ಅಸ್ಪೃಶ್ಯತೆಯೆಂಬ ವಿಷಕೂಸಿನ ಸುತ್ತ

ಅಸ್ಪೃಶ್ಯತೆಯ ಸಮಾಜಶಾಸ್ತ್ರೀಯ ಆಯಾಮ


ಲೇಖಕ : ಡಾ.ಎಸ್‌.ಬಿ.ಜೋಗುರ
ಪ್ರಕಾಶಕರು : ಲಡಾಯಿ ಪ್ರಕಾಶನ ನಂ. 21, ಪ್ರಸಾದ್ ಹಾಸ್ಟೆಲ್ ಗದಗ–582101
ಪ್ರಕಟವಾದ ವರ್ಷ : ..
ಪುಟ : 220
ರೂ : ₹150

ವೃತ್ತಿಯಿಂದ ಸಮಾಜಶಾಸ್ತ್ರದ ಉಪನ್ಯಾಸಕರಾಗಿರುವ ಲೇಖಕ, ಡಾ.ಎಸ್.ಬಿ.ಜೋಗುರ ಅವರು ಬರೆದಿರುವ ‘ಅಸ್ಪೃಶ್ಯತೆಯೆಂಬ ವಿಷಕೂಸಿನ ಸುತ್ತ...’ ಕೃತಿ ಸಮಾಜಶಾಸ್ತ್ರೀಯ ನೆಲೆಯಿಂದ ಮಹತ್ವದ ಕೃತಿ.

 

ಜಾತಿ ವ್ಯವಸ್ಥೆಯ ಕನ್ನಡಿಯಾಗಿರುವ ಅಸ್ಪೃಶ್ಯತೆಯ ಉಗಮ, ಬೆಳವಣಿಗೆಯ ಕುರಿತು ಸಮಾಜಶಾಸ್ತ್ರೀಯ ಒಳನೋಟಗಳಿರುವ ಈ ಕೃತಿಯಲ್ಲಿ ಹದಿಮೂರು ಅಧ್ಯಾಯಗಳ ಗುಚ್ಛವಿದೆ.

 

ಅಸ್ಪೃಶ್ಯತೆಯ ಹುಟ್ಟು–ಬೆಳವಣಿಗೆ ಮತ್ತು ಅಸ್ತಿತ್ವ ಎನ್ನುವ ಮೊದಲ ಅಧ್ಯಯನದಲ್ಲಿ ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ಆದಿಕಾಲದಿಂದಲೂ ಜಾತಿ ವ್ಯವಸ್ಥೆ ಹೇಗಿತ್ತು ಎಂಬುದನ್ನು ವಿವರವಾಗಿ ದಾಖಲಿಸಲಾಗಿದೆ.

 

ಜಾತಿ ವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸಿ ಬದುಕುವ ಕೆಳಜಾತಿಗಳು ಎದುರಿಸುವ ಮೇಲ್ಜಾತಿಯ ದೌರ್ಜನ್ಯಗಳ ಕುರಿತು ’ಅಸ್ಪೃಶ್ಯರ ಮೇಲಿನ ದೌರ್ಜನ್ಯಗಳು’ ಅಧ್ಯಾಯದಲ್ಲಿ ಅಂಕಿಅಂಶಗಳ ಸಹಿತ ವಿವರಗಳಿವೆ. ಸಾಂವಿಧಾನಿಕವಾಗಿ ದೊರೆತಿರುವ ಸಮಾನ ನಾಗರಿಕರ ಹಕ್ಕುಗಳ ನಡುವೆಯೇ ಕೆಳಜಾತಿಗಳು ಇನ್ನೂ ಮೇಲ್ಜಾತಿಗಳ ದಬ್ಬಾಳಿಕೆಗೆ ಬಲಿಯಾಗುತ್ತಿರುವ ಮತ್ತು ರಾಜಕೀಯ ಅಧಿಕಾರದಿಂದಲೂ ಬಗೆಹರಿಸಲಾಗದ ಜಾತಿ ವ್ಯವಸ್ಥೆಯ ಕರಾಳ ಒಳನೋಟವನ್ನು ಈ ಅಧ್ಯಾಯ ತೆರೆದಿಡುತ್ತದೆ.

