ಕುರುಬರ ಚರಿತ್ರೆ

ಕುರುಬರ ಚರಿತ್ರೆ


ಲೇಖಕ : ವಿ.ಆರ್. ಹನುಮಂತಯ್ಯ
ಪ್ರಕಾಶಕರು : ಬೆಂಗಳೂರಿನ ಒಕ್ಕಲಿಗರ ಸಂಘದ ಮುದ್ರಣಾಲಯ
ಪ್ರಕಟವಾದ ವರ್ಷ : 1926
ಪುಟ : 200
ರೂ : ₹ 1
ಕುರುಬರ ಚರಿತ್ರೆ (The History of Shepherds) ವಿ.ಆರ್. ಹನುಮಂತಯ್ಯನವರ ಕೃತಿ. 1926ರಲ್ಲಿ ಪ್ರಕಟಗೊಂಡ ಮೊದಲನೆಯ ಆವೃತ್ತಿಯಲ್ಲಿ ಎರಡು ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ. ಇನ್ನೂರು ಪುಟಗಳ, ಒಂದು ರೂಪಾಯಿ ಬೆಲೆಯ ಪ್ರಸಕ್ತ ಪುಸ್ತಕವನ್ನು ಬೆಂಗಳೂರಿನ ಒಕ್ಕಲಿಗರ ಸಂಘದ ಮುದ್ರಣಾಲಯದಲ್ಲಿ ಮುದ್ರಿಸಲಾಗಿದೆ. 
 
ಬೆಂಗಳೂರು ಸಿಟಿ ಕಂಬಳಿ ಮಿಷನ್ ರೋಡಿನಲ್ಲಿದ್ದ ಬಾಯ್ಸ್ ಪ್ರೈಮರಿ ಶಾಲೆಯಲ್ಲಿ ಲೇಖಕರು ಮ್ಯಾನೇಜರ್ ಆಗಿದ್ದರು ಎನ್ನುವ ಮಾಹಿತಿ ಬಿಟ್ಟರೆ ಹನುಮಂತಯ್ಯನವರನ್ನು ಕುರಿತು ಇನ್ನೇನೂ ಮಾಹಿತಿ ದೊರೆಯುವುದಿಲ್ಲ.

ಮೈಸೂರಿನ ಮಹಾರಾಜರುಗಳ ಛಾಯಾಚಿತ್ರಗಳು ಹಾಗೂ ಹಿಂದಿನ ಕಾಲದ ಹಲವಾರು ಕುರುಬ ಜನಾಂಗದ ರಾಜರುಗಳು ಮತ್ತು ಹಿರಿಯ ಕುರುಬ ಕುಲಬಾಂಧವರ ಮುಖಂಡರುಗಳ ಛಾಯಾಚಿತ್ರಗಳ ಪಡಿಯಚ್ಚುಗಳನ್ನು ತಯಾರಿಸಿಕೊಟ್ಟಿರುವವರು ಬೆಂಗಳೂರು ಮಲ್ಲೇಶ್ವರದ ಟಿ.ಎನ್. ಪಿಳ್ಳೈ ಮತ್ತು ಸನ್ಸ್ ಅವರುಗಳು. 
 
ಭಾರತೀಯರಲ್ಲಿ ದಾಖಲೆ ಇಡುವ ಪದ್ಧತಿ ಪಾಶ್ಚಾತ್ಯರಿಗೆ ಹೋಲಿಸಿದರೆ ಬಲು ಕಮ್ಮಿ. ಚಾರಿತ್ರಿಕವಾಗಿ ಯಾವುದೇ ಒಂದು ವಿಷಯವನ್ನು ಶಾಸ್ತ್ರೀಯವಾಗಿ ಬರೆಯುವ ಪರಿಪಾಠ ಇನ್ನೂ ಕಮ್ಮಿ. ಹಲವಾರು ಜಾತಿಗಳು, ಜನಾಂಗಗಳು, ಊರುಗಳು, ವ್ಯಕ್ತಿಗಳು ಇವುಗಳನ್ನು ಕುರಿತ ಬರವಣಿಗೆ ಮತ್ತೂ ಕಮ್ಮಿ. ಕನ್ನಡದಲ್ಲಿ ವಿವಿಧ ಜಾತಿಗಳಿಗೆ ಸಂಬಂಧಿಸಿದಂತೆ ಶಾಸ್ತ್ರೀಯ ಅಧ್ಯಯನಗಳು ಆರಂಭವಾದದ್ದು ಇತ್ತೀಚೆಗೆ.
 
