ಕನ್ನಡ ದೇಸಿ ಪರಂಪರೆ

ಕನ್ನಡ–ಕರ್ನಾಟಕದ ನಿಜ ಚಹರೆಗಳ ಹುಡುಕಾಟ


ಲೇಖಕ : ಹಿ.ಚಿ. ಬೋರಲಿಂಗಯ್ಯ
ಪ್ರಕಾಶಕರು : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪ್ರಕಟವಾದ ವರ್ಷ : ...
ಪುಟ : 358
ರೂ : ರೂ. 260
ಜಾನಪದ ವಿದ್ವಾಂಸ ಹಿ.ಚಿ. ಬೋರಲಿಂಗಯ್ಯ ಕನ್ನಡದ್ದೇ ಆದ ದೇಸಿ ಪರಂಪರೆಯನ್ನು ಜನಪದರಲ್ಲಿ, ಜಾನಪದದಲ್ಲಿ ಹುಡುಕಲು ಮಾಡಿದ ಪ್ರಯತ್ನ ಅವರ ‘ಕನ್ನಡ ದೇಸಿ ಪರಂಪರೆ’ ಪುಸ್ತಕದಲ್ಲಿದೆ.
 
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಾಚೀನತೆಯನ್ನು ಲಿಖಿತ ಆಕರ, ಶಿಷ್ಟ ಪರಂಪರೆಯಲ್ಲಿ ನಮ್ಮ ಸಂಶೋಧಕರು ಹುಡುಕಿರುವುದು ಒಬ್ಬ ಜಾನಪದ ವಿದ್ವಾಂಸರಾಗಿ ಅವರಿಗೆ ಒಪ್ಪಿತವಾದ ಸಂಗತಿಯಲ್ಲ. ಬದಲಾಗಿ, ಅವರು ಕನ್ನಡ ನಾಡಿನ ಸಂಸ್ಕೃತಿ ಏನು ಎಂಬುದನ್ನು ನಮ್ಮ ಮೌಖಿಕ ಪರಂಪರೆಯಲ್ಲೇ ಹುಡುಕಬೇಕು ಎನ್ನುವುದು ಅವರ ನಿಲುವು.
 
‘...ಈ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಭಿನ್ನ ಧಾರೆಯಲ್ಲಿ ಕಟ್ಟಿಕೊಂಡು ಬಂದುದು ಬುಡಕಟ್ಟು ಮತ್ತು ಶ್ರಮಜೀವಿ ವರ್ಗಗಳ ಅಭಿವ್ಯಕ್ತಿಕ್ರಮವೆನಿಸಿದ ಜಾನಪದ ಮಾತ್ರ. ಆದರೆ ಸಾವಿರಾರು ವರ್ಷಗಳ ವೈದಿಕ ಪ್ರಭಾವ ಮತ್ತು ನೂರಾರು ವರ್ಷಗಳ ವಸಾಹತು ಹೇರಿಕೆ ಪರಿಣಾಮ ನಮ್ಮಲ್ಲಿ ಅರ್ಧಸತ್ಯದ ಚರಿತ್ರೆಯೊಂದು ನಿರ್ಮಾಣವಾಯಿತು.
 
ಈ ಬಗೆಗಿನ ಪಂಡಿತರ ‘ಜಾಣಮರೆವು’ ಶತಮಾನಗಳಿಂದಲೂ ಮುಂದುವರಿದುಕೊಂಡೇ ಬಂದಿತು’ ಎಂದು ತಮ್ಮ ಅರಿಕೆಯಲ್ಲಿ ತಮ್ಮ ಬರವಣಿಗೆಗೆ ಪ್ರೇರಣೆ ಕೊಟ್ಟಿರುವ, ಹಿನ್ನೆಲೆಯಾಗಿರುವ ವಿಷಯದ ಬಗ್ಗೆ ಬೋರಲಿಂಗಯ್ಯ ಅವರು ಬರೆದುಕೊಂಡಿದ್ದಾರೆ.
 
