ಅಂಡರ್‌ಸ್ಟ್ಯಾಂಡಿಂಗ್‌ ದ ಬ್ಲಾಕ್ ಎಕಾನಮಿ ಅಂಡ್ ಬ್ಲಾಕ್ ಮನಿ ಇನ್‌ ಇಂಡಿಯಾ

ಅಂಡರ್‌ಸ್ಟ್ಯಾಂಡಿಂಗ್‌ ದ ಬ್ಲಾಕ್ ಎಕಾನಮಿ ಅಂಡ್ ಬ್ಲಾಕ್ ಮನಿ ಇನ್‌ ಇಂಡಿಯಾ


ಲೇಖಕ : ಅರುಣ್ ಕುಮಾರ್
ಪ್ರಕಾಶಕರು : ಅಲೆಫ್ ಬುಕ್ ಕಂಪೆನಿ, ದೆಹಲಿ
ಪ್ರಕಟವಾದ ವರ್ಷ : .
ಪುಟ : 144
ರೂ : ₹ 399
ದೆಹಲಿಯ ‘ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯ’ದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೊ. ಅರುಣ್‌ಕುಮಾರ್ ಅವರ ಹೆಸರು ಕಪ್ಪು ಅರ್ಥಿಕತೆಯ ಅಧ್ಯಯನದ ಕ್ಷೇತ್ರದಲ್ಲಿ ವಿಶ್ವವಿಖ್ಯಾತವಾದದ್ದು. ನೋಟು ನಿಷೇಧದ ನಂತರದಲ್ಲಿ ಇದೀಗ ಇಡೀ ಭಾರತ ಕಪ್ಪು ಆರ್ಥಿಕತೆಯ ಬಗ್ಗೆ ಮಾತನಾಡುತ್ತಿದೆ.
 
ಹೀಗಾಗಿ ಭಾರತದಲ್ಲಿ ಕಪ್ಪು ಆರ್ಥಿಕತೆಯ ಉಗಮ, ಬೆಳವಣಿಗೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಕುರಿತ ತಮ್ಮ ನಾಲ್ಕು ದಶಕಗಳ ಬೃಹತ್ ಅಕಡೆಮಿಕ್ ಅಧ್ಯಯನವನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ 140 ಪುಟಗಳಿಗೆ ಬಟ್ಟಿ ಇಳಿಸಿ – ‘UNDERSTANDING THE BLACK ECONOMY AND BLACK MONEY IN INDIA’ (ಭಾರತದಲ್ಲಿನ ಕಪ್ಪು ಆರ್ಥಿಕತೆ ಮತ್ತು ಕಪ್ಪುಹಣವನ್ನು ತಿಳಿಯುವುದು) ಎಂಬ ಪುಸ್ತಕವನ್ನು ಇತ್ತೀಚೆಗೆ ಪ್ರಕಟಿಸಿದ್ದಾರೆ. 
 
ಅರುಣ್‌ ಅವರ ಕೃತಿ – ಕಪ್ಪು ಹಣ, ಕಪ್ಪು ಆದಾಯ ಮತ್ತು ಕಪ್ಪು ಆರ್ಥಿಕತೆಗಳಿಗಿರುವ ವ್ಯತ್ಯಾಸಗಳನ್ನು ಸ್ಪಷ್ಟಪಡಿಸುತ್ತದೆ. ತೆರಿಗೆ ಪಾವತಿಸಬೇಕಾದ ವ್ಯವಹಾರ ಮತ್ತು ಆದಾಯಗಳಿಗೆ ತೆರಿಗೆ ಪಾವತಿಸದೆ ಗಳಿಸುವ/ಉಳಿಸುವ ಆದಾಯವೆಲ್ಲವೂ ಕಪ್ಪು ಆದಾಯವೇ.

