ಗಾಯಗೊಂಡ ಹೃದಯದ ಸ್ವಗತ

ಸಾದಾ ಸಂಭಾಷಣೆಯಲಿ ಸಾಗುವ ಸ್ವಗತ


ಲೇಖಕ : ಅಯಿನಂಪೂಡಿ ಶ್ರೀಲಕ್ಷ್ಮೀ
ಪ್ರಕಾಶಕರು : ಸ್ನೇಹ ಬುಕ್ ಹೌಸ್, 165/A ಶ್ರೀನಗರ, ಬಸ್ ನಿಲ್ದಾಣದ ಹತ್ತಿರ, 10ನೇ ಮುಖ್ಯರಸ್ತೆ,, ಶ್ರೀನಗರ, ಬೆಂಗಳೂರು
ಪ್ರಕಟವಾದ ವರ್ಷ : ..
ಪುಟ : 64
ರೂ : ₹70

ರಮ್ಯತೆ, ಸೊಬಗು, ಸಂತಸ ಭಾವಗಳ ಪೋಣಿಸುವಿಕೆಯ ಸುಂದರ ಸರವಷ್ಟೆ ಅಲ್ಲ ಕಾವ್ಯ. ಅದಕೂ ಮಿಗಿಲಾಗಿ ನೋವಿನ ಹಾದಿಯಲಿ ಊರುವ ಹೆಜ್ಜೆಗೆ ಜೀವದ್ರವ್ಯವಾಗಿ ಒದಗುವ, ಗಟ್ಟಿತನದಲಿ ನಮ್ಮನು ಹದಗೊಳಿಸುವ ಚಿಕಿತ್ಸಕ ಗುಣ ಇದೆ ಕಾವ್ಯದಲ್ಲಿ.

 

‘ಗಾಯಗೊಂಡ ಹೃದಯದ ಸ್ವಗತ’ದಲ್ಲಿ ನೋವಿನ ಅಭಿವ್ಯಕ್ತಿಯಾಗಿಯೂ, ಮದ್ದಾಗಿಯೂ ಕಾವ್ಯ ಒಡಮೂಡಿದೆ. ಸ್ತನ ಕ್ಯಾನ್ಸರ್‌ನಿಂದ ಸ್ಥೈರ್ಯಗುಂದದೆ ಅದನ್ನು ಎದುರಿಸಿ ಸಹಜವಾಗಿ ಜೀವಿಸುವ ತವಕದಲ್ಲಿ ಜೀವತಳೆದ ಅಭಿವ್ಯಕ್ತಿ ಈ ನೀಳ್ಗವಿತೆ. ಒಮ್ಮೆ ಕೂಸಿಗೆ ಅಕ್ಷರಶಃ ಜೀವದ್ರವ್ಯ ಒದಗಿಸುತ್ತಿದ್ದ ಸ್ತನಗಳು ಕ್ಯಾನ್ಸರ್‌ಗೆ ತುತ್ತಾಗಿ ಜೀವ ನಲುಗುವಾಗ ಹೆಣ್ಣು ನೋವಿನಲಿ ಮಿಡುಗುತ್ತಾಳೆ. ಆದರೆ ಇಷ್ಟಕ್ಕೇ ಜೀವನ ಕೊನೆಯಾಗುವುದಿಲ್ಲ. ನೋವಿನೊಂದಿಗೆ ಸೆಣಸಾಡಿ ಸಹಜ ಜೀವನ ಸಾಗಿಸಬಹುದು. ಆ ಛಾತಿ ಹೆಣ್ಣಿನ ಸಹಜ ಗುಣ. ಇದಕ್ಕಾಗಿ ಒಂದಷ್ಟು ಪಳಗುತ್ತಾ ಸಾಗಬೇಕು ಎನ್ನುವ ಆತ್ಮವಿಶ್ವಾಸ ಕಟ್ಟಿಕೊಡುವ ಚಿತ್ರಣ ಇಲ್ಲಿದೆ.

 

ಸ್ತನ ಕ್ಯಾನ್ಸರ್ ಕುರಿತು ಮುಕ್ತವಾಗಿ ಚರ್ಚಿಸುವ ಧಾಟಿಯ ಪೀಠಿಕೆಯಿಂದ ಆರಂಭವಾಗುವ ನೀಳ್ಗವಿತೆ ಹಲವು ಹಂತಗಳಲ್ಲಿ ಕ್ಯಾನ್ಸರ್ ಜತೆಗಿನ ಒಡನಾಟವನ್ನು ತೆರೆದಿಡುತ್ತಾ ಸಾಗುತ್ತದೆ.

