ಕನ್ನಡ ಸಾಹಿತ್ಯ ಸಂಗಾತಿ

ಕನ್ನಡ ಸಾಹಿತ್ಯ ಸಂಗಾತಿ


ಲೇಖಕ : ಬಸವರಾಜ ಕಲ್ಗುಡಿ, ಚಿ. ಶ್ರೀನಿವಾಸರಾಜು, ಎಂ.ಎಸ್‌. ಲಠ್ಠೆ
ಪ್ರಕಾಶಕರು : ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು –2
ಪ್ರಕಟವಾದ ವರ್ಷ : .
ಪುಟ : 604
ರೂ : ₹ 320
ಬರಗೂರು ರಾಮಚಂದ್ರಪ್ಪ ಅವರು ಯೋಜನಾ ಸಂಪಾದಕರಾಗಿರುವ ‘ಕನ್ನಡ ಸಾಹಿತ್ಯ ಸಂಗಾತಿ’ ಕೃತಿಯು ಅವರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅವಧಿಯಲ್ಲೇ ಆರಂಭಗೊಂಡು ಅಂತಿಮ ಹಂತಕ್ಕೆ ಬಂದಿತ್ತು. ಬರಗೂರರ ಅವಧಿ ಮುಗಿದ ಬಳಿಕ ಆ ಸ್ಥಾನಕ್ಕೆ ಬಂದ ಅಧ್ಯಕ್ಷರಾದ ಗುರಲಿಂಗ ಕಾಪಸೆ ಅವರ ಆಸಕ್ತಿಯಿಂದ ಇದಕ್ಕೆ ಮತ್ತೆ ಚಾಲನೆ ಸಿಕ್ಕಿತು.

ಮುಂದಿನ ಅಧ್ಯಕ್ಷರು ಆಸಕ್ತಿ ತೋರದ ಕಾರಣ ಈ ಯೋಜನೆ ಮತ್ತೆ ಹಿಂದಕ್ಕೆ ಸರಿಯಿತು. ಈಗ ಕಳೆದ ಬಾರಿಯ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿಯವರ ಪ್ರಯತ್ನದಿಂದಾಗಿ ಇದು ಓದುಗರಿಗೆ ಸಿಗುವಂತಾಗಿದೆ. ಒಟ್ಟಾರೆ ಈ ಕೃತಿಗೆ ತೆಗೆದುಕೊಂಡ ಕಾಲ 20 ವರ್ಷಗಳಿಗೂ ಹೆಚ್ಚು! ಈ ನಡುವೆ ಇದರ ಸಂಪಾದಕರಾದ ಚಿ. ಶ್ರೀನಿವಾಸ ರಾಜು, ಎಂ.ಎಸ್‌. ಲಠ್ಠೆ ತೀರಿಕೊಂಡಿದ್ದಾರೆ.
 
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಮಗ್ರವಾದ, ಆದರೆ ಸಂಕ್ಷಿಪ್ತವಾದ ಮಾಹಿತಿಯನ್ನು ಕೊಡುವುದು ಈ ‘ಕ.ಸಾ.ಸಂ.’ನ ಉದ್ದೇಶ. ಶಾಸನ, ಹಳಗನ್ನಡ, ನಡುಗನ್ನಡ, ಮಧ್ಯಕಾಲೀನ, ಆಧುನಿಕ ಸಾಹಿತ್ಯದ ಕನ್ನಡದ ಬರಹಗಾರರು ಮತ್ತು ಕೃತಿಗಳು, ಸಾಹಿತ್ಯ ಪ್ರಕಾರಗಳ ಜೊತೆಗೆ ಪ್ರಶಸ್ತಿ ಪಡೆದ ಲೇಖಕರು, ಸಾಹಿತ್ಯ ಸಮ್ಮೇಳನಗಳು ಮತ್ತಿತರ ಸಂಗತಿಗಳನ್ನು ‘ಕ.ಸಾ.ಸಂ.’ ಒಳಗೊಂಡಿದೆ.

ಬರಗೂರು ಅವರು ಮಹತ್ವಾಕಾಂಕ್ಷೆಯಿಂದ ರೂಪಿಸಿರುವ ಈ ಸಂಪುಟ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ತಕ್ಷಣದ ಮಾಹಿತಿಯನ್ನು ಕೊಡುತ್ತದೆ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿ ಕೆಲವು ಸಾಹಿತ್ಯ ಪತ್ರಿಕೆಗಳ, ಸಾಹಿತ್ಯದ ವಿಶಿಷ್ಟ ಪರಿಕಲ್ಪನೆಗಳ ಉಲ್ಲೇಖ ಕೂಡ ಇಲ್ಲಿದೆ. ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಸ್ಥೂಲ ಚಿತ್ರಣ ಇದರಲ್ಲಿ ದೊರಕುವಂತಾಗುತ್ತದೆ.
 