ಕಪ್ಪು ಆದಾಯ ನಗದಿನ ರೂಪದಲ್ಲೇ ಇರಬೇಕಿಲ್ಲ. ಇದ್ದರೂ ಅದನ್ನು ಶೇಖರಿಸಿಡದೆ ರಿಯಲ್ ಎಸ್ಟೇಟ್, ಚಿನ್ನಾಭರಣಗಳಾಗಿ ಪರಿವರ್ತನೆಯಾಗಿರುತ್ತದೆ. ಅಥವಾ ಬಹಿರಂಗ ಮಾರ್ಗಗಳಲ್ಲೇ ಕಪ್ಪು ಆದಾಯವನ್ನು ಬಿಳಿ ಮಾಡಿಕೊಂಡು ವಿವಿಧ ವ್ಯವಹಾರಗಳಲ್ಲಿ ಹೂಡಿಕೆಯಾಗಿರುತ್ತದೆ.

ಭಾರತದಲ್ಲಿ ಶೇ 92ರಷ್ಟು ಕಪ್ಪು ಆದಾಯ ಸೃಷ್ಟಿಯಾಗುವುದು ಕಾನೂನುಬದ್ಧ ವ್ಯವಹಾರಗಳಿಂದಲೇ ಎಂದು ಲೇಖಕರು ವಿವರಿಸುತ್ತಾರೆ. ಅವರ ಅಂದಾಜಿನ ಪ್ರಕಾರ, ಭಾರತದಲ್ಲಿ ಕಳೆದ ವರ್ಷ ಶೇ 64ರಷ್ಟು, ಎಂದರೆ 93 ಲಕ್ಷ ಕೋಟಿ ರೂಪಾಯಿಯಷ್ಟು ಕಪ್ಪು ಆರ್ಥಿಕತೆಯಿತ್ತು. 
 
ಕಳೆದ ವರ್ಷ ಭಾರತದ ಜಿಡಿಪಿ 150 ಲಕ್ಷ ಕೋಟಿಯಷ್ಟಿದ್ದಾಗ ಶೇ 16ರಷ್ಟು ನಿವ್ವಳ ತೆರಿಗೆ ದರದಲ್ಲಿ ಅಂದಾಜು 24 ಲಕ್ಷ ಕೋಟಿಯಷ್ಟು ತೆರಿಗೆಯನ್ನು ಸಂಗ್ರಹಿಸಲಾಗಿತ್ತು. ಒಂದು ವೇಳೆ ಈ ಕಪ್ಪು ಆರ್ಥಿಕತೆಯ ಉತ್ಪನ್ನವಾದ 93 ಲಕ್ಷ ಕೋಟಿಯೂ ಶೇ 16ರ ತೆರಿಗೆಗೆ ಒಳಪಟ್ಟಿದ್ದರೆ, ಸರ್ಕಾರದ ಬಳಿ 24+15=39 ಲಕ್ಷ ಕೋಟಿ ರೂಪಾಯಿ ಹಣ ಸಂಗ್ರಹವಾಗುತ್ತಿತ್ತು.
 
ಮತ್ತೊಂದು ಲೆಕ್ಕಾಚಾರದ ಪ್ರಕಾರ, ಕಳೆದ ವರ್ಷ ಕಪ್ಪು ಆರ್ಥಿಕತೆಯ ಕಾರಣದಿಂದ ಭಾರತ ಕಳೆದುಕೊಂಡ ತೆರಿಗೆ ಆದಾಯ 36 ಲಕ್ಷ ಕೋಟಿ ರೂಪಾಯಿ! ಹೀಗಾಗಿ ಕಪ್ಪು ಆರ್ಥಿಕತೆ ಇಲ್ಲದಿದ್ದರೆ, ಹಳ್ಳಿಗೊಂದು ಸುಸಜ್ಜಿತ ಸರ್ಕಾರಿ ಶಾಲೆ, ಪಂಚಾಯತಿಗೊಂದು ಆಧುನಿಕ ಸೌಲಭ್ಯಗಳ ಆಸ್ಪತ್ರೆ, ರೈತರ ಎಲ್ಲಾ ಸಾಲ ಮನ್ನಾ ಮತ್ತು ವೈಜ್ಞಾನಿಕ ಬೆಲೆ... ಇತ್ಯಾದಿಗಳೆಲ್ಲವನ್ನೂ ನೀಡುವುದಕ್ಕೆ ಸರ್ಕಾರದ ಬಳಿ ಅಗತ್ಯಕ್ಕಿಂತ ಹೆಚ್ಚಿನ ಹಣವಿರುತ್ತಿತ್ತು.   
 
