ಜಗದ ಜತೆ ಮಾತುಕತೆ

ಜಗದ ಜತೆಗೆ ಸಹಬಾಳ್ವೆಯ ಮಾತುಕತೆ


ಲೇಖಕ : ಕಮಲಾಕರ ಕಡವೆ
ಪ್ರಕಾಶಕರು : ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ
ಪ್ರಕಟವಾದ ವರ್ಷ : 2017
ಪುಟ : 104
ರೂ : ₹ 80
ಕಮಲಾಕರ ಕಡವೆ ಅವರ ಮೂರನೇ ಕವನ ಸಂಕಲನವಿದು. ನಗರೀಕರಣದ ಅತಿಯಾದ ಓಟದಲ್ಲಿ ಒಬ್ಬರಿಗೊಬ್ಬರು ‘ಠೂ’ ಬಿಟ್ಟಂತಿರುವ ‘ಜಗದ ಜತೆ ಮಾತುಕತೆ’ ನಡೆಸಲು ಹೊರಟ ಕವಿತೆಗಳು ಇಲ್ಲಿವೆ. ‘ಗೆಳತಿ ಜತೆ ಮಾತುಕತೆ’ ಪ್ರಾರ್ಥನೆಗಳ ಮೂಲಕ, ಗುಬ್ಬಿಗದ್ದಲದ ಮೂಲಕ ಜಗ‌ದ ಜತೆಗೆ ಮಾತನಾಡಲು ಯತ್ನಿಸುತ್ತವೆ.
 
ಮಾತು ಮರೆತು ಓಟದ ಹಿಂದೆ ಬಿದ್ದಿರುವವರನ್ನು ತಡೆದು ನಿಲ್ಲಿಸಿ ಮಾತುಕತೆ ನಡೆಸುವ ಹಂಬಲ ಈ ಕವಿತೆಗಳಿಗಿದೆ. ಹತ್ತು ಕವಿತೆಗಳಿರುವ ಈ ಸಂಕಲನಕ್ಕೆ ಹಿರಿಯ ಕವಿ ಎಚ್‌.ಎಸ್‌. ಶಿವಪ್ರಕಾಶರ ಮುನ್ನುಡಿಯಿದೆ.
 
ಬದುಕಿನ ಗತಿ ತೀವ್ರವಾಗಿರುವ ಇಂದಿನ ಸಂದರ್ಭದಲ್ಲಿ ಮಾತೇ ವಿರಳವಾಗಿರುವ ಸ್ಥಿತಿಯನ್ನು ಕವಿ ಕಾಣಿಸುವ ರೀತಿ ಇದು: ‘ಮಗಳು ಕೇಳಿದಳು ಒಂದು ದಿನ, / ‘ಯಾಕೆ, ಎಲ್ಲರೂ ಠೂ ಬಿಟ್ಟಿದ್ದಾರೆ ನಂ ಜತೆ?’’(ಠೂ ಬಿಟ್ಟು). ‘ಬಲ್ಲವರ ಜಾಣ್ಮೆ ಬರಲಿ ಎಲ್ಲರು ಪಯೋಗಕ್ಕೆ / ಉಳ್ಳವರ ಸೊತ್ತು ಕಷ್ಟ ತೊರೆಯಲು’ ಎನ್ನುವ ‘ಪ್ರಾರ್ಥನೆಗಳು’ ಕೂಡಾ ಇಲ್ಲಿವೆ.
 
‘ಬಂದೂಕು ತೋರಿಸಿ ಬಾಯ್ಮುಚ್ಚಿಸಬಹುದು / ಪ್ರಾರ್ಥನೆಗೆ ಮಾತ್ರ ಪ್ರೀತಿಯೇ ಬೇಕು’ (ಕಂಡದ್ದು ಕಂಡಷ್ಟು) ಎನ್ನುವ ಸಾಲುಗಳು ಹಿಂಸೆ ವಿಜೃಂಭಿಸುತ್ತಿರುವ ಜಗತ್ತಿನಲ್ಲಿ ಪ್ರೀತಿ, ಸಹಬಾಳ್ವೆಯ ಮಹತ್ವವನ್ನು ಸಾರುತ್ತವೆ. ‘ಪವಿತ್ರ ಗ್ರಂಥಗಳೊಳಗೆ ಇರುವೆಗಳು ಅಕ್ಷರಗಳ ಹೆಕ್ಕುತ್ತಿವೆ / ಬಾವುಟವೊಂದು ಗಾಳಿಯೇರಿ ಹಲವು ಹಳ್ಳಿಗಳ ದಾಟಿ ತೇಲುತ್ತಿದೆ’ ಎನ್ನುವ ಸಾಲುಗಳು ಧರ್ಮ, ಗಡಿಗಳನ್ನು ಮೀರುವ ಮಾನವ ಪ್ರೇಮದ ಸಹಜ ರೂಪಕಗಳಾಗಿ ಕಾಣುತ್ತವೆ.
 
‘ಎಲ್ಲಿಯೇ ಆಗಲಿ / ಕಲ್ಲು ಬಿದ್ದರೆ ಇದ್ದಿದ್ದೇ / ಬಿರುಕು’ ಎಂಬ ಸಾಲುಗಳ ಜತೆಗೆ ‘ಇರುವಿರಿ ನೀವು ಅಷ್ಟಿಷ್ಟು ನನ್ನೊಳಗೂ / ಮತ್ತೆ ಜತೆಯಾದರೆ, ಪೂರ್ಣರಾಗುವೆವು ನಾವು’ ಎನ್ನುವ ಇಲ್ಲಿನ ಕವಿತೆಗಳು ಮನುಷ್ಯ ಮನುಷ್ಯನನ್ನು ಅರಿತು ಬಾಳಿದರೆ ಮಾತ್ರ ಪೂರ್ಣತ್ವ ಎಂಬ ದರ್ಶನದೆಡೆಗೆ ತುಡಿಯುತ್ತವೆ. ಹಿಂಸೆಯನ್ನು ತಣ್ಣಗೆ ವಿರೋಧಿಸುವ, ಸಹಬಾಳ್ವೆಯ ಆಶಯದ ಮಾತುಕತೆಯ ತೀವ್ರತೆ ಇಲ್ಲಿನ ಕವಿತೆಗಳಲ್ಲಿದೆ.‌
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.