ಈ ಸಂಪುಟದಲ್ಲೂ ಕೆಲವು ಕೊರತೆಗಳು ಉಳಿದುಕೊಂಡಿವೆ. ಕನ್ನಡ ಮಾತ್ರವಲ್ಲದೆ, ಭಾರತೀಯ ಸಾಹಿತ್ಯದ ಮಹಾಕಾದಂಬರಿಗಳಾದ ಕು.ವೆಂ.ಪು. ಅವರ ‘ಕಾನೂರು ಹೆಗ್ಗಡಿತಿ’, ‘ಮಲೆಗಳಲ್ಲಿ ಮದುಮಗಳು’, ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’, ‘ಬೆಟ್ಟದ ಜೀವ’ ಸೇರಿದಂತೆ ಕೆಲವು ಅಭಿಜಾತ ಕಾದಂಬರಿಗಳ ಬಗ್ಗೆ ಕೊಂಚ ವಿವರಗಳನ್ನು ಕೊಡಬಹುದಿತ್ತು.

ಏಕೆಂದರೆ ಕನ್ನಡದ ಮಹತ್ವದ ಕಾದಂಬರಿಗಳಾದ ರಾವಬಹಾದ್ದೂರರ ‘ಗ್ರಾಮಾಯಣ’ (ಪು.175), ಎಂ.ಎಸ್‌. ಪುಟ್ಟಣ್ಣನವರ ‘ಮಾಡಿದ್ದುಣ್ಣೋ ಮಾರಾಯ’(ಪು.366)ಗಳ ಬಗ್ಗೆ ಇಲ್ಲಿ ಪುಟ್ಟ ಲೇಖನಗಳಿವೆ. ಈ ಸಂಪುಟವನ್ನು ರೂಪಿಸುವಲ್ಲಿ ಸಂಪಾದಕ ಮಂಡಲಿ ಅನುಸರಿಸಿರುವ ಮಾನದಂಡವೆಂದರೆ ಪ್ರಶಸ್ತಿ (ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ) ಪಡೆದ ಕೃತಿಗಳು ಮತ್ತು ಅದರ ಲೇಖಕರ ಉಲ್ಲೇಖವನ್ನು ಕೊಡುವುದಾಗಿದೆ.

ಆದರೆ ಪ್ರಶಸ್ತಿಗಳು ಇಂತಹ ಕಡೆ ಮುಖ್ಯವಲ್ಲ; ಸಾಹಿತ್ಯದ ಹೆಜ್ಜೆ ಗುರುತುಗಳು, ಅದು ಮುಟ್ಟಿರುವ ಎತ್ತರ ಕೂಡ ಮುಖ್ಯವಾಗುತ್ತವೆ. ಈ ಅಂಶ ಮಾತ್ರವಲ್ಲ, ವಿ.ಜಿ. ಭಟ್‌, ಗಂಗಾಧರ ಚಿತ್ತಾಲ, ರಾಮಚಂದ್ರ ಶರ್ಮರಂತಹ ಕವಿಗಳು ಇಲ್ಲಿ ಜಾಗ ಪಡೆದಿಲ್ಲ. ಇವೆಲ್ಲ ಮುಂದಿನ ಆವೃತ್ತಿಯಲ್ಲಿ ಸೇರಿಕೊಳ್ಳಬಹುದು ಎಂಬ ನಿರೀಕ್ಷೆಯನ್ನು ಓದುಗರು ಸದ್ಯಕ್ಕೆ ಇಟ್ಟುಕೊಳ್ಳಬಹುದು.
 
ಈ ಸಂಪುಟವು ಸಾಹಿತ್ಯದ ವಿದ್ಯಾರ್ಥಿಗಳು, ಓದುಗರಿಗೆ ಕೈಮರದಂತೆ ಕೆಲಸ ಮಾಡುತ್ತದೆ. ಮತ್ತು ಇದರ ಓದು ಸಾಹಿತ್ಯದ ಮೇಲುಸ್ತರದ ನಿಖರ ಗ್ರಹಿಕೆಯನ್ನು ಕೊಡಬಹುದು.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.