ಅದೃಷ್ಟವಶಾತ್ ಕೆಲವು ಕಸುಬು, ಕುಲ ಜಾತಿಗಳ ಬಗ್ಗೆ ಅಧ್ಯಯನಗಳು ನಡೆದಿವೆ. ಅಂತಹ ಜಾತಿಗಳಲ್ಲಿ ಕುರುಬರ ಕುಲವೂ ಒಂದು. ಭಾರತದ ಅತ್ಯಂತ ಪ್ರಾಚೀನ ಜನಾಂಗಗಳಲ್ಲಿ ಹಾಗೂ ಮೂಲನಿವಾಸಿಗಳಲ್ಲಿ ಕುರುಬರು ಪ್ರಮುಖರಾದವರು ಎನ್ನಲಾಗಿದೆ.
 
ಅಬಾಜಿ ರಾಮಚಂದ್ರ ಸಾವಂತ ಎನ್ನುವವರು ‘ಕುರುಬ ರಟ್ಟ ಮತವು’ (1897) ಕೃತಿ ರಚನೆ ಮಾಡಿರುತ್ತಾರೆ. ಅತ್ತಿಕೊಳ್ಳ ಯಲ್ಲನಗೌಡ ಫಕೀರಗೌಡ ಅವರು ಬರೆದ ‘ಹಾಲು ಮತದ ಚರಿತ್ರೆ’ (1949) ಕುರುಬ ಜನಾಂಗಕ್ಕೆ ಸಂಬಂಧಿಸಿದ ಮತ್ತೊಂದು ಮುಖ್ಯ ಕೃತಿ. ಶಂ.ಬಾ. ಜೋಷಿ ಅವರು ಕೂಡ ‘ಹಾಲು ಮತ ದರ್ಶನ’ ಎನ್ನುವ ಕೃತಿಯನ್ನು ರಚಿಸಿರುತ್ತಾರೆ.  
 
ಸ್ವಜನಾಭಿಮಾನ, ಸ್ವಧರ್ಮಾಭಿಮಾನ ಹಾಗೂ ದೇಶಾಭಿಮಾನದಿಂದ ಕುಲಗಳು ಸತ್ಕುಲಗಳಾಗುವವು ಎನ್ನುವುದು ಹನುಮಂತಪ್ಪನವರ ನಂಬಿಕೆ. ಏಕಾಂಗಿಯಾಗಿ ಹೇಗೆ ತಾನು ಆ ಕಾಲಘಟ್ಟದಲ್ಲಿ ಈ ಕೃತಿರಚನೆ ಮಾಡಿದೆ ಎನ್ನುವುದನ್ನು ಲೇಖಕರು ತಮ್ಮ ಉಪೋದ್ಘಾತದಲ್ಲಿ ಹೇಳಿಕೊಂಡಿದ್ದಾರೆ.

