ಮಹಾನದಿಯ ಹರಿವಿನಗುಂಟ

ನದಿಗುಂಟ ಜನತೆಯ ನಂಟು


ಲೇಖಕ : ಸಿದ್ದು ಸತ್ಯಣ್ಣವರ್‌
ಪ್ರಕಾಶಕರು : ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು–560002
ಪ್ರಕಟವಾದ ವರ್ಷ : .
ಪುಟ : 190
ರೂ : ₹ 165
ಮಧ್ಯಪ್ರದೇಶದ ಒಂದು ಭಾಗವಾಗಿದ್ದ ಛತ್ತೀಸಗಡ ರಾಜ್ಯ ಉದಯವಾಗಿ 17 ವರ್ಷಗಳಾಗಿವೆ. ಬಸ್ತರ್‌ ಮತ್ತು ದಾಂತೇವಾಡ ಪ್ರದೇಶಗಳಲ್ಲಿ ಹೆಚ್ಚಿದ ನಕ್ಸಲ್‌ ಚಟುವಟಿಕೆಗಳು, ಇವುಗಳನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ನಡೆಸಿದ ಸಲ್ವಜುಡಂನಂತಹ ಆಕ್ರಮಣಕಾರಿ ಕ್ರಮಗಳಿಂದಾಗಿ ಪದೇ ಪದೇ ಪತ್ರಿಕೆಗಳ ಬಹುಪಾಲು ಜಾಗವನ್ನು ಛತ್ತೀಸಗಡ ಪಡೆದುಕೊಂಡಿತ್ತು. ಆ ರಾಜ್ಯದ ಬಗೆಗೆ ಪ್ರತಿಯೊಬ್ಬ ಓದುಗರಿಗೂ ಒಂದು ಕುತೂಹಲ ಇದ್ದೇ ಇರುತ್ತದೆ. ಇದನ್ನು ತಣಿಸುವ ಪ್ರಯತ್ನ ಮಾಡಿದ್ದಾರೆ ಲೇಖಕ ಸಿದ್ದು ಸತ್ಯಣ್ಣವರ್‌.
 
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸಾನುದಾನ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಛತ್ತೀಸಗಡದ ಸಾಂಸ್ಕೃತಿಕ, ಭೌಗೋಳಿಕ, ಐತಿಹಾಸಿಕ, ಪೌರಾಣಿಕ ಹಾಗೂ ಸಾಮಾಜಿಕ ಆಯಾಮಗಳನ್ನು ತಮಗೆ ದಕ್ಕಿದಷ್ಟು ಕಟ್ಟಿಕೊಟ್ಟಿದ್ದಾರೆ ಸಿದ್ದು.
 
