ಹೆಸರಿಲ್ಲದ ಹೂ

ಹೆಸರಿಲ್ಲದ ಹೂ


ಲೇಖಕ : ಮೂಲ: ಅಬ್ಬಾಸ್‌ ಕಿರೊಸ್ತಾಮಿ, ಅನು: ಹೇಮಾ ಎಸ್‌.
ಪ್ರಕಾಶಕರು : ಸಂಚಯ, ನಂ. 100, 2ನೇ ಮುಖ್ಯರಸ್ತೆ, 6ನೇ ಬ್ಲಾಕ್‌, 3ನೇ ಹಂತ, 3ನೇ ಘಟ್ಟ, ಬನಶಂಕರಿ, ಬೆಂಗಳೂರು – 560085
ಪ್ರಕಟವಾದ ವರ್ಷ : .
ಪುಟ : 40
ರೂ : ₹ 25
‘ಟೇಸ್ಟ್‌ ಆಫ್‌ ಚೆರ್ರಿ’ ‘ಥ್ರೂ ದ ಆಲೀವ್‌ ಟ್ರೀಸ್’, ‘ಟೆನ್‌, ‘ಕ್ಲೋಸ್‌–ಅಪ್‌’ನಂತಹ ಚಿತ್ರಗಳನ್ನು ಮಾಡಿದ ಇರಾನ್‌ನ ಸಿನಿಮಾ ನಿರ್ದೇಶಕ ಅಬ್ಬಾಸ್‌ ಕಿರೊಸ್ತಾಮಿ ಕವಿ ಕೂಡ. ಪರ್ಶಿಯನ್ ಭಾಷೆಯಲ್ಲಿ ಬರೆದಿರುವ ಅವನ ಕವಿತೆಗಳು ಪುಟ್ಟದಾಗಿವೆ.
 
ಹಾಯ್ಕು ಕವಿತೆಗಳಿಗೆ ಹತ್ತಿರವಾಗಿರುವ ಇವನ್ನು ಪರ್ಶಿಯನ್‌ ಭಾಷೆಯಲ್ಲಿ ‘ಶೇರ್‌ – ಏ – ಸೆಪಿದ್‌’(ಬಿಳಿ ಪದ್ಯ) ಎನ್ನುತ್ತಾರೆ. ಇವುಗಳನ್ನು ಅನುವಾದಿಸಿರುವ ಕವಯಿತ್ರಿ ಹೇಮಾ, ಅಬ್ಬಾಸ್‌ ಕಿರೊಸ್ತಾಮಿಯ ಕವಿತೆಗಳ ಜೀವವನ್ನು ಹಿಡಿದಿಡಲು ಇಲ್ಲಿ ಪ್ರಯತ್ನಿಸಿದ್ದಾರೆ.
 
‘ಜೇಡನ ಎರಡು ದಿನದ/ ಸುಗ್ಗಿ/ ಮನೆಯೊಡತಿಯ ಪೊರಕೆಯಿಂದ/ ನಿರ್ನಾಮ’ (ಪು. 26), ‘ಚಂದ್ರ/ ಯಾವುದೇ ಷರತ್ತಿಲ್ಲದೆ/ ಮಿಣುಕುಹುಳವನ್ನು ಬೆಳಗಿಸುತ್ತಾನೆ’ (ಪು. 36) – ಈ ಬಗೆಯ ಶಬ್ದಚಿತ್ರಗಳನ್ನು ಅಬ್ಬಾಸ್‌ ಕಿರೊಸ್ತಾಮಿ ಕಟ್ಟುತ್ತಾ ಹೋಗುತ್ತಾನೆ. ಅವನ ಸಿನಿಮಾಗಳ ಕಾವ್ಯಗುಣಕ್ಕೆ, ಚಿತ್ರಕಶಕ್ತಿಗೆ ಮೂಲಪ್ರೇರಣೆ ಏನು ಎನ್ನುವುದು ಈ ಕವಿತೆಗಳನ್ನು ಓದಿದರೆ ಗೊತ್ತಾಗುತ್ತದೆ.

ಇಲ್ಲಿನ ಪುಟ್ಟ ಕವಿತೆಗಳು ಓದಿದ ಮೇಲೂ ಏನನ್ನೋ ಉಳಿಸಿಹೋದಂತೆ, ಅಪೂರ್ಣವಾದಂತೆ ಕಾಣುತ್ತವೆ. ಅವನೇ ‘ನನ್ನ ಮಾತುಗಳು ನನಗೇ ಎಂದೂ ಪೂರ್ತಿಯಾದಂತೆ ಅನ್ನಿಸಿಲ್ಲ’ ಎಂದು ಬರೆದುಕೊಂಡಿದ್ದಾನೆ. ಅವನ ಇನ್ನೊಂದು ಕವಿತೆ ಹೀಗಿದೆ: ‘ರಾತ್ರಿಗಳು ದೀರ್ಘ.../ ದಿನಗಳು ದೀರ್ಘ.../ ಬದುಕು/ ಪುಟ್ಟದು.’ (ಪು. 21)
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.