ಕನ್ನಡ ಶಾಲೆಯ ಸವಿನೆನಪುಗಳು

ಮೊದಲ ಓದು


ಲೇಖಕ : ವಿಶ್ವನಾಥ ದೊಡ್ಮನೆ
ಪ್ರಕಾಶಕರು : ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ, 3/25, ಶರ್ಮಾ ನಿವಾಸ, ಅಸಲ್ಫಾ, ಘಾಟಕೊಪರ್‌ (ಪಶ್ಚಿಮ), ಮುಂಬಯಿ – 400 084
ಪ್ರಕಟವಾದ ವರ್ಷ : ..
ಪುಟ : 325
ರೂ : 250
ಇಂಗ್ಲಿಷ್‌ ಮಾಧ್ಯಮದ ಶಾಲೆಗಳ ಅಟ್ಟಹಾಸದ ನಡುವೆ ಕನ್ನಡ ಮಾಧ್ಯಮದ ಶಾಲೆಗಳು ಕಣ್ಮರೆಯಾಗುತ್ತಿವೆ. ಈ ಹೊತ್ತಿನಲ್ಲಿ ಕನ್ನಡ ಶಾಲೆಗಳ ದಿನಗಳನ್ನು ನೆನಪಿಸಿಕೊಂಡ ಬರಹಗಳಿರುವ ಈ ಪುಸ್ತಕ ಪ್ರಕಟವಾಗಿದೆ.

ಇದರಲ್ಲಿ 80ಕ್ಕೂ ಹೆಚ್ಚು ಲೇಖಕರು ತಾವು ಕಲಿತ ಕನ್ನಡ ಶಾಲೆಗಳನ್ನು, ಆ ಶಾಲೆಗಳಲ್ಲಿ ಕಲಿತ ದಿನಗಳನ್ನು ಇಲ್ಲಿ ದಾಖಲಿಸಿದ್ದಾರೆ. ವಿಶ್ವನಾಥ ದೊಡ್ಮನೆ ಅವರು ಸಂಪಾದಿಸಿರುವ ಈ ಸಂಪುಟದ ಲೇಖಕರು 1930–80ರ ಅವಧಿಯಲ್ಲಿ ಕಲಿತ ಕನ್ನಡ ಶಾಲೆಗಳ ವಿದ್ಯಾರ್ಥಿಗಳು. ಈ ಎಲ್ಲ ವಿದ್ಯಾರ್ಥಿಗಳ ಅನುಭವಗಳು ಭಿನ್ನವಾಗಿವೆ.
 
ಇಲ್ಲಿನ ಬರಹಗಳು ಕೇವಲ ತಾವು ಪಡೆದ ಕನ್ನಡ ಮಾಧ್ಯಮದ ಶಿಕ್ಷಣದ ಬಗ್ಗೆ ಮಾತನಾಡುವುದಿಲ್ಲ. ಅವುಗಳಲ್ಲಿ ಹಲಬಗೆಯ ವಿವರಗಳಿವೆ. ಅಂದಿನ ಶಿಕ್ಷಣ ಹೇಗಿತ್ತು ಮತ್ತು ಈಗ ಏನಾಗಿದೆ ಎಂಬುದರ ಕುರಿತೂ ಅವು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತವೆ.
 
ಶಿಕ್ಷಣ ಮಾಧ್ಯಮದ ಬಗೆಗಿನ ಹಲವರ ಚಿಂತನೆಗಳನ್ನು ಸಹ ಇದು ಒಳಗೊಂಡಿದೆ. ಇದರೊಂದಿಗೆ ಆಯಾ ಲೇಖಕರ ಕಾಲದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಚಿತ್ರಣ ಸಿಗುತ್ತದೆ. ಸನತ್‌ ಕುಮಾರ್‌ ಜೈನ್‌ ಅವರ ‘ಮುಂಬಯಿ ಕನ್ನಡ ಶಾಲೆಗಳು ಹಾಗೂ ರಾತ್ರಿ ಶಿಕ್ಷಣ’ ಲೇಖನ ಇಲ್ಲಿನ ವಿಶಿಷ್ಟ ಲೇಖನವಾಗಿದೆ. ಇಲ್ಲಿನ ಪುಟ್ಟ ಪುಟ್ಟ ಬರಹಗಳು ಓದುಗರ ನೆನಪಿನ ಪುಟಗಳನ್ನು ಮತ್ತೆ ತೆರೆದು ನೇವರಿಸುವಂತಿವೆ. ಮತ್ತು ಬಾಲ್ಯಕಾಲದ ಆತ್ಮೀಯ ದಾಖಲು ಈ ಜ್ಞಾಪಕ ಚಿತ್ರಶಾಲೆ.
ಸಂದೀಪ ನಾಯಕ 
Comments (Click here to Expand)
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ
ವಚನ ವರ್ಷ
ವಚನ ವರ್ಷ
ಸಂ: ಡಾ. ಬಸವರಾಜ ಸಾದರ