ವಾಸ್ತವ

ನಿಜದ ಪ್ರೇಮಕಥೆಗಳಲ್ಲಿ...


ಲೇಖಕ : ಉಜ್ಜಿನಿ ರುದ್ರಪ್ಪ
ಪ್ರಕಾಶಕರು : ದಶ ಪ್ರಕಾಶನ
ಪ್ರಕಟವಾದ ವರ್ಷ : .
ಪುಟ : 246
ರೂ : ₹ 180
‘ಹೀಂಗೊಂದೂರಾಗ... ಒಂದು ಹುಡುಗ, ಒಂದು ಹುಡುಗಿ, ನಯನಗಳಲ್ಲೇ ನೂರಾರು ಮಾತು, ಒಂದಷ್ಟು ನಗು. ಒಂದಷ್ಟು ಭಾವನೆಗಳ ತಾಕಲಾಟ. ಸಿಟ್ಟು ಸೆಡವು. ಅವರಿಬ್ಬರ ನಡುವೆ ಜಾತಿ, ಮತ, ಭಾಷೆ, ಸಂಸ್ಕೃತಿಯ ಗೋಡೆಗಳು... ಅವೆಲ್ಲವನ್ನೂ ಮೀರಿ ಅವರು ಮದುವೆಯಾದರು. ಆರಾಮಾಗಿ ಇದ್ದರು ಎಂಬಲ್ಲಿಗೆ ಕಥೆಗಳು ಮುಗಿದೇ ಹೋಗುತ್ತವೆ.
 
ಕಥೆಯಲ್ಲಿ ಹಲವಾರು ಏಳುಬೀಳುಗಳು. ಹೆಣ್ಣಿಗೊಂದು ಗಂಡು ಅಂತ ಇದ್ದರೂ ಯಾರು ಯಾರಿಗೆ, ಯಾರಿಗಾಗಿ, ಎಲ್ಲಿ ಎನ್ನುವುದೆಲ್ಲವೂ ಋಣಾನುಬಂಧ. ಕಣ್ಣು ಕಲೆತು, ಮನಸು ಕರಗಿ, ಮಾತು ನೂರಾಗಿ ಹುಟ್ಟುವ ಪ್ರೇಮ ಮದುವೆಯವರೆಗೂ ಹೋಗುವುದು ಮಾತ್ರ ಕೇವಲ ಪ್ರೇಮವಲ್ಲ. ಅದು ಒಬ್ಬರಿಗೊಬ್ಬರು ಕೊನೆಯವರೆಗೂ ಇರುವ ಬಾಂಧವ್ಯ. ಆ ಬಾಂಧವ್ಯಕ್ಕೆ ಒಂದು ಸಾಮಾಜಿಕ ಮುದ್ರೆಯೊತ್ತುವುದು.
 
ಅಲ್ಲಿಂದ ಅವರು ಆರಾಮಾಗಿ ಬದುಕಿದರು. ಎಲ್ಲ ಕಥೆಗಳನ್ನೂ ಹೀಗೆಯೇ ಕೆಲವು ಸಾಲುಗಳಲ್ಲಿ ಮುಗಿಸಿಬಿಡಬಹುದೇನೋ... ಪ್ರೇಮ ಮದುವೆಯಲ್ಲಿ ಅಂತ್ಯವಾಯಿತು ಎನ್ನುವುದೇ ಒಂದು ಕ್ಲೀಷೆ. ಆದರೆ ಮದುವೆಯ ನಂತರವೂ ಪ್ರೇಮಕಥೆಗಳಿಗೆ ಹಲವಾರು ತಿರುವುಗಳು ಇದ್ದೇ ಇರುತ್ತವೆ.
 
ಬಹುತೇಕ ಪ್ರೇಮಕಥೆಗಳಲ್ಲಿ ಹೆತ್ತವರೇ ಖಳರಾದರೆ ಸ್ನೇಹಿತರೇ ಬಂಧುಗಳು. ಪರಿಚಿತರೇ ಪ್ರೇಮವನ್ನು ಬಯಲಿಗೆ ತರುವ ಗೂಢಚಾರರು. ಇಷ್ಟೆಲ್ಲವನ್ನೂ ಕರಾರುವಾಕ್ಕಾಗಿ ಹೇಳುವಂತೆ ಮಾಡುವ ಪುಸ್ತಕವೇ ‘ವಾಸ್ತವ’. ಬಳ್ಳಾರಿ ಹಾಗೂ ತುಂಗೆಯ ದಂಡೆಗುಂಟ ಅರಳಿದ ಪ್ರೀತಿ, ಕೆಲವೆಡೆ ಕ್ರಾಂತಿಯಂತೆಯೂ ಆಗಿದೆ.
 
ಇನ್ನೂ ಕೆಲವೆಡೆ ಜಾತಿ ವ್ಯವಸ್ಥೆಯ ಸೇಡಿನ ನಡುವೆಯೂ ಅರಳಿದೆ. 31 ನಿಜದ ಪ್ರೇಮಕಥೆಗಳಲ್ಲಿ ಮಾನವ ಸ್ವಭಾವದ ಹಲವು ಆಯಾಮಗಳು ಕಂಡು ಬರುತ್ತವೆ. ಎಲ್ಲಿಯೋ ಅಸೂಯೆ ಹೊಗೆಯಾಡುವುದು, ನಮ್ಮ ಕೋಮಿಗೆ ಸೇರಿದ ಹುಡುಗಿ ಎಂಬ ಅಭಿಮಾನದೊಂದಿಗೆ ಇನ್ನೊಂದು ಕೋಮಿನ ಹುಡುಗ ಎಂಬ ಅಸಮಾಧಾನ, ಏನಾದರಾಗಲಿ ಒಳಿತಾಗಲಿ ಎಂದು ಹಾರೈಸುವ ಸ್ನೇಹಿತ ವರ್ಗ, ಜೊತೆಗಿದ್ದೇವೆ ಎನ್ನುವ ಗೆಳೆಯರು ಇಂಥ ಹಲವಾರು ಭಾವ ಸ್ವಭಾವಗಳ ಪರಿಚಯ ಪ್ರತಿ ಕತೆಯಲ್ಲಿಯೂ ಬರುತ್ತದೆ.
 