ಕನ್ನಡದ ಪ್ರಾಚೀನತೆ ಮಾತ್ರವಲ್ಲ, ಅದರ ಅನನ್ಯತೆಯನ್ನು ಗುರುತಿಸುವಾಗಲೂ ಅದನ್ನು ಆಳಿದ ಅರಸರು, ಯುದ್ಧಗಳ ಇತಿಹಾಸವನ್ನು, ಪ್ರಾಚೀನ ಲಿಖಿತ ಸಾಹಿತ್ಯ, ಶಾಸನಗಳನ್ನು ಆಧಾರವಾಗಿಟ್ಟುಕೊಳ್ಳುವುದನ್ನು ಅನೇಕ ಚಿಂತಕರು ಪ್ರಶ್ನಿಸುತ್ತ ಬಂದಿದ್ದಾರೆ. ಇಲ್ಲಿ ಅದಕ್ಕೆ ಬದಲಾಗಿ ಮೌಖಿಕ ಜಾನಪದವನ್ನು ಆಕರವಾಗಿಟ್ಟುಕೊಂಡು ತಮ್ಮದೇ ದೇಸಿ ಚಿಂತನೆಯನ್ನು ಇಲ್ಲಿ ಬೋರಲಿಂಗಯ್ಯ ಅವರು ಕಟ್ಟಲು ಪ್ರಯತ್ನಿಸಿದ್ದಾರೆ.
 
ನಮ್ಮ ಸಂಶೋಧನೆಗಳು ವಸಾಹತುಶಾಹಿ ಚಿಂತನೆಯಿಂದ ಬಿಡಿಸಿಕೊಳ್ಳದ ಪರಿಣಾಮ ಇದು. ಇದಕ್ಕೆ ವಿರುದ್ಧ ದಿಕ್ಕಿನಲ್ಲಿ, ನೆಲೆಯಲ್ಲಿ ಬೋರಲಿಂಗಯ್ಯ ತಮ್ಮ ವಾದವನ್ನು ಮಂಡಿಸಿದ್ದಾರೆ, ಕಟ್ಟಿದ್ದಾರೆ. (ಜಾನಪದ ಅಧ್ಯಯನವೂ ವಸಾಹತುಶಾಹಿ ಚಿಂತನೆಯ ಫಲವಾಗಿಯೇ ನಮಗೆ ಸಿಕ್ಕಿದ್ದು!).
 
ಅದಕ್ಕಾಗಿ ಅವರು ಸಂಗಂ ಸಾಹಿತ್ಯ ಹಾಗೂ ಕವಿರಾಜಮಾರ್ಗದ ಕನ್ನಡ ಜನಪದದ ಪ್ರಾಚೀನತೆಯನ್ನು, ನಮ್ಮ ಪ್ರಾಚೀನ ಕವಿಗಳು ಅನುಸರಿಸಿದ ದೇಸಿ ಮಾರ್ಗವನ್ನು ಇಲ್ಲಿ ಪರಿಶೀಲಿಸಿದ್ದಾರೆ. ಇದಕ್ಕಾಗಿ ಅವರು ಪ್ರಕಟಿತ ಆಕರಗಳನ್ನು ಬಳಸಿಕೊಳ್ಳುತ್ತಾರೆ.
 
ಜೊತೆಗೆ ಅವರು ಕನ್ನಡ ಜನಪದರಲ್ಲಿ ಆಚರಣೆಯಲ್ಲಿರುವ ಹಗರಣದಂತಹ ಆಚರಣೆ, ಬಲೀಂದ್ರ ಹಾಗೂ ನಾಗಾರಾಧನೆಗಳನ್ನು ತಮ್ಮ ಅಧ್ಯಯನದಲ್ಲಿ ಉಲ್ಲೇಖಿಸುತ್ತಾರೆ. 
 
