ಜನಪ್ರಿಯ ಸಚಿತ್ರ ಬೈಬಲ್

ಜನಪ್ರಿಯ ಸಚಿತ್ರ ಬೈಬಲ್


ಲೇಖಕ : ಡಾ. ದಯಾನಂದ ಪ್ರಭು
ಪ್ರಕಾಶಕರು : ಸೈಂಟ್‌ ಜೂಡ್‌ ತದ್ದೆಯುಸ್‌ ಚರ್ಚ್‌, ಬಿ.ಎಂ.ಶ್ರೀ. ನಗರ, ಮೇಟಗಳ್ಳಿ ಅಂಚೆ, ಮೈಸೂರು – 570016
ಪ್ರಕಟವಾದ ವರ್ಷ : .
ಪುಟ : 416
ರೂ : ₹ 450
ಧರ್ಮಗ್ರಂಥ ಬೈಬಲ್‌ ಅನ್ನು ಸಚಿತ್ರವಾಗಿ, ಸರಳವಾಗಿ ದಯಾನಂದ ಪ್ರಭು ಓದುಗರಿಗೆ ಇಲ್ಲಿ ಕೊಟ್ಟಿದ್ದಾರೆ. ಈ ಬೈಬಲ್‌ ‘ಹಳೆಯ ಒಡಂಬಡಿಕೆ’, ‘ಹೊಸ ಒಡಂಬಡಿಕೆ’ ಹಾಗೂ ‘ಜ್ಯೋತಿ ಬೆಳಗಿತು’ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.

‘ಬೈಬಲ್‌’ ಎಂಬ ಪದದ ಮೂಲ ಗ್ರೀಕ್‌. ಅದರ ಅರ್ಥ ‘ಪುಸ್ತಕಗಳು’ ಎಂದು. ಕ್ಯಾಥೋಲಿಕ್‌ ಅವತರಣಿಕೆಯಲ್ಲಿ 73, ಹಳೆಯ ಒಡಂಬಡಿಕೆಯಲ್ಲಿ 46, ಮತ್ತು ಹೊಸ ಒಡಂಬಡಿಕೆಯಲ್ಲಿ 27 ಪುಸ್ತಕಗಳಿವೆ. ಇವನ್ನು ವಿವಿಧ ಲೇಖಕರು, ವಿವಿಧ ದೇಶ–ಕಾಲದಲ್ಲಿ ಬರೆದಿದ್ದಾರೆ. ಅದರ ಅವಧಿ ಸುಮಾರು ಒಂದು ಸಾವಿರ ವರ್ಷಗಳು. ಇಂತಹ ಕುತೂಹಲಕರ ವಿವರಗಳನ್ನು ತಮ್ಮ ಈ ಸಚಿತ್ರ ಆವೃತ್ತಿಯ ಪ್ರಸ್ತಾವನೆಯಲ್ಲಿ ಲೇಖಕರಾದ ದಯಾನಂದ ಪ್ರಭು ಕೊಟ್ಟಿದ್ದಾರೆ.
 
ಈ ಬೈಬಲ್‌ನ ಮಹತ್ವದ ಅಂಶಗಳೆಂದರೆ, ಅದರ ಸರಳಗನ್ನಡ ಮತ್ತು ತಪ್ಪುಗಳಿಲ್ಲದ ಅದರ ಬರವಣಿಗೆ. ಬೈಬಲ್‌ ಇಲ್ಲಿ ಕತೆಯಂತೆ ನಿರೂಪಣೆಗೊಂಡಿದೆ. ಇದು ಇದರ ಸರಾಗ ಓದಿಗೆ ಅನುವು ಮಾಡಿಕೊಡುತ್ತದೆ.

‘ಬೈಬಲ್‌ ಒಂದು ಪ್ರೇಮಕಥನ. ಸಹಸ್ರಮಾನಗಳ ಹಿಂದೆ ದೇವರು ಮಾನವರೊಟ್ಟಿಗೆ ಮಾಡಿಕೊಂಡ ಪ್ರೀತಿಯ ಒಡಂಬಡಿಕೆಯೇ ಈ ಪ್ರೇಮ ಕಥನದ ವಸ್ತು’ ಎಂದು ಲೇಖಕರು ಬೈಬಲ್‌ನ ಸಾರವನ್ನು ಈ ಎರಡು ಮಾತುಗಳಲ್ಲಿ ವಿವರಿಸಿದ್ದಾರೆ. ಈ ಪ್ರೀತಿಯ ಕಥನ ಚಿತ್ರವತ್ತಾಗಿದ್ದು ಎಲ್ಲ ವಯೋಮಾನದವರ ಗ್ರಹಿಕೆಗೆ ನಿಲುಕುವಂತಿದೆ. 
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.