ಹೆತ್ತವರನ್ನು ತಿರಸ್ಕರಿಸಿ, ಮೆಚ್ಚಿದವರೊಂದಿಗೆ ನಡೆದು ಬರುವ ಹಲವಾರು ಹುಡುಗಿಯರಲ್ಲಿ ಅಂತಃಕರಣ ಗೊಂದಲವಾಗಿ ಕಾಡುವುದು, ಹೆತ್ತವರ ಮುಂದೆ ಹಟ ಹಿಡಿದು ತನ್ನಾಕೆಯನ್ನು ಬೆಂಬಲಿಸುವುದು ಎಲ್ಲಿಯೂ ಯಾವ ಕಾರಣಕ್ಕೂ ಹಣ, ಜಾತಿ, ಅಂತಸ್ತುಗಳು ದೊಡ್ಡದಾಗಿ ಕಾಣಿಸದೇ ಇರುವುದೇ ಈ ಜೋಡಿಗಳನ್ನು ಒಂದಾಗಿಸುವ ಸೂತ್ರ. ಪರಸ್ಪರ ಸಾಂಗತ್ಯದ ಮುಂದೆ ಮತ್ತಿನ್ನಾವ ಭಾಗ್ಯವೂ ಬೇಡ ಎನ್ನುವುದು ಈ ಬರಹಗಳ ಒಳ ತಿರುಳಾಗಿದೆ.
 
ಲೇಖಕರು ಶ್ರಮವಹಿಸಿರುವುದು ಕಂಡು ಬರುತ್ತದೆ. ಆದರೆ ನಿರೂಪಣೆ ಸಂಗಾತಿಗಳಿಬ್ಬರದೂ ಆಗಿರದೇ ಒಮ್ಮುಖ ಮಾತ್ರ ಆಗಿರುವುದು ಕೆಲವೊಮ್ಮೆ ಹುಡುಗಿಯ ಧ್ವನಿಯೇ ಇಲ್ಲದಂತಾಗಿದೆ. ಪ್ರೇಮ ಕಥೆಗಳಿಗೆ ಎರಡು ಮುಖಗಳಿದ್ದೇ ಇರುತ್ತವೆ. ಅಪ್ಪ ಅಮ್ಮನನ್ನು ಎದುರು ಹಾಕಿಕೊಂಡು ಮದುವೆಯಾದೆ ಎನ್ನುವುದು ಹುಡುಗನ ಹೆಗ್ಗಳಿಕೆಯಾದರೆ, ಅಮ್ಮ ಅಪ್ಪನನ್ನು ಬಿಟ್ಟು ಬಂದು ಮದುವೆಯಾದೆ ಎನ್ನುವ ನೋವು ಹುಡುಗಿಯದು. ಹೆಣ್ಣುಮಕ್ಕಳ ಧ್ವನಿಯೂ ಈ ಕಥೆಯ ನಿರೂಪಣೆಯೊಳಗೆ ನೇಪಥ್ಯಕ್ಕೆ ಸರಿಯುತ್ತದೆ. ಪುರುಷರ ಮಾನಸಿಕ ತುಮುಲಗಳಿಗೆ ಅಕ್ಷರ, ಪದಗಳ ರೂಪವಿದೆ. ಆದರೆ ಹೆಣ್ಣುಮಕ್ಕಳು ಮುಂದೆ ಬಂದದ್ದು ಕೇವಲ ಕ್ರಿಯೆಯಂತೆ ಕಂಡು ಬರುತ್ತದೆ.
 
ಇಬ್ಬರನ್ನೂ ಒಟ್ಟೊಟ್ಟಿಗೆ ಅಥವಾ ಬೇರೆಬೇರೆಯಾಗಿ ಮಾತನಾಡಿಸಿ ಬರೆದಿದ್ದರೆ ಇನ್ನಷ್ಟು ಮನಮುಟ್ಟುವಂತಾಗುತ್ತಿತ್ತು. ಇಷ್ಟಕ್ಕೂ ಪ್ರೀತಿ ಪ್ರೇಮ ಇಬ್ಬರ ಸಾಹಚರ್ಯ ಮತ್ತು ಸಾಂಗತ್ಯವೇ ಅಲ್ಲವೇ? ಕೆಲವು ಕಥೆಗಳಲ್ಲಿ ಆಮೇಲೆ ಅಪ್ಪ ಅಮ್ಮ ಸಾಮರಸ್ಯದಿಂದ ಇರುವುದನ್ನು ಕಾಣುತ್ತೇವೆ. ಆ ಸಾಮರಸ್ಯ ಬೆಳೆದು ಬಂದ ಬಗೆಗೂ ಮದುವೆಯ ಮುನ್ನಾ ಸಾಹಸಗಳಿಗಿಂತ ನಂತರದ ಸಾಹಚರ್ಯದ ಕುರಿತು ಬರೆದಿದ್ದರೆ ಕೃತಿ ಪೂರ್ಣವಾಗುತ್ತಿತ್ತು.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.