ವಿಶ್ವ ಕ್ರಿಕೆಟ್‌ನಲ್ಲಿ ಕರ್ನಾಟಕದ ಆಟಗಾರರು

ವಿಶ್ವ ಕ್ರಿಕೆಟ್‌ನಲ್ಲಿ ಕರ್ನಾಟಕದ ಆಟಗಾರರು


ಲೇಖಕ : ಚನ್ನಗಿರಿ ಕೇಶವಮೂರ್ತಿ
ಪ್ರಕಾಶಕರು : ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್‌
ಪ್ರಕಟವಾದ ವರ್ಷ : .
ಪುಟ : 452
ರೂ : ₹ 400
ಭಾರತ ಕ್ರಿಕೆಟ್‌ ತಂಡದಲ್ಲಿ ಆಡಿದ ಕರ್ನಾಟಕದ  ಆಟಗಾರರ ಸಾಧನೆಗಳ ಮಾಹಿತಿ, ಅವರ ಬದುಕಿನ ಕುತೂಹಲಕರ ಸಂಗತಿಗಳು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ದೇಶಿ ಕ್ರಿಕೆಟ್‌ನ ಅಂಕಿಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಅವರು ‘ವಿಶ್ವ ಕ್ರಿಕೆಟ್‌ನಲ್ಲಿ ಕರ್ನಾಟಕದ ಆಟಗಾರರು’ ಪುಸ್ತಕದಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
 
ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಹಿಟ್‌ ವಿಕೆಟ್‌ ಮೂಲಕ ಔಟಾದ ಭಾರತದ ಮೊದಲ ಆಟಗಾರ ಬಿ.ಕೆ. ಕುಂದಿರನ್‌, ವಿಕೆಟ್ ಕೀಪಿಂಗ್ ಇತಿಹಾಸಕ್ಕೆ ಚಿನ್ನದ ಲೇಪನ ನೀಡಿದ ಸೈಯದ್‌ ಕಿರ್ಮಾನಿ, ಗೂಗ್ಲಿ ಮಾಂತ್ರಿಕ ಬಿ.ಎಸ್‌. ಚಂದ್ರಶೇಖರ್‌, ರಣಜಿಯಲ್ಲಿ ಹ್ಯಾಟ್ರಿಕ್‌ ವಿಕೆಟ್ ಪಡೆದ ಮೊದಲ ಎಡಗೈ ವೇಗಿ ಎಸ್‌. ಅರವಿಂದ್‌ ಹೀಗೆ ಹಲವು ಮೊದಲುಗಳನ್ನು ದಾಖಲಿಸಿದ್ದಾರೆ.
 
ರಾಜ್ಯದ ಕ್ರಿಕೆಟಿಗರ ಮೂಲ ಊರು, ಅವರಲ್ಲಿ ಕ್ರಿಕೆಟ್‌ ಪ್ರೀತಿ ಬೆಳೆಯಲು ಕಾರಣವಾದ ಅಂಶಗಳು, ಆಟ ಬಿಟ್ಟು ಓದಿನತ್ತ ಗಮನ ಕೊಡುವಂತೆ ಪೋಷಕರು ಒತ್ತಡ ಹೇರಿದ  ಪ್ರಸಂಗಗಳು, ಬೆಂಗಳೂರಿನ ಚಾಮರಾಜಪೇಟೆಯ ಮಸೀದಿ ಮೈದಾನದಲ್ಲಿ ಟೆನಿಸ್ ಬಾಲ್‌ ಕ್ರಿಕೆಟ್‌ ಆಡುತ್ತಿದ್ದ ಆರ್‌. ಸುಧಾಕರರಾವ್‌ ರಾಷ್ಟ್ರೀಯ ತಂಡದ ಎತ್ತರಕ್ಕೆ ಏರಿದ್ದು, ಹಾಕಿ ಕ್ರೀಡೆಯ ಬಗ್ಗೆ ಅಪಾರ ಪ್ರೀತಿಯಿದ್ದರೂ ಕ್ರಿಕೆಟ್‌ನಲ್ಲಿ ಬೆಳಗಿದ ವೆಂಕಟೇಶ್ ಪ್ರಸಾದ್‌ ಅವರ ಕ್ರೀಡಾ ಬದುಕಿನ ಮಹತ್ವದ ಸಂಗತಿಗಳ ಮೇಲೆ ಲೇಖಕರು ಬೆಳಕು ಚೆಲ್ಲಿದ್ದಾರೆ.
 
 ರಾಹುಲ್‌ ದ್ರಾವಿಡ್‌ ಪ್ರತಿ ಪಂದ್ಯಕ್ಕೂ ಹೊಸ ಉಡುಪು ಧರಿಸುತ್ತಿದ್ದರು. ಮೈದಾನ ಪ್ರವೇಶಿಸುವಾಗ ಬಲಗಾಲನ್ನೇ ಮೊದಲು ಇಡುತ್ತಿದ್ದರು ಎನ್ನುವ ಸ್ವಾರಸ್ಯಕರ ವಿಷಯಗಳೂ ಇವೆ. ದೇಶವನ್ನು ಪ್ರತಿನಿಧಿಸಿದ ಮೊದಲ ಅಪ್ಪ–ಮಗ ರೋಜರ್ ಮತ್ತು ಸ್ಟುವರ್ಟ್‌ ಬಿನ್ನಿ, ಜನ್ಮದಿನದಂದೇ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಗದಗದ ಸುನಿಲ್‌ ಜೋಶಿ, ಹೀಗೆ ಆಸಕ್ತಿಕರ ವಿಷಯಗಳು ಇರುವ ಕಾರಣ ಪುಸ್ತಕ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. 
 
ಕ್ರಿಕೆಟ್‌ಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಪುಸ್ತಕಗಳ ಸಂಖ್ಯೆ  ಬಹಳ ಕಡಿಮೆ. ಆದ್ದರಿಂದ ಈ ಪುಸ್ತಕ ಮಹತ್ವವೆನಿಸುತ್ತದೆ. ಕೇಶವಮೂರ್ತಿ ಅವರು ಕ್ರಿಕೆಟ್‌ಗೆ ಸಂಬಂಧಿಸಿದಂತೆ ಹೊರತಂದಿರುವ ಮೂರನೇ ಪುಸ್ತಕವಿದು. ಹಿಂದೆ ‘ಭಾರತೀಯ ಕ್ರಿಕೆಟ್‌ನ ಇತಿಹಾಸ’ ಮತ್ತು ‘ಭಾರತದ ಕ್ರಿಕೆಟ್‌ ನಾಯಕರು’ ಪುಸ್ತಕಗಳನ್ನು ಬರೆದಿದ್ದಾರೆ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.