ಹಿಂದುತ್ವ ಮತ್ತು ದಲಿತರು: ಕೋಮುವಾದಿ ರಾಜಕಾರಣ ಒಂದು ತಾತ್ವಿಕ ವಿಮರ್ಶೆ

ಫ್ಯಾಸಿಸ್ಟ್‌ ದಬ್ಬಾಳಿಕೆಯ ಹಲವು ಆಯಾಮಗಳು


ಲೇಖಕ : ಸಂ : ಆನಂದ್ ತೇಲ್‌ ತುಬ್ಕೆ
ಪ್ರಕಾಶಕರು : ಲಡಾಯಿ ಪ್ರಕಾಶನ, ಪ್ರಸಾದ್ ಹಾಸ್ಟೆಲ್, ಗದಗ
ಪ್ರಕಟವಾದ ವರ್ಷ : ..
ಪುಟ : 248
ರೂ : ₹160

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಮುಸ್ಲಿಮರ ಹತ್ಯಾಕಾಂಡದಲ್ಲಿ ದಲಿತರು ಮುಖ್ಯ ಪಾತ್ರ ವಹಿಸಿದ ವಿದ್ಯಮಾನವನ್ನು ಪರಾಮರ್ಶೆಗೆ ಒಳಪಡಿಸುವುದು ಈ ಪುಸ್ತಕದ ಮುಖ್ಯ ಉದ್ದೇಶ ಎಂದು ಕೃತಿಯ ಸಂಪಾದಕ ಆನಂದ್ ತೇಲ್‌ತುಂಬ್ಡೆ ಹೇಳುತ್ತಾರೆ. ಒಂಬತ್ತು ಲೇಖನಗಳಿರುವ ಈ ಪುಸ್ತಕ 2004ರಲ್ಲಿ ಪ್ರಕಟವಾಗಿದ್ದು, ಈಗ ಮರುಮುದ್ರಣ ಕಂಡಿದೆ.

 

ಹಿಂದೂ ಸಿದ್ಧಾಂತವೇ ಶತಮಾನಗಳಿಂದ ದಲಿತರ ದಮನಕ್ಕೆ ಕಾರಣವಾಗಿದ್ದರೂ ಹಿಂದೂ ಸಿದ್ಧಾಂತದ ರಕ್ಷಣೆಗಾಗಿ ದಲಿತರು ಕಂಕಣಬದ್ಧರಾಗಿ ನಿಲ್ಲುವುದು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

 

ಹಿಂದುತ್ವ ಶಕ್ತಿಗಳು ಉದ್ದಕ್ಕೂ ದಲಿತವಿರೋಧಿಯಾಗಿಯೇ ನಡೆದುಕೊಂಡು ಬಂದಿವೆ. ಆದರೆ ಇದು ದಲಿತರ ಗಮನಕ್ಕೆ ಬಾರದಂತೆ ಮರೆಮಾಚುವಲ್ಲಿಯೂ ಯಶಸ್ವಿಯಾಗಿವೆ. ಅಷ್ಟೇ ಅಲ್ಲದೆ, ತನ್ನ ಕೋಮುವಾದಿ ಕಾರ್ಯಸೂಚಿಯನ್ನು ಜಾರಿಗೊಳಿಸಲು ಇದೇ ದಲಿತರನ್ನು ಬಳಸಿಕೊಂಡಿವೆ. ದಲಿತ ಚಳವಳಿಯ ಸೈದ್ಧಾಂತಿಕ ಭ್ರಷ್ಟತೆಯೇ ಇದಕ್ಕೆ ಅವಕಾಶ ಕೊಟ್ಟಿದೆ ಎಂಬ ನೆಲೆಗಟ್ಟಿನಲ್ಲಿಯೇ ಇಲ್ಲಿರುವ ಲೇಖನಗಳು ರಚನೆಗೊಂಡಿವೆ.

 

2004ರಲ್ಲಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಜಾರಿಗೆ ತಂದ ಗೋಹತ್ಯೆ ನಿಷೇಧದ ಸುಗ್ರೀವಾಜ್ಞೆಯ ಬಗ್ಗೆಯೂ ಒಂದು ಲೇಖನದಲ್ಲಿ ಪ್ರಸ್ತಾಪ ಇದೆ. ನವ ಉದಾರವಾದ ಮತ್ತು ಹಿಂದುತ್ವದ ನಡುವಣ ಸಾಮ್ಯ ಇಲ್ಲಿ ಚರ್ಚೆಗೊಳಲಾಗಿದೆ. ನವ ಉದಾರವಾದದೊಂದಿಗೆ ಹಿಂದುತ್ವವು ವಿಶೇಷವಾದ ಸಂಬಂಧ ಹೊಂದಿದ್ದರೆ, ‘ಹಿಂದುತ್ವವು ನವ ಉದಾರವಾದಿಗಳ ಅತ್ಯಾಕಾಂಕ್ಷಿತ ಆಯ್ಕೆಯೂ ಆಗಿದೆ’ ಎಂದು ಆನಂದ್ ತೇಲ್‌ತುಂಬ್ಡೆ ಅವರು ಅಭಿಪ್ರಾಯಪಡುತ್ತಾರೆ. ‘ನವ ಉದಾರವಾದಿ ಜಾಗತೀಕರಣವು ಜನ ಸಾಮಾನ್ಯರ ದೈನಂದಿನ ಜೀವನಕ್ಕೆ ಹೇಗೆ ಬಹುದೊಡ್ಡ ವಿಪತ್ತನ್ನು ತಂದೊಡ್ಡುತ್ತದೆಯೋ ಹಾಗೆಯೇ ಅದಕ್ಕನುಗುಣವಾಗಿ ಫ್ಯಾಸಿಸ್ಟ್ ದಬ್ಬಾಳಿಕೆಯೂ ಹೆಚ್ಚುತ್ತಾ ಹೋಗುತ್ತದೆ’ ಎಂದು ಅವರು ಪ್ರತಿಪಾದಿಸುತ್ತಾರೆ.