ಪ್ರಸಕ್ತ ಕೃತಿಯ ಲೇಖಕರ ಅಂದಾಜಿನ ಪ್ರಕಾರ ದೇಶದಲ್ಲಿ ಕಪ್ಪು ಆರ್ಥಿಕತೆಯನ್ನು ತಡೆಗಟ್ಟಿದರೆ ಭಾರತದ ಆರ್ಥಿಕತೆ 800 ಲಕ್ಷ ಕೋಟಿಯಷ್ಟಾಗುತ್ತಿತ್ತು ಮತ್ತು ದೇಶದ ಜನರ ತಲಾವಾರು ಆದಾಯವೂ ಏಳುಪಟ್ಟು ಹೆಚ್ಚಿರುತ್ತಿತ್ತು. ಹಾಗಿದ್ದಲ್ಲಿ ಈ ಬೃಹತ್ ಪ್ರಮಾಣದ ಕಪ್ಪು ಆರ್ಥಿಕತೆ ಸೃಷ್ಟಿಯಾಗುತ್ತಿರುವುದು ಹೇಗೆ ಮತ್ತು ಅದನ್ನು ತಡೆಗಟ್ಟುವುದು ಹೇಗೆ? ಅದನ್ನು ಸುಲಭವಾಗಿ ಅರ್ಥಪಡಿಸಲು ಅರುಣ್‌ಕುಮಾರ್ ಹಗರಣಗಳ ಮಾನದಂಡವನ್ನು ಬಳಸುತ್ತಾರೆ.
 
1950 ಮತ್ತು 60ರ ದಶಕದಲ್ಲಿ ತಲಾ ಒಂದೊಂದೇ ಹಗರಣಗಳಿದ್ದವು. 80ರ ದಶಕದಲ್ಲಿ ಬಯಲಿಗೆ ಬಂದ ಬೋಫೋರ್ಸ್‌ ಹಗರಣದ ಮೊತ್ತ 64 ಕೋಟಿ ರೂಪಾಯಿಗಳು. ಆದರೆ 90ರ ದಶಕದಲ್ಲಿ ಸಾವಿರಾರು ಕೋಟಿ ರೂಪಾಯಿಗಳ 25ಕ್ಕೂ ಹೆಚ್ಚು ಹಗರಣಗಳು ದಾಖಲಾದವು. 2005–08ರ ನಡುವೆ ವಾರಕ್ಕೊಂದರಂತೆ 150 ಹಗರಣಗಳು ಬಯಲಾದವು. ಅವುಗಳಲ್ಲಿ ಕೆಲ ಹಗರಣಗಳ ಮೊತ್ತವು ಲಕ್ಷ ಕೋಟಿಯಷ್ಟಿತ್ತು.
 
