ಗುಲಗಂಜಿ ಮತ್ತು ಕಪ್ಪು

ಗುಲಗಂಜಿ ಮತ್ತು ಕಪ್ಪು


ಲೇಖಕ : ದ್ವಾರನಕುಂಟೆ ಪಾತಣ್ಣ
ಪ್ರಕಾಶಕರು : ಎಸ್‌.ಎಲ್.ಎನ್. ಪಬ್ಲಿಕೇಷನ್ಸ್‌, ನಂ. 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು–28
ಪ್ರಕಟವಾದ ವರ್ಷ : .
ಪುಟ : 168
ರೂ : ₹ 120
ಓದುಗನನ್ನು ಬೆರಗುಗೊಳಿಸುವುದು ಇಲ್ಲವೇ ಬೆಚ್ಚಿಬೀಳಿಸುವ ಕಥೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಸರಳತೆ ಹಾಗೂ ಸಾವಧಾನ ಗುಣದ ಮೂಲಕ ದ್ವಾರನಕುಂಟೆ ಪಾತಣ್ಣನವರ ಕಥೆಗಳು ಗಮನಸೆಳೆಯುತ್ತವೆ. ‘ಗುಲಗಂಜಿ ಮತ್ತು ಕಪ್ಪು’ ಅವರ ಎರಡನೇ ಕಥಾಸಂಕಲನ. ಇಲ್ಲಿನ ಹನ್ನೊಂದು ಕಥೆಗಳು ಸಹಮನುಷ್ಯನ ತವಕತಲ್ಲಣಗಳಿಗೆ ಸ್ಪಂದಿಸುವ ಗುಣ ಹೊಂದಿವೆ. 
 
ಪಾತಣ್ಣನವರ ಕಥೆಗಳಲ್ಲಿ ನಗರ ಹಾಗೂ ಗ್ರಾಮೀಣಜೀವನದ ಸಂಯೋಜನೆ ಕಾಣಿಸುತ್ತದೆ. ಒಂದುಕಡೆ, ಧಾವಂತದ ಬದುಕಿನಲ್ಲಿ ಮನುಷ್ಯನ ಜೀವಂತಿಕೆಯನ್ನು ಬರಿದುಮಾಡುವ ನಗರಗಳಿದ್ದರೆ, ಇನ್ನೊಂದು ಕಡೆ – ನಗರಗಳ ತುಣುಕುಗಳಂತೆ ಕಾಣಿಸುವ ಹಳ್ಳಿಗಳಿವೆ. ನಿಧಾನವಾಗಿ ತಮ್ಮ ಚಹರೆಗಳನ್ನು ಕಳೆದುಕೊಂಡು ನಗರಗಳೇ ಆಗುತ್ತಿರುವ ಹಳ್ಳಿಗಳು ಹಾಗೂ ಬಕಾಸುರ ಬಯಕೆಯ ಪ್ರತಿರೂಪಗಳಂತಿರುವ ನಗರಗಳ ನಾಡಿಮಿಡಿತ ಅರಿಯುವ ಪ್ರಯತ್ನದಂತೆ ಇಲ್ಲಿನ ಕಥೆಗಳು ಕಾಣಿಸುತ್ತವೆ.
 
ಈ ಸಂಕಲನದ ಪ್ರಾತಿನಿಧಿಕ ಕಥೆಗಳಾಗಿ ‘ಸಿದ್ದಣ್ಣನ ವೃತ್ತಾಂತ’ ಹಾಗೂ ‘ಜಾತಿ ಇಲ್ಲದವನು’ ಕಥೆಗಳನ್ನು ಗಮನಿಸಬಹುದು. ಗಾಡಿಯಲ್ಲಿ ಹಣ್ಣು ಮಾರುವ ಸಿದ್ದಣ್ಣ ಎನ್ನುವ ವ್ಯಾಪಾರಿಯೊಂದಿಗೆ ಕಥೆಯ ನಿರೂಪಕನಿಗೆ ಬೆಳೆಯುವ ಸ್ನೇಹ ‘ಸಿದ್ದಣ್ಣನ ವೃತ್ತಾಂತ’ ಕಥೆಯಲ್ಲಿದೆ.
 
