ಕಿರುವೆರಳ ಸಟೆ

ಪುಟ:96 ಬೆಲೆ: ₹75


ಲೇಖಕ : ಶ್ರೀಧರ ಹೆಗಡೆ ಭದ್ರನ್‌
ಪ್ರಕಾಶಕರು : ಅಭಿನವ, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು– 560040
ಪ್ರಕಟವಾದ ವರ್ಷ : .
ಪುಟ : 96
ರೂ : ₹75

ಹಳೆಗನ್ನಡ–ನಡುಗನ್ನಡ ಕಾವ್ಯವನ್ನು ಆಧುನಿಕ ಕನ್ನಡ ಸಾಹಿತ್ಯಾಸಕ್ತರಿಗೆ ಸುಲಭಕ್ಕೆ ಎಟುಕಿಸುವ ಉದ್ದೇಶದಿಂದ ಹ್ರಸ್ವಗೊಳಿಸಿ ಆಯ್ದ ಭಾಗವನ್ನು ಸಂಪಾದಿಸುವ ಕೆಲಸವನ್ನು ಹಲವರು ಮಾಡಿದ್ದಾರೆ. ಶ್ರೀಧರ ಹೆಗಡೆ ಭದ್ರನ್‌ ಅವರ ‘ಕಿರುವೆರಳ ಸಟೆ’ ಕೃತಿಯೂ ಇಂಥದ್ದೇ ಒಂದು ಪ್ರಯತ್ನ. ಕವಿ ರತ್ನಾಕರವರ್ಣಿ ನಡುಗನ್ನಡದಲ್ಲಿ ಬರೆದಿರುವ ‘ಭರತೇಶ ವೈಭವ; ಮಹಾಕಾವ್ಯದಲ್ಲಿನ ನೂರೈವತ್ತು ಪದ್ಯಗಳನ್ನು ಆಯ್ದು ‘ಕಿರುವೆರಳ ಸಟೆ’ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ.

ಕಾವ್ಯದ ಜತೆಗೆ ಕವಿಯ ಬಗೆಗಿನ ವಿವರಗಳು, ‘ಭರತೇಶ ವೈಭವ’ವನ್ನು ಹೀಗೆ ಸಾರಸಂಗ್ರಹವಾಗಿ ಪ್ರಕಟಿಸಿದ ಹಿಂದಿನ ಪ್ರಯತ್ನಗಳು, ಕಾವ್ಯದ ಕಥೆ, ತಾತ್ವಿಕ, ಸಾಹಿತ್ಯಿಕ ನೆಲೆಗಳ ಬಗೆಗೂ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. ಇದು ಕಾವ್ಯದ ಪರಿಚಯಕ್ಕೊಂದು ಉತ್ತಮ ಪ್ರವೇಶಿಕೆ ಒದಗಿಸುವಂತಿದೆ.

ಅದರ ಜತೆಗೆ ರತ್ನಾಕರವರ್ಣಿ ಅನುಸರಿಸಿರುವ ಪ್ರಕಾರ, ಶೈಲಿ, ಛಂದಸ್ಸು, ಭಾಷೆ, ಕಥನ ವಿಧಾನಗಳ ಕಿರುಪರಿಚಯವನ್ನೂ ಕೊಡಲಾಗಿದೆ. ಭರತೇಶ ವೈಭವದ ಅಧ್ಯಯನಕ್ಕೆ ತೊಡಗುವವರಿಗೂ ಇದು ಉಪಯುಕ್ತಕಾರಿ ಆಗಬಲ್ಲದು.

ಭರತೇಶ ವೈಭವ ಕಾವ್ಯದ ಶ್ರೀಮಂತಿಕೆಯನ್ನು ಕೇವಲ ನೂರೈವತ್ತೈದು ಪದ್ಯಗಳಲ್ಲಿ ಆಸ್ವಾದಿಸುವುದು ಸಾಧ್ಯವೇ ಇಲ್ಲ. ಅದು ಈ ಕೃತಿಯ ಉದ್ದೇಶವೂ ಅಲ್ಲ. ಇಂದಿನ ಓದುಗರಲ್ಲಿ ಮೂಲಕೃತಿಯ ಬಗ್ಗೆ ಕುತೂಹಲ ಹುಟ್ಟಿಸಿ ಹೆಚ್ಚಿನ ಓದಿಗಾಗಿ ಪ್ರೇರೇಪಿಸುವುದೇ ಈ ಕೃತಿಯ ಮುಖ್ಯ ಉದ್ದೇಶ. ಅದಕ್ಕೆ ಅನುಗುಣವಾಗಿ ಪಾತ್ರಗಳ ಪರಿಚಯ, ಹಿನ್ನೆಲೆ, ಪದ್ಯಗಳ ಸರಳ ಗದ್ಯಾನುವಾದ ಹಳೆಗನ್ನಡ ಶಬ್ದಗಳ ಅರ್ಥ ಎಲ್ಲವನ್ನೂ ಸೇರಿಸಲಾಗಿದೆ. ಇದರಿಂದ ಹಳೆಗನ್ನಡಕ್ಕೆ, ಭರತೇಶ ವೈಭವ ಕೃತಿಗೆ ಪೂರ್ತಿ ಹೊಸಬರಾಗಿದ್ದವರಲ್ಲಿ ಓದಿನ ಕುತೂಹಲದ ಬೀಜ ಬಿತ್ತುವ ಕೃತಿ ಇದಾಗಿದೆ.

Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.