ಹೇಗೆ ಇದರ ಕಾರಣಕರ್ತರು ಮತ್ತು ನೇರ ಫಲಾನುಭವಿಗಳು ಭ್ರಷ್ಟ ಬಂಡವಾಳಶಾಹಿ – ರಾಜಕಾರಣಿ – ಕಾರ್ಯಾಂಗ ಎಂಬ ದುಷ್ಟ ತ್ರಿವಳಿಗಳೆಂಬುದನ್ನೂ ಮತ್ತು  1991ರ ನಂತರದಲ್ಲಿ ಮಾರುಕಟ್ಟೆಪರ ನೀತಿಗಳು ಜಾರಿಗೆ ಬಂದ ಮೇಲೆ ಹೇಗೆ ಕಪ್ಪು ಆದಾಯ ಗಳಿಕೆಯ ಮೊತ್ತ ಮತ್ತು ಮಾರ್ಗಗಳು ಹತ್ತಾರುಪಟ್ಟು ಹೆಚ್ಚಿವೆ ಎಂಬುದನ್ನು ಪುಸ್ತಕದಲ್ಲಿ ಸವಿವರವಾಗಿ ದಾಖಲಿಸಲಾಗಿದೆ. ಮೋದಿ ಸರ್ಕಾರದ ನೋಟು ನಿಷೇಧವು ಇದಕ್ಕೆ ಹಾರವನ್ನೊದಗಿಸಬಲ್ಲದೇ ಎನ್ನುವುದು ಈ ಕೃತಿಯ ಹಿನ್ನೆಲೆಯಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆ. 
 
ದೊಡ್ಡ ದೊಡ್ಡ ದೊಡ್ಡ ಹಗರಣಗಳಲ್ಲಿ ವಹಿವಾಟು ನಡೆಯುವುದು ನಗದಿನಲ್ಲಲ್ಲ. ಹೀಗಾಗಿ ಅವುಗಳ ಮೇಲೆ ನೋಟು ನಿಷೇಧ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಮೇಲಾಗಿ ನೋಟು ನಿಷೇಧವು ಈ ಬಗೆಯ ಹಗರಣಗಳಿಗೆ ಕಾರಣವಾದ ನೀತಿಗಳನ್ನೇನೂ ಬದಲು ಮಾಡುವುದಿಲ್ಲ. ‘ಕಪ್ಪು ಆರ್ಥಿಕತೆಯೆಂದರೆ ಕಪ್ಪು ನಗದು’ ಎಂಬು ಒಂದು ದೊಡ್ಡ ಅಪಕಲ್ಪನೆ ನೋಟು ನಿಷೇಧದ ಹಿಂದಿದೆ.

ಹೀಗಾಗಿಯೇ ಸರ್ಕಾರ ಪ್ರಾರಂಭದಲ್ಲಿ ಭಾವಿಸಿದಕ್ಕೆ ವ್ಯತಿರಿಕ್ತವಾಗಿ (ನಿಷೇಧವಾದ 15.44 ಲಕ್ಷ ಕೋಟಿ ರೂಪಾಯಿಗಳಲ್ಲಿ 4–5 ಲಕ್ಷ ಕೋಟಿ ರೂಪಾಯಿ ಕಪ್ಪು ಹಣ ಬ್ಯಾಂಕುಗಳಿಗೆ ಸಂದಾಯವಾಗುವುದಿಲ್ಲವೆಂದು ಸರ್ಕಾರ ನಿರೀಕ್ಷಿಸಿತ್ತು) ಅಷ್ಟೂ ಹಣ ವಾಪಸ್ ಬ್ಯಾಂಕುಗಳಿಗೆ ಬಂದಿದೆ.

ಬದಲಿಗೆ ಈ ಕ್ರಮ ದೇಶದ ಅಭಿವೃದ್ಧಿಗೆ ಅದರಲ್ಲೂ ವಿಶೆಷವಾಗಿ ನಗದಿನಲ್ಲೇ ನಡೆಯುವ ಅನೌಪಚಾರಿಕ ಆರ್ಥಿಕತೆಗೆ ಮತ್ತು ಅದನ್ನು ಆಧರಿಸಿರುವ ಕೋಟ್ಯಂತರ ಜನತೆಯ ಬದುಕಿಗೆ ಮಾರಕ ಪೆಟ್ಟನ್ನು ಕೊಟ್ಟಿದೆ. ಇದನ್ನು ಸುಧಾರಿಸಿಕೊಳ್ಳಲು ದೇಶಕ್ಕೆ ಕನಿಷ್ಠ ಇನ್ನೆರಡು ವರ್ಷಗಳಾದರೂ ಬೇಕೆಂದು ಅರುಣ್‌ಕುಮಾರ್ ಅಂಕಿಅಂಶಗಳ ಮೂಲಕ ವಿವರಿಸುತ್ತಾರೆ.
 
