ಮಾಧ್ಯಮಗಳು ಮತ್ತು ಭಾಷಾಂತರ

ವೈಯಕ್ತಿಕ ಯೋಜನೆಯ ಫಲಿತ


ಲೇಖಕ : ಡಾ.ಎ. ಮೋಹನ ಕುಂಟಾರ್‌
ಪ್ರಕಾಶಕರು : ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗ, ಹಂಪಿ, ವಿದ್ಯಾರಣ್ಯ – 583276
ಪ್ರಕಟವಾದ ವರ್ಷ : ...
ಪುಟ : 142
ರೂ : ₹120
ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕಾಗಿ ತಾವು ಮಾಡಿಕೊಂಡಿದ್ದ ಸಿದ್ಧತೆಗಳನ್ನೇ ಇನ್ನಷ್ಟು ವ್ಯವಸ್ಥಿತಗೊಳಿಸಿ ‘ಮಾಧ್ಯಮ ಮತ್ತು ಭಾಷಾಂತರ’ ಎಂಬ ಕೃತಿಯನ್ನು ರಚಿಸಿದ್ದಾರೆ ಡಾ.ಮೋಹನ ಕುಂಟಾರ್‌.  ‘ಈ ಪುಸ್ತಕವು ನಾನು ವಿಭಾಗದಲ್ಲಿ ನಿರ್ವಹಿಸಿದ ವೈಯಕ್ತಿಕ ಯೋಜನೆಯ ಫಲಿತ’ ಎಂದು ಅವರೇ ತಮ್ಮ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ. 
 
ಮಾಧ್ಯಮಗಳಲ್ಲಿ, ಅದರಲ್ಲಿಯೂ ಪತ್ರಿಕಾ ಮಾಧ್ಯಮಗಳಲ್ಲಿ ಅನುವಾದ ಎನ್ನುವುದು ಬಹುಮುಖ್ಯವಾದ ಪ್ರಕ್ರಿಯೆ. ಜಗತ್ತಿನ ಎಲ್ಲೆಡೆಯ ಸಂಗತಿಗಳು ಸುದ್ದಿಮನೆಗೆ ಹರಿದುಬರುವುದು ಇಂಗ್ಲಿಷ್‌ ಭಾಷೆಯಲ್ಲಿ. ಅದನ್ನು ಸಮರ್ಥವಾಗಿ ಅನುವಾದಿಸಿ ಓದುಗರಿಗೆ ತಲುಪಿಸುವ ಜವಾಬ್ದಾರಿಯೂ ಉಪ ಸಂಪಾದಕನದಾಗಿರುತ್ತದೆ. ಆದ್ದರಿಂದ ಅನುವಾದ ಪತ್ರಿಕಾ ಕಚೇರಿಯಲ್ಲಿ ಅನಿವಾರ್ಯ ಕಾರ್ಯ.
 
ಮಾಧ್ಯಮ ವಲಯದಲ್ಲಿ ಭಾಷಾಂತರಕ್ಕೆ ಇರುವ ಮಹತ್ವ, ಅದರ ಹಿಂದೆ ಕೆಲಸ ಮಾಡುವ ಸಂವಹನ ಸಿದ್ಧಾಂತಗಳು, ಭಾಷಾಂತರದ ವಿವಿಧ ಹಂತಗಳನ್ನು ಈ ಕೃತಿಯಲ್ಲಿ ಲೇಖಕರು ಚರ್ಚಿಸಿದ್ದಾರೆ. 
 
ಸಾಮಾನ್ಯವಾಗಿ ಪತ್ರಿಕೋದ್ಯಮದ ಬಗ್ಗೆ ಪಾಠ ಮಾಡುವ ಬಹುತೇಕ ಮೇಷ್ಟ್ರುಗಳಿಗೆ ಪತ್ರಿಕಾ ಕಚೇರಿಯ ಪರಿಚಯವೇ ಇರುವುದಿಲ್ಲ. ಆದರೆ, ಮೋಹನ್‌ ಕುಂಟಾರ್‌ ‘ಪ್ರತಿಸೂರ್ಯ’ ಎಂಬ ಕಾಸರಗೋಡಿನ ದೈನಿಕದಲ್ಲಿ ಕೆಲಸ ಮಾಡಿದ ಅನುಭವವೂ ಇರುವವರು. ಆದ್ದರಿಂದ ಸಾಧ್ಯವಾದಷ್ಟೂ ಕನ್ನಡದ ಜನಪ್ರಿಯ ದಿನಪತ್ರಿಕೆಗಳಿಂದಲೇ ತಮ್ಮ ಮಾತಿಗೆ ನಿದರ್ಶನಗಳನ್ನು ತೆಗೆದುಕೊಂಡಿದ್ದಾರೆ.
 
ಒಂದೇ ಶಬ್ದ ಭಿನ್ನ ಸಂದರ್ಭಗಳಲ್ಲಿ ಕೊಡುವ ಭಿನ್ನ ಅರ್ಥಗಳು, ಸಾಲುಗಳ ಒಟ್ಟಾರೆ ವಾಕ್ಯದ ಅರ್ಥವನ್ನು ಗ್ರಹಿಸದೇ ಅಕ್ಷರಶಃ ಅನುವಾದ ಮಾಡಿದರೆ ಆಗುವ ಅನಾಹುತಗಳನ್ನು ಹೇಳುವಾಗ ಪಿ.ಟಿ.ಐ, ಯು.ಎನ್‌.ಐ, ರಾಯಿಟರ್ಸ್‌ನಂಥ ಸುದ್ದಿಸಂಸ್ಥೆಗಳ ಮೂಲ ಪಠ್ಯ ಮತ್ತು ಅದರ ಅನುವಾದ ಎರಡನ್ನೂ ಉಲ್ಲೇಖಿಸಿದ್ದಾರೆ. ಮಾಧ್ಯಮ ವಿದ್ಯಾರ್ಥಿಗಳು ಇದನ್ನು ಒಂದು ಕೈಪಿಡಿಯಾಗಿಯೂ ಓದಿಕೊಳ್ಳಬಹುದು.  
Comments (Click here to Expand)
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