ಛತ್ತೀಸಗಡದ ಪ್ರತಿಯೊಂದು ಜಿಲ್ಲೆಗಳೂ ಒಂದಕ್ಕಿಂತ ಹೇಗೆ ಭಿನ್ನ ಎಂಬುದನ್ನು ಈ ಪುಸ್ತಿಕೆಯ 18 ಅಧ್ಯಾಯಗಳಲ್ಲಿ ಲೇಖಕರು ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ರಾಜಧಾನಿ ರಾಯಪುರದ ಚೊಕ್ಕಟ ರಸ್ತೆಗಳು, ಸುಂದರ ಉದ್ಯಾನಗಳನ್ನು ಪ್ರೀತಿಯ ಮಾತುಗಳಲ್ಲಿ ಹೇಳುತ್ತ ಬಸ್ತರ್‌ನಲ್ಲಿ ನಕ್ಸಲೀಯರನ್ನು ಹಣಿಯಲು ಆದಿವಾಸಿಗಳನ್ನು ಬಳಸಿಕೊಂಡ ಬಗೆಯನ್ನು ಹೇಳುತ್ತಲೇ ಕೊನೆಗೆ ಶತಮಾನಗಳಿಂದ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದ ಅರಣ್ಯಗಳನ್ನು ಬಿಟ್ಟು ಹೊರನಡೆಯುವಾಗ ಆದಿವಾಸಿಗಳು ಅನುಭವಿಸಿದ ಪಡಿಪಾಟಲಿನ ಬಗ್ಗೆಯೂ ಸಚಿತ್ರ ವಿವರಣೆಗಳನ್ನು ನೀಡುತ್ತಾರೆ. ಬಿಲಾಸ್‌ಪುರ, ಮಹಾಸಮಂದ್‌, ಆರಂಗ್‌, ಸಿರಪುರದಲ್ಲಿನ ದೇವಾಲಯಗಳು, ಮಹಾನದಿಯ ಪಾತ್ರ, ಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳು, ಹಚ್ಚ ಹಸಿರಿನ ಭತ್ತದ ಗದ್ದೆಗಳ ಬಗ್ಗೆ ಬರೆಯುತ್ತಲೇ ಬರ್ನಾವಾಪಾರದ 244 ಕಿ.ಮೀ. ವಿಸ್ತೀರ್ಣದ ಬರ್ನಾವಾಪಾರ ಅಭಯಾರಣ್ಯದ ಸೊಬಗಿನ ಬಗ್ಗೆಯೂ ವಿಸ್ತೃತ ಮಾಹಿತಿ ನೀಡುತ್ತಾರೆ. ಅಲ್ಲಿನ ಅರಣ್ಯ ಇಲಾಖೆ ನೌಕರ ತಮಗೆ ನೀಡಿದ ಬೆಚ್ಚನೆ ಆತಿಥ್ಯದ ಘಟನೆಯನ್ನು ಹೇಳುತ್ತಲೇ ಆ ರಾಜ್ಯದ ಜನತೆಯ ಸೌಜನ್ಯವನ್ನೂ ಲೇಖಕ ಬಿಚ್ಚಿಡುತ್ತಾರೆ.
 
ನಕ್ಸಲ್‌ ನಾಯಕ ಕೊಂಡಪಲ್ಲಿ ಸೀತಾರಾಮಯ್ಯ 1980ರಲ್ಲಿ ಇಲ್ಲಿನ ಆದಿವಾಸಿಗಳ ವಿಶ್ವಾಸ ಗಳಿಸಿಕೊಂಡು ಜಮೀನ್ದಾರರ ವಿರುದ್ಧ ತಿರುಗಿಬಿದ್ದ ಕಥನವನ್ನು ವಿವರಿಸುತ್ತಲೇ, ಪ್ರತೀಕಾರವಾಗಿ ಇಲ್ಲಿನ ಸರ್ಕಾರ ಅರೆಸೇನಾಪಡೆ ಹಾಗೂ ನಕ್ಸಲ್‌ ನಿಗ್ರಹ ಪಡೆಯನ್ನು ಛೂಬಿಟ್ಟು ಹತ್ತಾರು ಆದಿವಾಸಿಗಳ ನೂರಾರು ಹಾಡಿಗಳಿಗೆ ಬೆಂಕಿ ಇಟ್ಟ ಬಗ್ಗೆಯೂ ಸಮಗ್ರ ವಿವರಣೆ ನೀಡುತ್ತಾರೆ.
 
ಇಲ್ಲಿನ ಅಧಿದೇವತೆ ಮಹಾಮಾಯಾದೇವಿ, ಛತ್ತೀಸಗಡದ ಐತಿಹಾಸಿಕ ಹಿನ್ನೆಲೆ, ಈ ರಾಜ್ಯದ ಪ್ರಮುಖ ನದಿಯಾದ ಮಹಾನದಿ ಬಗ್ಗೆ ಜನತೆಯ ನಂಟನ್ನು ಹೃದಯಂಗಮವಾಗಿ ಚಿತ್ರಿಸಲಾಗಿದೆ. ನಕ್ಸಲ್‌ ಚಟುವಟಿಕೆಗಳಿಂದ ಕುಖ್ಯಾತಿ ಪಡೆದ ಈ ರಾಜ್ಯಕ್ಕೆ ಇನ್ನೊಂದು ಸಾಂಸ್ಕೃತಿಕ ಆಯಾಮವೂ ಇದೆ ಎಂಬುದು ಈ ಕೃತಿ ಓದಿದಾಗ ಮನದಟ್ಟಾಗುತ್ತದೆ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.