‘ಸುಮಾರು ಏಳೆಂಟು ವರ್ಷಗಳಿಂದಲೂ ಅನೇಕ ಕಷ್ಟಗಳಿಗೂ, ಪರಿಹಾಸ್ಯಗಳಿಗೂ ಒಳಗಾಗಿ, ನಿಷ್ಪಕ್ಷಪಾತಿಗಳಾದ ಅನೇಕ ಚರಿತ್ರೆಕಾರರಿಂದಲೂ, ವಿದ್ವಾಂಸರುಗಳಿಂದಲೂ (ಪ್ರೊಫೆಸರ್ಸ್) ಬರೆಯಲ್ಪಟ್ಟ ಈ ಟಿಪ್ಪಣಿಗಳಲ್ಲಿ ವಿವರಿಸಲ್ಪಟ್ಟಿರುವ ಅಮೌಲ್ಯವಾದ ಗ್ರಂಥಗಳನ್ನು ಸಂಗ್ರಹಿಸಿ ತದ್ಗ್ರಂಥಾಧಾರಗಳಿಂದ ನಾನೀ ಕುರುಬರ ಚರಿತ್ರೆ ಎಂಬ ಪುಸ್ತಕವನ್ನು ಬರೆದಿರುವೆನು’ ಎಂದು ಹೇಳಿದ್ದಾರೆ. 
 
ಆರಂಭದಲ್ಲಿ ಲೇಖಕರು ಕುರುಬ ಕುಲದವರನ್ನು ಬೇರೆ ಬೇರೆ ಪ್ರಾಂತ್ಯ–ಭಾಷೆಗಳಲ್ಲಿ ಹೇಗೆ ಉಲ್ಲೇಖಿಸಿರುತ್ತಾರೆಂಬುದನ್ನು ಹೇಳಿರುವುದು ಕುತೂಹಲಕಾರಿಯಾಗಿದೆ. ಕರ್ನಾಟಕದಲ್ಲಿ ಕುರುಬರನ್ನು ಕುರುಬರು, ಹೆಗ್ಗಡೆಗಳು, ಹಾಲುಮತದವರು ಎನ್ನುವ ವಾಡಿಕೆ ಇದ್ದರೆ, ತೆಲುಗರು ಅವರನ್ನು ಕುರುಪುವಾರು, ಕುರುಮ್‌ವಾರು ಹಾಗೂ ಗೊಲ್ಲವಾರು ಎನ್ನುವರು.

ಸಂಸ್ಕೃತದಲ್ಲಿ ಚಾಬಾಲ ಮತ್ತು ಅಜಾಜೀವಿ ಎಂದು ಉಲ್ಲೇಖಿಸಿರುತ್ತಾರೆ. ತಮಿಳು, ಮಲಯಾಳ ಹಾಗೂ ಇತರ ದ್ರಾವಿಡ ಭಾಷೆಗಳಲ್ಲಿ ಕುರುಬರನ್ನು ಕುರುಂಬ, ಕುರುಂಬನ್, ಕುರುಂಬ ಇಡೈಯರ್ ಎಂದು ಹೇಳಿದ್ದಾರೆ. 13ನೇ ಶತಮಾನದ ಕನ್ನಡ ಕವಿ ಹರಿಹರನು ತನ್ನ ‘ನಂಬಿಯಣ್ಣನ ರಗಳೆ’ಯಲ್ಲಿ ‘ಪೆರುಮಳಲೆಯ ಕುರುಂಬರ್’ ಎನ್ನುವ ಗುಂಪನ್ನು ಪದೇಪದೇ ಉಲ್ಲೇಖಿಸಿರುವುದನ್ನು ಗಮನಿಸಬಹುದು. 
 
