ಮಿಶೆಲ್‌ ಫುಕೋ: ಸತ್ಯ, ಅಧಿಕಾರ ಮತ್ತು ಮುಕ್ತ ಮಾತುಕತೆ

ಫುಕೋ ವಿಚಾರಗಳೊಂದಿಗೆ ಭಾರತೀಯ ಮನಸ್ಸುಗಳು ನಡೆಸಿದ ಅನುಸಂಧಾನ


ಲೇಖಕ : ಎ.ಪಿ. ಅಶ್ವಿನ್‌ ಕುಮಾರ್‌
ಪ್ರಕಾಶಕರು : ಪರಸ್ಪರ ಪ್ರಕಾಶನ, ಚಿಕ್ಕನಹಳ್ಳಿ, ಸೂಲಿಕೆರೆ, ಬೆಂಗಳೂರು–60
ಪ್ರಕಟವಾದ ವರ್ಷ : ..
ಪುಟ : 204
ರೂ : ₹185
1983ರಲ್ಲಿ ಬರ್ಕ್‌ಲೀಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಫ್ರಾನ್ಸ್‌ನ ಚಿಂತಕ ಮಿಶೆಲ್‌ ಫುಕೋ ಇಂಗ್ಲಿಷ್‌ನಲ್ಲಿ ನೀಡಿದ ಆರು ಉಪನ್ಯಾಸಗಳ ಕನ್ನಡಾನುವಾದ ‘ಮಿಶೆಲ್‌ ಫುಕೋ– ಸತ್ಯ, ಅಧಿಕಾರ ಮತ್ತು ಮುಕ್ತ ಮಾತುಕತೆ’ ಕೃತಿ. ತುಮಕೂರು ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಆರು ಸ್ನಾತಕೋತ್ತರ ವಿದ್ಯಾರ್ಥಿಗಳು ಅನುವಾದಿಸಿರುವ ಈ ಪುಸ್ತಕವನ್ನು ಎ.ಪಿ. ಅಶ್ವಿನ್‌ ಕುಮಾರ್‌ ಸಂಪಾದಿಸಿದ್ದಾರೆ. 
 
ಇದು ಬರಿ ಮಿಶೆಲ್‌ ಫುಕೋನ ಉಪನ್ಯಾಸಗಳ ಸಂಗ್ರಹವಷ್ಟೇ ಅಲ್ಲ. ಅವನ ವಿಚಾರಗಳೊಂದಿಗೆ ಭಾರತೀಯ ಮನಸ್ಸುಗಳು ನಡೆಸಿದ ಅನುಸಂಧಾನವೂ ಹೌದು. ಪುಸ್ತಕದ ಆರಂಭದಲ್ಲಿ ಎ.ಪಿ. ಅಶ್ವಿನ್‌ ಕುಮಾರ್‌ ಬರೆದಿರುವ ‘ಮಿಶೆಲ್ ಫುಕೋ: ಒಂದು ಪರ್ಯಾಯ ಪ್ರವೇಶ’ ಮತ್ತು ಕೊನೆಯಲ್ಲಿರುವ ವಿವೇಕ ಧಾರೇಶ್ವರ ಅವರ ‘ಮಾರ್ಕ್ಸ್‌, ಫುಕೋ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಸೆಕ್ಯುಲರೀಕರಣ’ ಎಂಬ ಲೇಖನಗಳು ಈ ಅನುಸಂಧಾನಕ್ಕೆ ಅರ್ಥಪೂರ್ಣ ನೆಲೆಗಟ್ಟು ಒದಗಿಸುವ ಹಾಗಿದೆ. 
 
ಫುಕೋ ನಿಜಕ್ಕೂ ಏನು ಹೇಳಹೊರಟಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದರ ಜತೆಜತೆಗೆ ಅವನ ಚಿಂತನೆಯ ಬೆಳಕಿನಲ್ಲಿ ನಮ್ಮ ಸಮಕಾಲೀನ ಸಮಾಜದ ಸಂಕೀರ್ಣ ಸಮಸ್ಯೆಗಳನ್ನು ಅರ್ಥಮಾಡಿ ಕೊಳ್ಳುವ ಹೊಸ ದಾರಿ ಸಿಗಬಹುದೆ ಎಂಬ ಹುಡು ಕಾಟವೂ ಈ ಎರಡು ಲೇಖನಗಳಲ್ಲಿ ಎದ್ದು ಕಾಣುತ್ತದೆ. ಈ ಕಾರಣಕ್ಕಾಗಿಯೇ ಪುಸ್ತಕವು ಫುಕೋನ ಚಿಂತನೆಗಳನ್ನು ಅರ್ಥಮಾಡಿ ಕೊಳ್ಳುವುದಕ್ಕಿಂತ ಹೆಚ್ಚಿನದಕ್ಕೆ ಪ್ರೇರೇಪಿಸುತ್ತದೆ. 
 