 

ಹೆಣ್ಣು ಜೀವ ಕುರಿತ ವರ್ಣನೆಯಲ್ಲಿ ರಮ್ಯವಾಗಿಯೂ, ದೇವಿಯ ವರ್ಣನೆಯಲ್ಲಿ ಭಕ್ತಿಭಾವದಲ್ಲಿಯೂ ಸ್ತನಗಳ ಉಲ್ಲೇಖವಾಗುತ್ತದೆ. ಅದೇ ಸ್ತನ ಕ್ಯಾನರ್‌ಗೆ ಗುರಿಯಾದಾಗ ಅನುಭವಿಸುವ ವಿವಿಧ ಹಂತದ ನೋವುಗಳು ವೈದ್ಯಕೀಯ ಪರಿಭಾಷೆಯಲ್ಲಿ ಎಷ್ಟೆಷ್ಟೋ ಸಂಕೀರ್ಣ ಹೆಸರುಗಳಿಂದ ಗುರುತಿಸಲ್ಪಡುತ್ತವೆ. ಕಾವ್ಯದೊಳಗಿನ ನಿರೂಪಕಿ ಸಹಜ ಸಂಭಾಷಣೆಯ ಧಾಟಿಯಲ್ಲಿಯೇ ಇವೆಲ್ಲವನ್ನೂ ಮಿಳಿತಗೊಳಿಸಿದ್ದಾರೆ.

 

ಎತ್ತ ನೋಡಿದರೂ ಸೆರಗಿನ ಮರೆಯ ಚಂದಿರ ಮಾಡುವ ಅಲ್ಲೋಲ ಕಲ್ಲೋಲವೇ ಡಾಲ್ಬೀ ಸಿಸ್ಟಮ್‍ನಲ್ಲಿ ನಿಶ್ಶಬ್ದವಾಗಿ ಸದ್ದು ಮಾಡುತ್ತವೆ. ಇದು ಕ್ಯಾನ್ಸರ್ ಚಿಕಿತ್ಸೆಗೆ ಒಳಪಡುವ ಹೆಣ್ಣಿನ ಅನುಭವದ ಒಂದಂಶದ ವ್ಯಕ್ತವಷ್ಟೆ.

 

ಇಲ್ಲಿಯವರೆಗೂ ಹೆಣ್ಣೆಂದರೆ ಮತ್ತಾರದೋ ಎದೆಯ ಮೇಲೆ ಉರಿಯುವ ಬೆಂಕಿ ಎಂದರು ಹೆಣ್ಣಿನ ಎದೆಯಲ್ಲೇ ಉರಿಯುವ ಒಲೆಗಳಿವೆಯೆಂದು ಈಗ ಪ್ರಕಟಿಸಬೇಕಾಗಿದೆ
ಇಲ್ಲಿಯವರೆಗೂ ಹೆಣ್ಣುತನದ ಕುರುಹುಗಳೆಂದು ಹಾಕಿದ, ಸಂಕೋಲೆಗಳಿಂದ ವಿಮುಕ್ತಿ ಎಂದು ಭಾವಿಸೋಣ ಜೀವನದ ಹೊತ್ತಿಗೆಯಲ್ಲಿ ಹೊಸ ಪಾಠದಂತೆ ಓದೋಣ ಈ ಸ್ತನಾತೀತ ದೆಸೆಯನ್ನು ಮಹಿಳಾ ಪ್ರಸ್ಥಾನದಲ್ಲಿ ನವಯುಗೋದಯವೆಂದು ಸಾರಿ ಹೇಳೋಣ

 

ಹುಟ್ಟಿನಿಂದ ಬಾಲ್ಯ, ಯೌವ್ವನದಲ್ಲಿ ಸಾಗಿ ಕ್ಷಣಕ್ಷಣವೂ ಜತೆಗಿರುವ ಅಪ್ಪಟ ಸಂಗಾತಿಯಾದ ಅಂಗ, ಭಾವಲೋಕದಲ್ಲಿ ಬೆರೆತ ರೀತಿ ಸೀದಾ ಸಾದಾ ಮಾತುಗಳಲ್ಲಿಯೇ ಮೂಡಿವೆ. ಅವುಗಳ ಜತೆಗಿನ ಸಖ್ಯ ಕೊನೆಯಾದ ಬಳಿಕ ಹೊಸ ದೇಹಸ್ಥಿತಿ, ಮನಸ್ಥಿತಿ ರೂಢಿಸಿಕೊಂಡು ಜೀವನ ಸಾಗಿಸುವುದನ್ನು ಕಲಿಯುವ ಸ್ಥೈರ್ಯವೂ ಮೇಲಿನ ಸಾಲುಗಳಲ್ಲಿ ವ್ಯಕ್ತವಾಗಿದೆ.

