‘ವಾಣಿಯರಿವಿನ ಬೆಳಗು’

ಮನಸ್ಥಿತಿ– ಪರಿಸ್ಥಿತಿಗಳ ಇಣುಕುನೋಟ


ಲೇಖಕ : ಡಾ.ಸಾವಿತ್ರಿಬಾಯಿ ಪವಾರ
ಪ್ರಕಾಶಕರು : ಪರಸ್ಪರ ಪ್ರಕಾಶನ ಚಿಕ್ಕನಹಳ್ಳಿ, ಸೂಲಿಕೆರೆ. ಬೆಂಗಳೂರು– 560060
ಪ್ರಕಟವಾದ ವರ್ಷ : ..
ಪುಟ : 228
ರೂ : ₹175
ಕನ್ನಡದ ಮೊದಲ ಉಪಲಬ್ಧ ಕೃತಿ ‘ಕವಿರಾಜಮಾರ್ಗ’ದಿಂದ ಮುದ್ದಣ ಕವಿಯವರೆಗಿನ ಕನ್ನಡಕಾವ್ಯಗಳಲ್ಲಿನ ನಾಂದಿಪದ್ಯಗಳನ್ನು ಅಭ್ಯಸಿಸಿ ರೂಪಿಸಿದ ಕೃತಿ ‘ವಾಣಿಯರಿವಿನ ಬೆಳಗು’. ಡಾ.ಸಾವಿತ್ರಿಬಾಯಿ ಪವಾರ ಅವರ ಪಿಎಚ್‌.ಡಿ ಸಂಶೋಧನಾ ಕೃತಿ ಇದು. 
 
ಕನ್ನಡ ಮಹಾಕಾವ್ಯಗಳಲ್ಲಿ ನಾಂದಿಪದ್ಯಗಳು ಒಂದು ಪದ್ಧತಿಯಾಗಿಯೇ ಬೆಳೆದುಬಂದಿವೆ. ಇದೊಂದು ಬಗೆಯಲ್ಲಿ ಮನೆಗೆ ಬಂದ ಅತಿಥಿಗಳನ್ನು ಪಡಸಾಲೆಯಲ್ಲಿ ಕೂಡಿಸಿ ಕ್ಷೇಮ– ಕುಶಲ, ಬಂದ ಉದ್ದೇಶಗಳನ್ನು ವಿಚಾರಿಸಿದಂತೆ.  
 
ಕಾವ್ಯದ ಉದ್ದೇಶ, ಕವಿಯ ಬದುಕಿನ ವಿವರಗಳು, ಕವಿ ಕಟ್ಟಿಕೊಂಡ ಕಾವ್ಯಮೀಮಾಂಸೆಯ ಸುಳಿವುಗಳು, ಕವಿಯ ಇಷ್ಟದೇವತೆಯ ವಿವರಗಳು, ಆಶ್ರಯದಾತನ ಸ್ತುತಿ ಎಲ್ಲವೂ ಸಿಗುವುದು ಈ ನಾಂದಿಪದ್ಯಗಳ ಭಾಗದಲ್ಲಿಯೇ. ಕನ್ನಡ ಪ್ರಾಚೀನ ಕಾವ್ಯಗಳಲ್ಲಿನ ನಾಂದಿಪದ್ಯಗಳ ಒಟ್ಟಾದ ಓದು ಮತ್ತು ಅದು ನೀಡಿದ ಹೊಳಹುಗಳು ಈ ಕೃತಿಯ ಮುಖ್ಯ ಹೂರಣ ಎನ್ನಬಹುದು. 
 