ಪಂಪ–ರನ್ನರಂತಹ ಕವಿಗಳ ಪ್ರಾಚೀನ ಕಾವ್ಯಕ್ಕೆ ಪ್ರೇರಣೆ ಕೊಟ್ಟ ದೇಸಿ ಮೌಖಿಕ ಪರಂಪರೆಯ ಕಾವ್ಯಗಳೂ ಅವರ ಅಧ್ಯಯನದ ವ್ಯಾಪ್ತಿಯಲ್ಲಿವೆ. ಜನಪದ ಮಹಾಕಾವ್ಯಗಳಾದ ‘ಮಂಟೇಸ್ವಾಮಿ’, ಮಲೆಮಾದೇಶ್ವರ’, ‘ಜುಂಜಪ್ಪ’ ಹೇಗೆ ದ್ರಾವಿಡ ಮೌಲ್ಯಗಳನ್ನು ಪ್ರತಿನಿಧಿಸುವ ಕಥನಕಾವ್ಯಗಳಾಗಿವೆ ಎಂಬುದನ್ನು ಲೇಖಕರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಜಾನಪದದ ಎಲ್ಲ ಆಕರಗಳನ್ನು ಬಳಸಿಕೊಂಡು ಬರೆಯಲಾಗಿರುವ ಈ ಅಧ್ಯಯನವು ಶಿಷ್ಟ ಪರಂಪರೆಯ ವಿರುದ್ಧ ದಿಕ್ಕಿನಲ್ಲಿದೆ. ಮತ್ತು ಅದನ್ನು ಹಲವು ಕಡೆ ಪ್ರಶ್ನಿಸುತ್ತದೆ.
 
ವೈದಿಕ ಸಂಸ್ಕೃತಿಗೆ ವಿರುದ್ಧ ದಿಕ್ಕಿನಲ್ಲಿರುವ ಈ ಅಧ್ಯಯನವು ತನ್ನ ವಾದ ಮಂಡನೆಗಾಗಿ ಬುಡಕಟ್ಟು ಆಚರಣೆ, ದಲಿತ, ಶೂದ್ರ ಆರಾಧನೆಗಳನ್ನು ಆಶ್ರಯಿಸುತ್ತದೆ. ಈತನಕ ಲಿಖಿತ ಆಕರಗಳನ್ನು ಅವಲಂಬಿಸಿದ ಅಧ್ಯಯನಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ದೇಸಿತನವನ್ನು ಅವರ ಈ ಅಧ್ಯಯನವು ಕಾಣಿಸಿದೆ.
 
ಇದು ಮಾತ್ರವಲ್ಲ, ಶಿಷ್ಟಮಾರ್ಗಕ್ಕೆ ಅಂಟಿಕೊಂಡ ಹೊಸಗನ್ನಡದ ವಿದ್ವಾಂಸರ ಪ್ರತಿಪಾದನೆಗಳನ್ನು ಈ ಅಧ್ಯಯನವು ನಿರಾಕರಿಸುತ್ತದೆ. ಕನ್ನಡ ಜಾನಪದದಲ್ಲಿರುವ ದೇಸಿತನವನ್ನು ಮುನ್ನಲೆಗೆ ತರುವ ಪ್ರಯತ್ನ ಇಲ್ಲಿ ನಡೆದಿದೆ. ಅದಕ್ಕೆ ಅಪ್ಪಟ ಕನ್ನಡದ್ದೇ ಆದ ದೇಸಿಯ ಚಹರೆಗಳು ಸೇರಿಕೊಂಡಿವೆ. ಅವು ಕನ್ನಡ ಅಧ್ಯಯನವನ್ನು ಎಷ್ಟು ಮುಂದಕ್ಕೆ ಕರೆದೊಯ್ಯಬಲ್ಲವು ಎಂಬುದನ್ನು ಮುಂದಿನ ದಿನಮಾನಗಳೇ ಉತ್ತರಿಸಲಿವೆ.
ಸಂದೀಪ ನಾಯಕ
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.