 

ವೈದ್ಯಕೀಯ ಪರಿಭಾಷೆಯ ಪದಗಳು ಸಾಕಷ್ಟು ಇರುವುದರಿಂದ ಇಂಗ್ಲಿಷ್‌ ಪದಗಳ ಬಳಕೆ ಸಾಕಷ್ಟು ಇವೆ. ಈ ನೀಳ್ಗವಿತೆ ಲಯಬದ್ಧ ಸ್ವರೂಪದಲ್ಲಿ ಇಲ್ಲದೆ ಇರುವುದರಿಂದ ಇಂಗ್ಲಿಷ್‌ ಪದಗಳ ಬಳಕೆ ಓದಿಗೆ ಅಷ್ಟೇನೂ ತೊಡಕಾಗುವುದಿಲ್ಲ.

 

ಹಾಗಿದ್ದರೂ ಅನುವಾದದ ವೇಳೆ ಕೊಂಚ ಹೆಚ್ಚೇ ಗದ್ಯವೆನಿಸುವ ಧಾಟಿಯಿಂದ ಈ ರಚನೆಯನ್ನು ಪಾರುಮಾಡುವ ಕುರಿತು ಮತ್ತಷ್ಟು ಯತ್ನಿಸುವ ಅವಕಾಶ ಇತ್ತು.

 

ಬಿಡಿ ಬಿಡಿ ಅನುವಾದಗಳಲ್ಲಿ ತೊಡಗಿದ್ದರೂ ಇದು ಅನುವಾದಕಿಯ ಪೂರ್ಣ ಪ್ರಮಾಣದ ಮೊದಲ ಅನುವಾದ ಕೃತಿ ಎನ್ನುವುದು ಉಲ್ಲೇಖನೀಯ.

 

Comments (Click here to Expand)
ರಾತ್ರಿ ಕಪ್ಪು, ಕೊಡ ಕಪ್ಪು
ರಾತ್ರಿ ಕಪ್ಪು, ಕೊಡ ಕಪ್ಪು
ಚಂದ್ರಕಾಂತ ಪೋಕಳೆ
ವಾಸನಾ
ವಾಸನಾ
ಬನ್‌ಪೂಲ್‌ ಅನುವಾದ: ಪಾ.ವೆಂ. ಆಚಾರ್ಯ
ಪ್ರಾಕೃತ ಜಗದ್ವಲಯ
ಪ್ರಾಕೃತ ಜಗದ್ವಲಯ
ಷ. ಶೆಟ್ಟರ್
ಅಸ್ಪೃಶ್ಯ ಗುಲಾಬಿ
ಅಸ್ಪೃಶ್ಯ ಗುಲಾಬಿ
ಮಂಜುನಾಥ ವಿ.ಎಂ
ಪ್ರಪಾತ
ಪ್ರಪಾತ
ಬಿ.ಆರ್‌.ಜಯರಾಮರಾಜೇ ಅರಸ್‌
ಕನ್ನಡ ಭಾಷೆಗಳು
ಕನ್ನಡ ಭಾಷೆಗಳು
ಅಂತರಾಳ
ಅಂತರಾಳ
ಬೆಳವಡಿಯ ವೀರರಾಣಿ ಮತ್ತಿತರ ಕತೆಗಳು
ಬೆಳವಡಿಯ ವೀರರಾಣಿ ಮತ್ತಿತರ ಕತೆಗಳು
ಹಂಸಯಾನ
ಹಂಸಯಾನ
ಬೇರು
ಬೇರು
ಫಕೀರ
ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್
ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್
ಡಿ.ಎಸ್‌. ಶ್ರೀನಿವಾಸ್‌ ಪ್ರಸಾದ್‌
ವರ್ಣಮಾಲೆಯಲ್ಲಿ ಕನ್ನಡ ಚರಿತೆ
ವರ್ಣಮಾಲೆಯಲ್ಲಿ ಕನ್ನಡ ಚರಿತೆ
ಲಲಿತಾ ಕೆ. ಹೊಸಪ್ಯಾಟಿ
ಮಲೆನಾಡಿನ ಶಿಕಾರಿಯ ನೆನಪುಗಳು
ಮಲೆನಾಡಿನ ಶಿಕಾರಿಯ ನೆನಪುಗಳು
ಕಡಿದಾಳು ಕೆ.ಎಸ್. ರಾಮಪ್ಪಗೌಡ
ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ
ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ
ಡಾ. ಜಿ. ಭಾಸ್ಕರ ಮಯ್ಯ
ಮೈಲಾರಲಿಂಗ ಪರಂಪರೆ
ಮೈಲಾರಲಿಂಗ ಪರಂಪರೆ
ಎಫ್‌.ಟಿ.ಹಳ್ಳಿಕೇರಿ
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