 

ಫ್ಯಾಸಿಸ್ಟ್ ಹಿಂದುತ್ವದ ವ್ಯಾಪಕ ಬೆಳವಣಿಗೆಯು ದಲಿತರ ಸಾಮಾಜಿಕ ಆಕಾಂಕ್ಷೆಯ ಕಾರ್ಯಸೂಚಿಯನ್ನು ನಿಯಂತ್ರಿಸಿ, ಹತ್ತಿಕ್ಕುವ ಸಾಧ್ಯತೆಗಳಿವೆ ಎಂದು ತೇಲ್‌ತುಂಬ್ಡೆ ಆತಂಕ ವ್ಯಕ್ತಪಡಿಸುತ್ತಾರೆ. ಜಾಗತೀಕರಣ ಮತ್ತು ಹಿಂದುತ್ವವನ್ನು ಎರಡು ತಲೆಯ ರಾಕ್ಷಸ ಎಂದು ಅವರು ಬಣ್ಣಿಸುತ್ತಾರೆ. ಈ ಎರಡು ತಲೆಯ ರಾಕ್ಷಸನ ವಿರುದ್ಧದ ಹೋರಾಟದಲ್ಲಿ ದಲಿತರೇ ನಿರ್ಣಾಯಕ ಶಕ್ತಿ ಎಂಬುದು ಅವರ ಭಾವನೆಯಾಗಿದೆ.

 

ಹಿಂದುತ್ವ ಮತ್ತು ದಲಿತ ಮಹಿಳೆ ಎಂಬ ವಿಷಯವನ್ನು ವಿಶ್ಲೇಷಣೆಗೆ ಒಳಪಡಿಸುವ ಲೇಖನವನ್ನು ಮೀನಾ ಕಂದಸಾಮಿ ಬರೆದಿದ್ದಾರೆ. ಸಂಘ ಪರಿವಾರದ ಸಂಘಟನೆಗಳಲ್ಲಿ ಮಾತೃಶಕ್ತಿಗೆ ಹೆಚ್ಚು ಮಹತ್ವವೇ ಹೊರತು ಸ್ತ್ರೀತ್ವಕ್ಕೆ ಅಲ್ಲ. ಆಧುನಿಕ ಸ್ತ್ರೀವಾದದ ಯಾವುದೇ ಆಶೋತ್ತರಗಳಿಗೆ ಇಲ್ಲಿ ಅವಕಾಶ ಇಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ. ಬ್ರಾಹ್ಮಣ ಸಂಸ್ಕೃತಿಯನ್ನು ವೈಭವೀಕರಿಸುತ್ತಾ ಅದನ್ನು ದಲಿತ ಮಹಿಳೆಯರ ಮೇಲೆ ಹೇರಲಾಗುತ್ತಿದೆ ಎಂಬುದು ಅವರ ಕಳವಳವಾಗಿದೆ.

 

ಶಿವಶಕ್ತಿ ಮತ್ತು ಭೀಮಶಕ್ತಿಯ ನಡುವಣ ಐಕ್ಯತೆಯನ್ನು ಪುಸ್ತಕವು ವಿಶ್ಲೇಷಣೆಗೆ ಒಳಪಡಿಸಿದೆ. ಇಲ್ಲಿ ದಲಿತ ಸಮುದಾಯದ ಕೆಲವರಿಗೆ ಸ್ಥಾನಮಾನ ದೊರೆತರೂ ಅದು ಪೋಷಕ-ಆಶ್ರಿತರ ನಡುವಣ ಋಣಭಾವ ಸಂಬಂಧವೇ ಹೊರತು ಸಶಕ್ತೀಕರಣ ಅಲ್ಲ. ಇದರಿಂದ ಅಪಾಯವೇ ಹೆಚ್ಚು ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ.

 

‘ಆರೆಸ್ಸೆಸ್ ದೇಶದ ರಾಜಕಾರಣವನ್ನು ನೇರವಾಗಿ ನಿಯಂತ್ರಿಸುತ್ತಿದೆ... ಅಂಬೇಡ್ಕರ್ ವಿಚಾರಗಳನ್ನು ಧ್ವಂಸ ಮಾಡಿ ಅವರನ್ನು ಆರಾಧನಾ ಸಂಸ್ಕೃತಿಯ ಭಾಗವಾಗಿ ಮಾರ್ಪಡಿಸಲಾಗುತ್ತಿದೆ’ ಎಂದು ಎರಡನೇ ಮುದ್ರಣದ ಪ್ರಸ್ತಾವನೆಯಲ್ಲಿ ಅನುವಾದದ ಸಂಯೋಜಕ ಬಿ. ಗಂಗಾಧರಮೂರ್ತಿ ಹೇಳುತ್ತಾರೆ.

Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.