 ಹಾಗಿದ್ದಲ್ಲಿ ಕಪ್ಪು ಆರ್ಥಿಕತೆಯನ್ನು ನಿರ್ಮೂಲನೆ ಮಾಡುವುದು ಹೇಗೆ? ಕಪ್ಪು ಆರ್ಥಿಕತೆಯನ್ನು ದಿಢೀರ್ ನಿಯಂತ್ರಿಸುವ ಯಾವ ಮಾನದಂಡಗಳೂ ಇಲ್ಲ. ಆದರೂ ಲೋಕ್‌ಪಾಲ್ ಜಾರಿ, ತನಿಖಾ ಸಂಸ್ಥೆಗಳ ಸ್ವಾಯತ್ತತೆ, ಕಾನೂನು ತಿದ್ದುಪಡಿ, ನ್ಯಾಯಾಂಗ ಸುಧಾರಣೆ, ಮಾಹಿತಿ ಹಕ್ಕುಗಳ ವ್ಯಾಪ್ತಿ ವಿಸ್ತರಣೆಯಂಥ ಕ್ರಮಗಳು ಇದರ ಮೇಲೆ ಸ್ವಲ್ಪ ಅಂಕುಶ ವಿಧಿಸಬಹುದು.
 
ಆದರೆ ಮೂಲಭೂತವಾಗಿ ಆಗಬೇಕಿರುವುದು ಕಪ್ಪುಆರ್ಥಿಕತೆಯ ಕಾರಣಕರ್ತರು ಮತ್ತು ಫಲಾನುಭವಿಗಳು ಆಗಿರುವ ಭ್ರಷ್ಟ ಬಂಡವಾಳಶಾಹಿ, ಭ್ರಷ್ಟ ರಾಜಕಾರಣ ಮತ್ತು ಭ್ರಷ್ಟ ಅಧಿಕಾರಿಗಳ ತ್ರಿವಳಿ ಕೂಟದ ನಿಯಂತ್ರಣ. ಇದು ಒಂದು ದೀರ್ಘ ಕಾಲಾವಧಿಯಲ್ಲಿ ಬಲವಾದ ಜನಾಂದೋಲನಗಳಿಂದ ಮಾತ್ರ ಸಾಧ್ಯವೆಂಬುದು ಅರುಣ್‌ಕುಮಾರ್ ಅವರ ಖಚಿತ ಅಭಿಪ್ರಾಯ.  
 
ಜನಾಂದೋಲನಗಳಿಗೆ ಜನರ ಪ್ರಜ್ಞಾಪೂರ್ವಕ ಪಾಲುದಾರಿಕೆ ಅತ್ಯಂತ ಮುಖ್ಯ. ಆದರೆ ಅರ್ಥಶಾಸ್ತ್ರ ಜನಸಾಮಾನ್ಯರಿಗೆ ಕಬ್ಬಿಣದ ಕಡಲೆ. ಅದರಲ್ಲೂ ದೇಶಭಕ್ತಿಯ ಕಬ್ಬಿಣದ ಸರಳುಗಳ ಹಿಂದೆ ಬಚ್ಚಿಟ್ಟ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಇನ್ನೂ ಕಷ್ಟ. ಇಂಥಾ ಪರಿಸ್ಥಿತಿಯಲ್ಲಿ ಪ್ರೊ. ಅರುಣ್‌ಕುಮಾರ್ ಅವರ ಈ ಪುಸ್ತಕ ಜನರಿಗೆ ಅತ್ಯಗತ್ಯವಾಗಿ ಬೇಕಿದ್ದ ಅರಿವನ್ನು ಕೊಡುವಂತಿದೆ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.