ವಿಷಯಾನುಕ್ರಮಣಿಕೆಯಲ್ಲಿ ಒಟ್ಟು ಒಂಬತ್ತು ಪ್ರಕರಣಗಳು ಕೃತಿಯಲ್ಲಿವೆ. ಕುರುಬರ ಚರಿತ್ರೆ, ಪ್ರಾಚೀನ ಕುರುಬರು, ಕುರುಬರೆಂಬ ಹೆಸರು ಬರುವುದಕ್ಕೆ ಕಾರಣ ಹಾಗೂ ಕುರುಬರಲ್ಲಿ ಎರಡು ದೊಡ್ಡ ಪಂಗಡಗಳು, ಕರ್ನಾಟಕದ ಕುರುಬರ ಒಳಭೇದಗಳು, ಕುರುಬರ ಮತಾಚಾರ, ಆಹಾರ ಪದ್ಧತಿ, ಉಡಿಗೆತೊಡಿಗೆಗಳು, ಕಸುಬು, ಜನನ, ವಿವಾಹ ಪದ್ಧತಿಗಳು, ಗುರುಮಠಗಳು, ಕುಲದೇವರುಗಳು, ಮೈಲಾರ ಲಿಂಗನ ಮಹಿಮೆ, ವಿಧವಾ ವಿವಾಹ ಹಾಗೂ ಕನ್ನಡ ಕುರುಬರಲ್ಲಿರುವ ಸಾಲುಗಳು ಮುಂತಾದ ವಿಚಾರಗಳ ಬಗ್ಗೆ ಈ ಪ್ರಕರಣಗಳಲ್ಲಿ ವಿವರಣೆಗಳಿವೆ.
 
ಇಲ್ಲಿ ‘ಪ್ರಥಮ ಶೂದ್ರರು’ ಎನ್ನುವ ಪ್ರಸ್ತಾಪ ಕುತೂಹಲಕಾರಿಯಾಗಿದೆ. ‘ಹನ್ನೆರಡು ರಾಶಿಗಳಲ್ಲಿ ಮೊದಲೆರಡು ರಾಶಿಗಳಾದ ಮೇಷ (=ಕುರಿ) ಹಾಗೂ ವೃಷಭ (=ಎತ್ತು) ಆದುದರಿಂದ ಹಾಗೂ ಹಸುಕರು ಕುರಿಗಳು ಕುರುಬರ ಸಾಕುಪ್ರಾಣಿಗಳಾದ್ದರಿಂದ ಇವನ್ನು ಪಾಲಿಸುವಂತೆ ಕುರುವೀರೇಶ್ವರನು ಪ್ರಥಮದಲ್ಲಿ ನಿಯಮಿಸಿರುವುದರಿಂದ ಈ ಎರಡು ರಾಶಿಯ ಕುರುಬರಿಗೆ ಪ್ರಥಮ ಶೂದ್ರರೆನ್ನುವ ಹೆಸರು’ ಬಂದಿತೆನ್ನುವುದನ್ನು ಲೇಖಕರು ಅನುಮಾನಿಸುತ್ತಾರೆ. 
 
ಲೇಖಕರು ಅತ್ಯಂತ ಶ್ರಮಪಟ್ಟು ಹಲವಾರು ಆಕರಗಳನ್ನು ಹುಡುಕಿ, ಅನೇಕ ವಿದ್ವಾಂಸರೊಂದಿಗೆ ಚರ್ಚೆ ನಡೆಸಿ, ಆಳವಾದ ಹಾಗೂ ವ್ಯಾಪಕವಾದ ಗಂಭೀರ ಅಧ್ಯಯನಗಳನ್ನು ಕೈಗೊಂಡು ಕುರುಬ ಜನಾಂಗವನ್ನು ಕುರಿತ ಒಂದು ಅಚ್ಚುಕಟ್ಟಾದ, ವಸ್ತುನಿಷ್ಠವಾದ, ಪ್ರಾಮಾಣಿಕವಾದ ಪ್ರಯತ್ನದ ಮೂಲಕ ಜನಾಂಗದ ಚರಿತ್ರೆಯೊಂದಕ್ಕೆ ಆದರ್ಶಪ್ರಾಯವಾಗಿರುವಂತೆ, ಸುಮಾರು ಒಂದು ಶತಮಾನಗಳಷ್ಟು ಹಿಂದೆ ಕನ್ನಡದಲ್ಲಿ ರಚಿಸಿರುವುದು ಶ್ಲಾಘನೀಯ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.