧರ್ಮ ಇಲ್ಲ. ಇಸ್ಲಾಂ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆ, ಕ್ರಿಶ್ಚಿಯನ್ ಭಯೋತ್ಪಾದನೆ ಎಂಬುದಿಲ್ಲ. ಎಲ್ಲ ರೀತಿಯ ಭಯೋತ್ಪಾದನೆ ಖಂಡನೀಯ' ಎಂದರು.

ಗೌರಿ ಲಂಕೇಶ್ ಹತ್ಯೆಯಲ್ಲಿ ತಮ್ಮ ಹೆಸರನ್ನು ಇಬ್ರಾಹಿಂ ಪ್ರಸ್ತಾಪಿಸಿದ ಬಗ್ಗೆ ಮುತಾಲಿಕ್ ಖಂಡಿಸುವಾಗ 'ಐಎಸ್ಐ ಜತೆ ಇಬ್ರಾಹಿಂಗೆ ನಂಟು ಇದೆ' ಎಂದು ಹೇಳಿದ್ದರು.

ಸದಸ್ಯರ ಪ್ರಮಾಣ ವಚನ ಸ್ವೀಕಾರ

ವಿಧಾನ ಪರಿಷತ್ತಿಗೆ ಹೊಸದಾಗಿ ಆಯ್ಕೆಯಾಗಿರುವ 10 ಸದಸ್ಯರಿಗೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸೋಮವಾರ ಪ್ರಮಾಣ ವಚನ ಬೋಧಿಸಿದರು.

ಬಿಜೆಪಿಯ ರುದ್ರೇಗೌಡ, ಎನ್.ರವಿಕುಮಾರ್, ತೇಜಸ್ವಿನಿಗೌಡ, ಕೆ.ಪಿ.ನಂಜುಂಡಿ, ರಘುನಾಥ ರಾವ್ ಮಲ್ಕಾಪುರೆ, ಕಾಂಗ್ರೆಸ್ ನ ಹರೀಶ್ ಕುಮಾರ್ ಕೆ, ಕೆ.ಗೋವಿಂದರಾಜ್, ಸಿ.ಎಂ.ಇಬ್ರಾಹಿಂ, ಜೆಡಿಎಸ್‌ನ ಬಿ.ಎಂ.ಫಾರೂಕ್, ಎಸ್.ಎಲ್.ಧರ್ಮೇಗೌಡ ಪ್ರಮಾಣ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT