ವಚನ ತವನಿಧಿ

ಚಿತ್ರಾಧಾರಿತ ನಿರೂಪಣೆ


ಲೇಖಕ : ಡಾ.ಎಚ್. ಚಂದ್ರಶೇಖರ
ಪ್ರಕಾಶಕರು : ಐಬಿಎಚ್‌ ಪ್ರಕಾಶನ ನಂ. 77, 2ನೇ ಮುಖ್ಯರಸ್ತೆ, ರಾಮರಾವ್‌ ಲೇಔಟ್‌, ಬಿಎಸ್‌ಕೆ ಮೂರನೇ ಸ್ಟೇಜ್‌ ಬೆಂಗಳೂರು 560085
ಪ್ರಕಟವಾದ ವರ್ಷ : .
ಪುಟ : 442
ರೂ : 375

ಪ್ಲೇಟೊನ ಚಿಂತನೆಗಳು ಮತ್ತು ಬುದ್ಧನ ಸಂಘ ಜೀವನ ಕ್ರಮದಲ್ಲಿ ನಾವು ಜನತಂತ್ರ ವ್ಯವಸ್ಥೆಯ ಕಲ್ಪನೆ ಕಾಣುತ್ತೇವೆ. 12ನೇ ಶತಮಾನದಲ್ಲಿ ಶರಣರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ್ದನ್ನು ಮನಗಾಣಬಹುದು. ಜನತಂತ್ರ ವ್ಯವಸ್ಥೆಗೆ ವಚನ ಚಳವಳಿ ಬುನಾದಿ ಹಾಕಿದೆ. ಹಾಗಾಗಿ, ಇಂದಿಗೂ ವಚನ ತತ್ವಗಳು ಪ್ರಸ್ತುತವಾಗಿವೆ.

ವಚನಗಳನ್ನು ವಿಶ್ಲೇಷಿಸುವ ಕೆಲಸವನ್ನು ಹಲವು ವಿದ್ವಾಂಸರು ಮಾಡಿದ್ದಾರೆ. ಡಾ.ಎಚ್. ಚಂದ್ರಶೇಖರ ಅವರ ‘ವಚನ ತವನಿಧಿ’ ಕೃತಿಯೂ ಇಂಥಹದ್ದೇ ಪ್ರಯತ್ನವಾಗಿದೆ. ಈ ಕೃತಿಯು ವಚನ ಸಾಹಿತ್ಯ ಕೇಂದ್ರಿತ ಲೇಖನಗಳಿಂದ ಕೂಡಿದೆ.

ಚಂದ್ರಶೇಖರ ಅವರು ಮೂಲತಃ ಭೂವಿಜ್ಞಾನಿ. ಜತೆಗೆ, ಛಾಯಾಗ್ರಾಹಕರು ಹೌದು. ಹಾಗಾಗಿ, ಲೇಖನಗಳಿಗೆ ಪೂರಕವಾದ ಚಿತ್ರಗಳು ಕೃತಿಯಲ್ಲಿವೆ.

‘ಬಂಡಾಯಗಾರ ಬಸವಣ್ಣ’ ಲೇಖನದ ಮೂಲಕ ಬಸವಣ್ಣ ಅವರ ಆತ್ಮನಿರೀಕ್ಷೆಯ ಪರಿಯನ್ನು ಸ್ಪಷ್ಟವಾಗಿ ವಿಶ್ಲೇಷಿಸಿದ್ದಾರೆ. ಅಸ್ಪೃಶ್ಯತೆಯ ವಿರೋಧಿಯಾಗಿ, ಸ್ತ್ರೀವಿಮೋಚನೆಯ ಪ್ರತಿಪಾದಕರಾಗಿ ಮತ್ತು ಶೋಷಿತರ ಧ್ವನಿಯಾಗಿ ಬಸವಣ್ಣ ಬೆಳೆದದ್ದನ್ನು ವಚನಾಧಾರಿತವಾಗಿಯೇ ವಿವರಿಸಿರುವುದು ಗಮನಾರ್ಹ.

ಬಸವಣ್ಣ ಬದುಕಿ ಬದಲಾವಣೆಗೆ ಹೋರಾಡಿದ ಸ್ಥಳಗಳು, ಕಲಾವಿದರು ಕಂಡ ಬಸವಣ್ಣ, ಬಸವ ನಾಣ್ಯ, ಶರಣರ ತೇರು: ಒಂದು ಅಪರೂಪದ ಕಲಾಕೃತಿ ಲೇಖನಗಳು ಚಿತ್ರಾಧಾರಿತ ನಿರೂಪಣೆಯಿಂದ ಕೂಡಿವೆ.

ಮೂಢನಂಬಿಕೆಗಳ ವಿರುದ್ಧ ವಚನಕಾರರ ಹೋರಾಟ, ವಚನಕಾರರ ದೃಷ್ಟಿಯಲ್ಲಿ ವಿವಾಹ– ಅಂತರ್ಜಾತಿ ವಿವಾಹ ಲೇಖನ ಇಂದಿನ ಸಾಮಾಜಿಕ ಬಿಕ್ಕಟ್ಟುಗಳ ಶಮನಕ್ಕೆ ಮಾರ್ಗದರ್ಶಿಯಾಗಿವೆ. ಶರಣರ ಬಗ್ಗೆ ಮತ್ತಷ್ಟು ಅರಿಯಲು ಈ ಕೃತಿ ಸಹಕಾರಿಯಾಗಿದೆ.

Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.