ಇಬ್ಬರ ನಡುವಣ ಸ್ನೇಹ–ಸಂಬಂಧದ ಕಥೆ, ನಮ್ಮ ನಡುವೆ ಅಪರೂಪವಾಗುತ್ತಿರುವ ಮನುಷ್ಯಸಂಬಂಧಗಳ ಹಲವು ರೂಪಗಳನ್ನು ಚಿತ್ರಿಸಲು ಪ್ರಯತ್ನಿಸುತ್ತದೆ. ಇದೇ ಸಂದರ್ಭದಲ್ಲಿ, ನಗರದ ಚಕ್ರವ್ಯೂಹದಲ್ಲಿ ಜನಸಾಮಾನ್ಯರು ಕಳೆದುಹೋಗುವ ದಾರುಣತೆಯನ್ನೂ ಕಥೆ ಚಿತ್ರಿಸುತ್ತದೆ.
 
‘ಜಾತಿ ಇಲ್ಲದವನು’ ನಮ್ಮೊಳಗೆ ಸುಪ್ತವಾಗಿ ಹುದುಗಿಕೊಂಡಿರುವ ಜಾತಿಪ್ರಜ್ಞೆಯನ್ನು ವಿಮರ್ಶೆಗೆ ಒಡ್ಡುವ ಹಾಗೂ ವಿಶ್ವಮಾನವ ಸಂದೇಶದ ಆಶಯವನ್ನು ಒಳಗೊಂಡ ಕಥೆ. ಇಲ್ಲಿನ ಕಥಾನಾಯಕ ಎಲ್ಲ ಜಾತಿಯ ಸ್ವಾಮೀಜಿಗಳೊಂದಿಗೆ ಗುರ್ತಿಸಿಕೊಳ್ಳುವ ಮೂಲಕ ತನ್ನನ್ನು ಆಯಾ ಸಮುದಾಯಗಳೊಂದಿಗೆ ಗುರ್ತಿಸಿಕೊಳ್ಳುತ್ತಾನೆ.

ಒಮ್ಮೆ, ಆತ ದಲಿತ ಸಮುದಾಯದ ಸ್ವಾಮೀಜಿ ಜೊತೆ ಗುರ್ತಿಸಿಕೊಂಡಾಗ ಇತರ ಸಮುದಾಯದವರಿಗೆ ಆಘಾತವಾಗುತ್ತದೆ. ವಾಸ್ತವದಲ್ಲಿ ಅನಾಥನಾದ ಆತನಿಗೆ ತನ್ನ ಕುಲದ ನೆಲೆಯೇ ತಿಳಿದಿಲ್ಲ ಎನ್ನುವುದು ಕಥೆಯಲ್ಲಿನ ಪ್ರಮುಖ ಭಾಗ. 
 
ಸಾಮಾನ್ಯ ಜನರ ಬದುಕನ್ನು ಚಿತ್ರಿಸುವುದರಲ್ಲಿ ಪಾತಣ್ಣನವರಿಗೆ ವಿಶೇಷ ಆಸಕ್ತಿ. ಆ ಕಾರಣದಿಂದಲೇ ಅವರ ಕಥೆಗಳಲ್ಲಿ  ಪರದೇಶಿಗಳು, ಕುರಿಗಾಹಿಗಳು, ಕಾರ್ಮಿಕರು ಬರುತ್ತಾರೆ.
 
ಸಮಾಜವನ್ನು ಕಾಡುತ್ತಿರುವ ಸಮಸ್ಯೆ–ಸಂಕಟಗಳನ್ನೇ ಕಥೆಗಳನ್ನಾಗಿಸಿದ್ದರೂ, ಒಂದು ಬಗೆಯ ನಿರ್ಲಿಪ್ತ ಭಾವದಿಂದ ನಿರೂಪಿಸಿರುವುದು ಹಾಗೂ ಈ ರಚನೆಗಳ ಹಿಂದಿರುವ ಕಥೆಗಾರರ ಆರೋಗ್ಯಕರ ಮನೋಧರ್ಮ ವಿಶೇಷವಾದುದು.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.