ಒಟ್ಟು ಹತ್ತು ಅಧ್ಯಾಯಗಳಲ್ಲಿ ವಿಂಗಡಿತವಾಗಿರುವ ಈ ಪ್ರಬಂಧದಲ್ಲಿ ನಾಂದಿ ಪದ್ಯಗಳ ಉದ್ದೇಶ, ಅವುಗಳ ಗುಣಲಕ್ಷಣಗಳು, ಬೇರೆ ಬೇರೆ ಕಾಲ–ದೇಶದ ಕವಿಗಳಲ್ಲಿ ಇರುವ ವ್ಯತ್ಯಾಸಗಳು, ಕಾವ್ಯ ಪರಂಪರೆಯಲ್ಲಿ ನಾಂದಿಪದ್ಯಗಳಿಗಿರುವ ಸ್ಥಾನಮಾನಗಳು, ಕನ್ನಡ ಮತ್ತು ಸಂಸ್ಕೃತ ಕಾವ್ಯಗಳ ನಾಂದಿಪದ್ಯಗಳ ತೌಲನಿಕ ಅಧ್ಯಯನ, ಇಷ್ಟದೇವತಾ ಸ್ತುತಿ, ಕುಕವಿ ನಿಂದೆ, ನಿಂದಾಸ್ತುತಿ ಹೀಗೆ ಹಲವು ಅಂಶಗಳ ಬಗ್ಗೆ ಚರ್ಚಿಸಲಾಗಿದೆ. 
 
ಕಾವ್ಯವನ್ನು ಮೆಚ್ಚದವರನ್ನು, ತಪ್ಪಾಗಿ ಅರ್ಥೈಸುವವರನ್ನು ಕವಿಗಳು ಹೇಗೆ ಟೀಕಿಸುತ್ತಾರೆ ಎನ್ನುವುದನ್ನು ಆಸ್ವಾದಿಸುವುದೇ ಒಂದು ಮೋಜು. ಕವಿ ಕುಮಾರವ್ಯಾಸ ಕಾವ್ಯ ನಿಂದಕರನ್ನು ಕ್ರೂರ ಕರ್ಮಿಗಳು ಎನ್ನುತ್ತಾನೆ.
 
‘ಚೋರ ನಿಂದಿಸಿ ಶಶಿಯ ಬೈದೊಡೆ/
ಕ್ಷೀರವನು ಕ್ಷಯರೋಗಿ ಹಳಿದರೆ/
ವರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು
ಭಾರತದ ಕಥನ ಪ್ರಸಂಗವ/
ಕ್ರೂರ ಕರ್ಮಿಗಳೆತ್ತ ಬಲ್ಲರು/
ಘೋರ ರೌರವವನು ಕೆಡಿಸುಗುಕೇಳ್ದ ಸಜ್ಜನರ’
ಇಲ್ಲಿ ಕುಮಾರವ್ಯಾಸ ಕಾವ್ಯನಿಂದಕರನ್ನು ಹಳಿಯಲೂ ಈ ಕಾವ್ಯವನ್ನು ಆರಾಧಿಸುವವರಿಗೆ ಸಿಗುವ ಫಲಶ್ರುತಿಯನ್ನು ಪ್ರತಿಪಾದಿಸಲೂ ಒಂದೇ ಕಾವ್ಯವನ್ನು ಬಳಸಿಕೊಂಡಿದ್ದಾನೆ. 
 
ಇಂಥ ಹಲವು ಕುತೂಹಲಕಾರಿ ಅಂಶಗಳು ಈ ಹೊತ್ತಿಗೆಯಲ್ಲಿ ಸಿಗುತ್ತವೆ. ಹಲವು ಮಹಾಕಾವ್ಯಗಳ ನಾಂದಿಪದ್ಯಗಳನ್ನು ಒಟ್ಟಿಗೇ ನೋಡುವುದೆಂದರೆ ಅದು ಆ ಕಾಲಮಾನದ ಮನಸ್ಥಿತಿ– ಪರಿಸ್ಥಿತಿಗಳ ಇಣುಕುನೋಟವೂ ಹೌದು. 
 
ಜತೆಗೆ, ಕಾಲದಿಂದ ಕಾಲಕ್ಕೆ ಆ ಮನಸ್ಥಿತಿ ಬದಲಾಗುತ್ತ ಬಂದ ದಾರಿಯ ಸಿಂಹಾವಲೋಕನ ಕೂಡ ಅದರಿಂದ ಸಾಧ್ಯ. ಈ ಪುಸ್ತಕದ ಉದ್ದೇಶವೂ ಅದೇ ಆಗಿದೆ. ಅಕಾಡೆಮಿಕ್‌ ಶಿಸ್ತಿನ ಚೌಕಟ್ಟು ಈ ಕೃತಿಯ ಶಕ್ತಿ ಮತ್ತು ಮಿತಿ ಎರಡೂ ಆಗಿದೆ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.