ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯೊಮೆಟ್ರಿಕ್ ಬೇಕು

Last Updated 18 ಜೂನ್ 2018, 17:19 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳಲ್ಲೂ ಬಯೊಮೆಟ್ರಿಕ್‌ ವ್ಯವಸ್ಥೆ ಜಾರಿ ಮಾಡಲು ಮುಂದಾಗಿರುವ ಸರ್ಕಾರದ ಕ್ರಮ ಸ್ವಾಗತಾರ್ಹವಾದುದು.

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳನ್ನು ಅವಲಂಬಿಸುತ್ತಾರೆ ಎಂಬುದು ಈಗ ಸರ್ವ ವಿದಿತ. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ, ಅವರ ಕನಸುಗಳನ್ನು ನನಸಾಗಿಸಬೇಕು ಎಂಬ ಆಸೆ ಈ ಮಕ್ಕಳ ಪಾಲಕರಲ್ಲೂ ಇರುತ್ತದೆ. ಆದರೆ ಸರ್ಕಾರಿ ಶಾಲೆಗಳ ಕೆಲವು ಶಿಕ್ಷಕರು ತಮ್ಮ ವೃತ್ತಿಯನ್ನು ಅರೆಕಾಲಿಕ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಅಂಥವರು ಶಾಲೆಯ ಕೆಲಸವನ್ನು ಬದಿಗಿಟ್ಟು, ಬೇರೆಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲೆಗೆ ಬರುವುದೇ ಅಪರೂಪವಾಗಿದೆ. ಕೆಲವೊಬ್ಬರು ರಾಜಕೀಯ ನಾಯಕರ ಹಿಂಬಾಲಕರಾಗಿ ಅವರ ಹಿಂದೆ–ಮುಂದೆ ಓಡಾಡುತ್ತಾರೆ.

ಮಕ್ಕಳ ಭವಿಷ್ಯವು ಶಿಕ್ಷಣದ ಮೇಲೆಯೇ ನಿಂತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಇಂಥ ಶಿಕ್ಷಕರನ್ನು ನಿಯಂತ್ರಿಸುವುದು ಅಗತ್ಯ. ಬಯೊಮೆಟ್ರಿಕ್ ವ್ಯವಸ್ಥೆ ಜಾರಿಗೆ ಬಂದರೆ ಶಾಲೆಗೆ ಬರುವುದು ಎಲ್ಲ ಶಿಕ್ಷಕರಿಗೆ ಅನಿವಾರ್ಯವಾಗುತ್ತದೆ. ಆ ಮೂಲಕ ಮಕ್ಕಳ ಶೈಕ್ಷಣಿಕ ಭವಿಷ್ಯವೂ ಉತ್ತಮಗೊಳ್ಳುತ್ತದೆ.
-ಮಧುವರ್ಷಿಣಿ ಎಲ್. ಎಂ., ಲಕ್ಕವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT