ಮೀಸಲು ಕವಿತೆಗಳು

ವರ್ತಮಾನದ ತಲ್ಲಣಗಳಿಗೆ ಮಿಡಿಯುವ ಕವಿತೆಗಳು


ಲೇಖಕ : ಎಚ್‌.ಎಸ್‌. ಶಿವಪ್ರಕಾಶ
ಪ್ರಕಾಶಕರು : ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ
ಪ್ರಕಟವಾದ ವರ್ಷ : 2017
ಪುಟ : 108
ರೂ : ₹ 115
ನಾಲ್ಕು ದಶಕಗಳಿಂದ ಕಾವ್ಯ ಸೃಷ್ಟಿಯಲ್ಲಿ ತೊಡಗಿರುವ ಹಿರಿಯ ಕವಿ ಎಚ್‌.ಎಸ್‌. ಶಿವಪ್ರಕಾಶರ ಕವಿತೆಗಳ ಹೊಸ ಸಂಗ್ರಹವಿದು. 2013ರಿಂದ 2016ರ ಅವಧಿಯಲ್ಲಿ ರಚಿತವಾದ ಕವಿತೆಗಳು ಇಲ್ಲಿವೆ. ಪ್ರಕ್ಷುಬ್ಧ ವರ್ತಮಾನಕ್ಕೆ ಮುಖಾಮುಖಿಯಾಗುವ ಶಿವಪ್ರಕಾಶರ ಈ ಕವಿತೆಗಳ ಹಿನ್ನೆಲೆಯಲ್ಲಿ ತೀವ್ರವಾದ ಕಾವ್ಯ ಧ್ಯಾನವಿದೆ. ಮನುಷ್ಯ ಪ್ರೇಮದ ಮೂಲ ಸೆಲೆಯಿಂದ ಮೂಡಿರುವ ಈ ಕವಿತೆಗಳ ಬಳ್ಳಿಗಳು ಬೆಳೆಯುತ್ತಾ ಅನುಭಾವದ ಬೆಳಕಿನೆಡೆಗೆ ಚಾಚಿಕೊಳ್ಳುತ್ತವೆ.
 
ವಾಸ್ತವ – ಕಲ್ಪನೆಯ ಸಂಯೋಗದಲ್ಲಿ ಮೂಡಿರುವ ಈ ‘ಮೀಸಲು ಕವಿತೆಗಳು’ ಹೊಸ ರೂಪಕಗಳ ಕಾರಣದಿಂದ ಓದುಗರನ್ನು ಬೆರಗುಗೊಳಿಸುತ್ತವೆ. ಸಂಕಲನದ ಮೊದಲ ಕವಿತೆಯಲ್ಲಿಯೇ (ಶಿವ ಪಾರ್ವತಿಗೆ) ಇದಕ್ಕೆ ನಿದರ್ಶನಗಳು ಸಿಗುತ್ತವೆ: ‘ನಾನು ಬರೀ ದೇವರಾಗಿದ್ದಲ್ಲಿ / ನಾನು ಬರೀ ನರನಾಗಿದ್ದಲ್ಲಿ / ಹೇಗೆ ಎಗರಿ ಬೀಳುತ್ತಿದ್ದೆ ಕೆರಳಿದ ಹುಲಿ ಹಾಗೆ / ಕಾಮ / ಚೂರು ಕೆಣಕಿದಾಗ/ ತಪಸಿನಲ್ಲಿದ್ದಂತಿದ್ದ ನನ್ನನ್ನು?/ ನಾನು ನಿಜಕ್ಕೂ ಮೃಗವೂ ಆಗಿದ್ದೆ ಆವಾಗ’.
 
ಮೂರು ಕಟ್ಟುಗಳಲ್ಲಿರುವ ಇಲ್ಲಿನ ಮೂವತ್ತೈದು ಕವಿತೆಗಳು ದೇಶ ಕಾಲಗಳ ಗಡಿ ಮೀರಲು ಯತ್ನಿಸುತ್ತವೆ. ಮೊದಲನೆ ಕಟ್ಟಿನಲ್ಲಿ ಶಿವ– ಶಕ್ತಿ ಸಂಯೋಗ, ಪ್ರೀತಿ, ಸಾವು, ವಿರಕ್ತಿ, ಅಂತರಂಗ ಶೋಧ, ಅನುಭಾವದ ಕವಿತೆಗಳಿವೆ. ಉದ್ವೇಗವಿಲ್ಲದ ಉತ್ಕಟತೆಯ ಕಾಡುವ ಸಾಲುಗಳು ಈ ಸಂಕಲನದಲ್ಲಿ ಹೇರಳವಾಗಿವೆ. ರೋಹಿತ್‌ ವೆಮುಲಾ ಸಾವಿಗೆ ಕವಿ ಪ್ರತಿಕ್ರಿಯಿಸುವ ಬಗೆಯಿದು: ‘ಒಬ್ಬ ಯುವಕನ ಆತ್ಮಹತ್ಯೆ / ಒಂದು ಕನಸಿನ ಆತ್ಮಹತ್ಯೆ / ಒಂದು ಭರವಸೆಯ ಆತ್ಮಹತ್ಯೆ / ವರ್ತಮಾನ ಕಾಲ ಗತಕಾಲವಾಗಿ / ಭವಿಷ್ಯ ಗತದ ಗತವಾಗುವ ಕಾಲ ಪರಿವರ್ತನೆ’. (ಬೆಳೆದು ನಿಂತ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ)
 
ಎರಡನೆ ಕಟ್ಟಿನಲ್ಲಿರುವ ಕವಿತೆಗಳು ಗ.ಮಾ. ಮುಕ್ತಿಬೋಧ, ಆಂಡಾಳ್‌, ಕಾರೈಕಾಲ್‌ ಅಮ್ಮಯಾರ್‌ ಮತ್ತು ಸ್ಪಾನಿಷ್‌ ಕವಿ ಕಾರ್ಲೋಸ್‌ ಅಗನ್ಶೊ ಕವಿತೆಗಳ ‘ಮರುರೂಪಗಳು’. ಖಂಡಕಾವ್ಯದ ಹೊಸ ರೂಪಗಳಂತಿರುವ ಹಾಗೂ ಹಲವು ಕವಲುಗಳಾಗಿ ಬೆಳೆಯುವ ಮೂರನೆ ಕಟ್ಟಿನ ಕವಿತೆಗಳು ಕನ್ನಡ ಕಾವ್ಯದ ಹೊಸ ಚಹರೆಗಳ ಅನ್ವೇಷಣೆಯ ಮಾದರಿಗಳಂತಿವೆ. ಚರಿತ್ರೆ – ಪುರಾಣ, ಗತ – ಭವಿಷ್ಯಗಳನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಮರುರೂಪಿಸಿಕೊಳ್ಳುವ ಶಿವಪ್ರಕಾಶರ ಕಾವ್ಯ ಕಸುವು ಈ ಸಂಕಲನದಲ್ಲೂ ಮುಂದುವರಿದಿದೆ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.