ಬೆಸುಗೆಯ ಬಂಧನದಲ್ಲಿ ಬಾ ಮತ್ತು ಬಾಪು ದಾಂಪತ್ಯ ಕಥನ

ಬೆಸುಗೆಯ ಬಂಧನದಲ್ಲಿ ಬಾ ಮತ್ತು ಬಾಪು ದಾಂಪತ್ಯ ಕಥನ


ಲೇಖಕ : ವಿಜಯಾ ಸುಬ್ಬರಾಜ್‌
ಪ್ರಕಾಶಕರು : ದೇಸಿ ಪುಸ್ತಕ, ನಂ. 121, 13ನೇ ಮುಖ್ಯ ರಸ್ತೆ, ಎಂ.ಸಿ. ಲೇಔಟ್‌, ವಿಜಯನಗರ, ಬೆಂಗಳೂರು – 560040
ಪ್ರಕಟವಾದ ವರ್ಷ : .
ಪುಟ : 352
ರೂ : ₹ 350
ಮಹಾತ್ಮ ಗಾಂಧಿ ಹಾಗೂ ಅವರ ಪತ್ನಿ ಕಸ್ತೂರ ಬಾ ಅವರ ದಾಂಪತ್ಯ ಜೀವನವನ್ನು ಲೇಖಕಿ ವಿಜಯಾ ಸುಬ್ಬರಾಜ್‌ ಮರುಕಥಿಸಿದ್ದಾರೆ. ಇದು ನಿರಂತರ ಸಂಶೋಧನೆ, ಅಪಾರ ಅಧ್ಯಯನದಿಂದ ಹುಟ್ಟಿದ ಪುಸ್ತಕವಾಗಿದೆ. ಗಾಂಧೀಜಿ ಅವರಂತಹ ಪ್ರಭಾವಶಾಲಿ, ನಿಷ್ಠುರ ವ್ಯಕ್ತಿಯ ಜೊತೆಗೆ ಚೈತನ್ಯಶಾಲಿ ವ್ಯಕ್ತಿತ್ವದ ಕಸ್ತೂರ ಬಾ ಹೇಗೆ ಬಾಳುವೆ ನಡೆಸಿದರು ಎಂಬುದನ್ನು ಈ ಪುಸ್ತಕ ಹೇಳುತ್ತದೆ.

ದಾಂಪತ್ಯದಲ್ಲಿ ನಡೆಯುವ ತಿಕ್ಕಾಟ, ಭಿನ್ನಾಭಿಪ್ರಾಯ, ಹಲವು ಬಗೆಯ ಸಂದರ್ಭ, ಘಟನೆಗಳನ್ನು ಇದು ಒಳಗೊಳ್ಳಲು ಪ್ರಯತ್ನಿಸಿದೆ. ಮುಖ್ಯವಾಗಿ ಇದು ಮೇರುಪರ್ವತದ ಅಡಿಯಲ್ಲಿ ಬೆಳೆದ ಹಚ್ಚಹಸುರಿನ ಮರವೊಂದನ್ನು ಎಲ್ಲರಿಗೂ ಕಾಣುವಂತೆ ಮಾಡಿದ ಬರವಣಿಗೆಯಾಗಿದೆ.
 
ಈ ಪುಸ್ತಕದ ಮುಖ್ಯ ಅಂಶ ಇದು ಒಂದು ಕಾದಂಬರಿಯಂತೆ ನಿರೂಪಿತವಾಗಿರುವುದು. ಗಾಂಧೀಜಿಯವರ ಸಮಸಮಕ್ಕೆ ತನ್ನದೇ ರೀತಿಯಲ್ಲಿ ಹೆಜ್ಜೆ ಹಾಕಿದ ಕಸ್ತೂರ ಬಾ ಅವರ ಬದುಕು ಪ್ರತಿಕ್ಷಣವೂ ಕೆಂಡದ ಮೇಲೆ ಹಾಯುವರಂತೆ ಇತ್ತು. ದೇಶದ ರಾಜಕೀಯದಲ್ಲಿ ಆಗುವ ಪಲ್ಲಟಗಳಿಗೆ, ಗಾಂಧೀಜಿಯ ಪ್ರಯೋಗ, ಚಿಂತನೆಗಳಿಗೆ ಅವರು ಸಾಕ್ಷಿಯಾಗಿದ್ದರು.

ಇಂತಹ ಕಸ್ತೂರ ಬಾ ಅವರ ವ್ಯಕ್ತಿತ್ವದ ಹೊರಚಾಚುಗಳು, ಅವರ ಮತ್ತು ಗಾಂಧೀಜಿ ಅವರ ದಾಂಪತ್ಯಕ್ಕೆ ಇರುವ ಬಣ್ಣ, ಗಂಧ, ರಾಗಗಳು ಯಾವುದಾಗಿದ್ದವು ಎಂಬುದನ್ನು ಅತ್ಯಂತ ಪ್ರಖರ, ನಿಖರ ಮಾತುಗಳಲ್ಲಿ ವಿಜಯಾ ಅವರು ದಾಖಲಿಸಿದ್ದಾರೆ. ಈ ಪುಸ್ತಕವು ದೊಡ್ಡ ಬದುಕನ್ನು ವಿಸ್ತಾರವಾದ ತೆರೆಯ ಮೇಲೆ ಮೂಡಿಸಲು ಮಾಡಿದ ಮಹತ್ವಾಕಾಂಕ್ಷಿ ಪ್ರಯತ್ನವಾಗಿದೆ.
Comments (Click here to Expand)
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ
ವಚನ ವರ್ಷ
ವಚನ ವರ್ಷ
ಸಂ: ಡಾ. ಬಸವರಾಜ ಸಾದರ
 ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
ಸುಮಂಗಲಾ ಎಸ್‌. ಮುಮ್ಮಿಗಟ್ಟಿ
ತರ್ಕ ಸಂಗ್ರಹ
ತರ್ಕ ಸಂಗ್ರಹ
ಶ್ರೀಮದನ್ನಭಟ್ಟ
ಆತಿಥಿ ದೇವೋಭವ
ಆತಿಥಿ ದೇವೋಭವ
ಡಾ. ಸ್ವಾಮಿರಾವ್‌ ಕುಲಕರ್ಣಿ