ಗುರುತು (ಶಬ್ದ ಚಿತ್ರ)

ಮೊದಲ ಓದು


ಲೇಖಕ : ಸಿ.ವಿ. ಶೇಷಾದ್ರಿ ಹೊಳವನಹಳ್ಳಿ
ಪ್ರಕಾಶಕರು : ಕಮಲ ಪ್ರಕಾಶನ, ‘ಮಾತೃ ಮಂದಿರ’, ತಾಲ್ಲೂಕು ಕಚೇರಿ ಹಿಂಭಾಗ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ – 572 129
ಪ್ರಕಟವಾದ ವರ್ಷ : ..
ಪುಟ : 200
ರೂ : 130
ಕತೆಗಾರ ಮತ್ತು ಚಿತ್ರಕಾರ ಆಗಿರುವ ಸಿ.ವಿ. ಶೇಷಾದ್ರಿ ಹೊಳವನಹಳ್ಳಿ ಇಲ್ಲಿ ಪುಟ್ಟ ಕತೆಗಳೊಂದಿಗೆ ತಾವು ಬರೆದ ಚಿತ್ರಗಳನ್ನು ಕೊಟ್ಟಿದ್ದಾರೆ. ಇಲ್ಲಿನ 150ಕ್ಕೂ ಹೆಚ್ಚು ಕತೆಗಳು ಬದುಕಿನ ತಾತ್ವಿಕ ಹುಡುಕಾಟದಲ್ಲಿ ತೊಡಗಿವೆ. ಕತೆಯನ್ನು ಮಾತ್ರ ಹೇಳುವುದು ಈ ಲೇಖಕರ ಉದ್ದೇಶವಲ್ಲ.

ಶಬ್ದ ಹಾಗೂ ಚಿತ್ರಗಳ ಸರಣಿಯನ್ನು ಪೋಣಿಸುತ್ತ, ಅದನ್ನು ಓದುಗರ ಎದುರಿಗಿಡುತ್ತ ಹೋಗುತ್ತಾರೆ. ‘ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ’ ಎಂಬಂತೆ ಶೇಷಾದ್ರಿ ಅವರ ಈ ರಚನೆಗಳಿವೆ. ಕತೆ ಹೇಳುವುದು ಮಾತ್ರ ಲೇಖಕರ ಉದ್ದೇಶವಲ್ಲ; ಬದುಕು, ಜಗತ್ತಿನ ಬಗ್ಗೆ ಮಾತನಾಡುತ್ತ ಹೋಗುವುದು ಅವರ ಮುಖ್ಯ ಗುರಿಯಾದಂತಿದೆ.
 
ಈ ಪುಟ್ಟ ಕತೆಗಳು ಅಸ್ಪಷ್ಟ, ಗೋಜಲಾಗಿಯೂ ಇವೆ. ಸ್ಪಷ್ಟ ಮಾತಿನ ಗದ್ಯದ ಖಚಿತತೆ ಅವುಗಳಿಗಿಲ್ಲ. ಹಾಗಿರುವಾಗ ಇವನ್ನು ಕವಿತೆಗಳ ರೀತಿಯಲ್ಲಿ ಓದಿಕೊಳ್ಳಬೇಕೆ, ಶಬ್ದಚಿತ್ರಗಳಾಗಿ ಮಾತ್ರ ಕಾಣಬೇಕೆ ಎಂಬ ಗೊಂದಲವನ್ನು ಓದುಗರಲ್ಲಿ ಹುಟ್ಟಿಸುತ್ತವೆ.

ಓದುಗರಲ್ಲಿ ಅನುಮಾನದ ಅಲೆಗಳು ಹುಟ್ಟಿದರೆ ಬರಹ ತನ್ನ ಗುರಿಯನ್ನು ಮುಟ್ಟಲಾರದು. ತಾತ್ವಿಕ ಹೇಳಿಕೆಗಳಾಗಿ ಸುಂದರವಾಗಿ ಕಾಣಿಸುವ ಇವು ಕತೆಯ ನಿಜವಾದ ದೇಹವನ್ನು ಪಡೆದಿದ್ದರೆ ಕನ್ನಡ ಸಾಹಿತ್ಯದಲ್ಲಿ ಬೇರೆಯದೇ ಸ್ತರವನ್ನು ಮುಟ್ಟುತ್ತಿದ್ದವು. ಅವಕ್ಕೆ ಝೆನ್‌ ಕತೆಗಳ ಹೊಳಪು, ಆಳ, ವಿಸ್ತಾರ ದಕ್ಕುತ್ತಿತ್ತು.
 
Comments (Click here to Expand)
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