ಈ ಉಪನ್ಯಾಸವು ಗ್ರೀಕ್‌ ಪರಿಕಲ್ಪನೆಯಾದ ‘ಪೆರೇಶಿಯಾ’ ಅಥವಾ ‘ಸತ್ಯವನ್ನು ಹೇಳುವ ಪ್ರಾಮಾಣಿಕತೆ’ಯ ಅಧ್ಯಯನಕ್ಕೆಂದೇ ಮೀಸಲಾಗಿದೆ. ಒಟ್ಟು ಐದು ಅಧ್ಯಾಯಗಳಲ್ಲಿ ವಿಂಗಡಿತಗೊಂಡು, ಪೆರೇ ಶಿಯಾ, ಆ ಪದದ ಅರ್ಥ, ಉಗಮ, ಪ್ರಜಾಪ್ರಭುತ್ವ ಸಂಸ್ಥೆಗಳ ಬಿಕ್ಕಟ್ಟಿನ ಸಂದರ್ಭದಲ್ಲಿ ಪೆರೇಶಿಯಾ, ಆತ್ಮೋದ್ಧಾರದಲ್ಲಿ ಪೆರೇಶಿಯ ಹೀಗೆ ವಿವಿಧ ಹಂತಗಳಲ್ಲಿ ವಿಸ್ತಾರವಾಗಿ ಚರ್ಚಿಸುತ್ತದೆ.
 
ಅಶ್ವಿನ್‌ ಅವರು ತಮ್ಮ ಲೇಖನದಲ್ಲಿ ಹೇಳಿರುವಂತೆ ‘ಫುಕೋನ ನಿಜವಾದ ಆಸಕ್ತಿಯಿರುವುದು ಪಾಶ್ಚಿಮಾತ್ಯ ಸಂಸ್ಕೃತಿಯ ಬೌದ್ಧಿಕ ಅಡಿಪಾಯಗಳನ್ನು ಶೋಧಿಸುವುದರಲ್ಲಿ. ಅವನೇ ಹೇಳುವಂತೆ, ನಮ್ಮ ಸಮಕಾಲೀನ ಪ್ರಪಂಚದ ಒಂದು ದೀರ್ಘ ಬೌದ್ಧಿಕ ವಂಶಾವಳಿಯನ್ನು ರಚಿಸುವುದು, ಪಶ್ಚಿಮವು ಮರೆತಿರುವ ತನ್ನ ತಾತ್ವಿಕ ಮೂಲಬೇರುಗಳನ್ನು ಪುನಾ ಅದಕ್ಕೆ ನೆನಪಿಸಿ ಕೊಡುವುದು, ಹಾಗೆ ಮಾಡುತ್ತಾ, ನಮ್ಮ ಸಮಕಾಲೀನ ಪ್ರಪಂಚವನ್ನು ಹೊಸತೇ ಆಗಿ ನೋಡಲು ಸಾಧ್ಯವಾಗಿಸಿಕೊಳ್ಳುವುದು ಅವನ ಉದ್ದೇಶ’.
 
ಇಂದು ನಾವೂ ವಿಸ್ಮೃತಿಗೆ ಸರಿದಿರುವ ನಮ್ಮ ಸಾಂಸ್ಕೃತಿಕ ಜ್ಞಾನದ ಮೂಲ ನೆಲೆಗಳನ್ನು ಮರು ಸ್ಮರಿಸಿಕೊಳ್ಳಬೇಕಾದ ಕಾಲದಲ್ಲಿದ್ದೇವೆ. ಆ ಕಾರಣಕ್ಕಾಗಿಯೇ ನಮಗೆ ಫುಕೋನಂಥ ಚಿಂತನಧಾರೆ ಮುಖ್ಯವಾಗುತ್ತದೆ.
 
ಇದಕ್ಕಿಂತ ಮುಖ್ಯವಾಗಿ ಜಡ್ಡುಗಟ್ಟಿರುವ ಇಂದಿನ ವಿಶ್ವವಿದ್ಯಾಲಯಗಳ ವಾತಾವರಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಒಬ್ಬ ಚಿಂತಕನ ವಿಚಾರಗಳನ್ನು ಇಷ್ಟು ಗಂಭೀರವಾಗಿ ಅಭ್ಯಸಿಸಿ ಅನುವಾದ ಮಾಡಿರುವುದೇ ಮಹತ್ವದ ಸಂಗತಿ. ಆದ್ದರಿಂದ ಈ ಪುಸ್ತಕ ಅಕಾಡೆಮಿಕ್‌ ವಲಯದಲ್ಲಿಯೂ ಒಂದು ಹೊಸ ಮಾದರಿ ಎನ್ನಬಹುದು. 
 
Comments (Click here to Expand)
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