 

ದಲಿತರ ನೋವುಗಳನ್ನು ಬಾಲ್ಯದಿಂದಲೇ ಅನುಭವಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಹೋರಾಟ, ಸಂಘಟನೆಯ ವಿವರಗಳನ್ನು ಸೂಚ್ಯವಾಗಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅಸ್ಪೃಶ್ಯತೆ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿದೆ. ದಲಿತರ ನೋವುಗಳನ್ನು ಮೊದಲ ಬಾರಿಗೆ ಸೈಮನ್ ಕಮಿಷನ್ ಮುಂದೆ ತೆರೆದಿಟ್ಟ ಅಂಬೇಡ್ಕರ್ ಅವರು, ಮೊದಲ ಬಾರಿಗೆ ದೇಗುಲ ಪ್ರವೇಶ ಮಾಡಿದ್ದು, ಹಿಂದೂ ಧರ್ಮದ ಕರಾಳ ವ್ಯವಸ್ಥೆಯಿಂದ ರೋಸಿಹೋಗಿ, ಬೌದ್ಧ ಧರ್ಮಕ್ಕೆ ಪರಿವರ್ತನೆಯಾದ್ದರ ಬಗ್ಗೆ ಇಲ್ಲಿ ದಾಖಲಿಸಲಾಗಿದೆ.

 

ಜಾತಿ ಮತ್ತು ಅಸ್ಪೃಶ್ಯತೆಯ ಬಗ್ಗೆ ಲೋಹಿಯಾ ಸಾಕಷ್ಟು ಮಾತನಾಡಿ, ಬರೆದಿದ್ದರೂ ಅಂಬೇಡ್ಕರ್ ಅವರ ಹಾಗೆ ವ್ಯವಸ್ಥಿತವಾಗಿ ಮತ್ತು ಅದನ್ನೊಂದು ಏಣಿಶ್ರೇಣಿ ವ್ಯವಸ್ಥೆಯ ಸಂಘಟನೆ ಎನ್ನುವ ವಾಸ್ತವವನ್ನು ಅವರಷ್ಟು ಖಚಿತವಾಗಿ ಗ್ರಹಿಸಿ ಮಾತನಾಡಿದಂತಿಲ್ಲ (ಲೋಹಿಯಾ ಮತ್ತು ಅಸ್ಪೃಶ್ಯತೆ) ಎನ್ನುವ ಅಂಶಗಳೂ ಈ ಕೃತಿಯಲ್ಲಿವೆ. ಹಿಂದೂ ಧರ್ಮದ ವರ್ಣವ್ಯವಸ್ಥೆಯ ಬಗ್ಗೆ ತೀರಾ ಮೃದು ಧೋರಣೆ ತಾಳಿದ್ದ ಗಾಂಧೀಜಿ ಅಸ್ಪೃಶ್ಯತೆ ಕುರಿತು ಹೊಂದಿದ್ದ ಅಭಿಪ್ರಾಯಗಳನ್ನು ’ಗಾಂಧಿ ಮತ್ತು ಅಸ್ಪೃಶ್ಯತೆ’ ಅಧ್ಯಾಯದಲ್ಲಿ ಲೇಖಕರು ಉದಾಹರಣೆ ಸಹಿತ ವಿವರಿಸಿದ್ದಾರೆ.

 

ಒಟ್ಟಾರೆ ಜಾತಿ ವ್ಯವಸ್ಥೆಯ ಬಲಿಪಶುಗಳಾದವರ ಬಗ್ಗೆ ಹೇಳುತ್ತಲೇ, ಕರ್ನಾಟಕದಲ್ಲಿ ತಳಸಮುದಾಯಗಳ ಸ್ಥಿತಿಗತಿ, ಜಾತಿ ಪದ್ಥತಿ, ಪರಿವರ್ತನೆ ಮತ್ತು ಪ್ರತಿಗಾಮಿತನ, ಮೀಸಲಾತಿ, ಜಾತಿಕಾರಣ–ರಾಜಕಾರಣ, ಭವಿಷ್ಯದಲ್ಲಿ ಜಾತಿಪದ್ಧತಿಯ ಬಲಗೊಳ್ಳುವಿಕೆಯ ಪ್ರಶ್ನೆಗಳನ್ನು ಕೃತಿ ಎತ್ತುತ್ತದೆ.

 

ತಲೆಮಾರುಗಳ ಮೂಲಕ ಸಾಗಿಬಂದಿರುವ ಜಾತಿಯ ಸ್ಥಾನಮಾನಗಳ ತಿಳಿವಳಿಕೆ ಪರಂಪರೆಯ ಭಾಗವೇ ಆಗಿ ಹೋಗಿರುವ ಕುರಿತು ಲೇಖಕರು ಸೂಕ್ಷ್ಮವಾಗಿ ಹೇಳುತ್ತಲೇ ಅದರ ಸಮಾಜಶಾಸ್ತ್ರೀಯ ನೆಲೆಗಳನ್ನೂ ವಿವರವಾಗಿ ಹೇಳಿರುವುದು ಕೃತಿಯ ವಿಶೇಷ. ಜಾತಿ ಪದ್ಥತಿ, ಅಸ್ಪೃಶ್ಯತೆ ಕುರಿತು ಆಳವಾಗಿ ಅಧ್ಯಯನ ಮಾಡುವವರಿಗೆ ಈ ಕೃತಿ ಕೈಗನ್ನಡಿಯಂತಿದೆ.

Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.