ಅರಿವೇ ಅಂಬೇಡ್ಕರ್‌

ಅರಿವೇ ಅಂಬೇಡ್ಕರ್‌


ಲೇಖಕ : ಹಂದಲಗೆರೆ ಗಿರೀಶ್‌
ಪ್ರಕಾಶಕರು : ಅವಿರತ ಪುಸ್ತಕ, ಗಿರಿನಗರ, ಬೆಂಗಳೂರು– 560085
ಪ್ರಕಟವಾದ ವರ್ಷ : .
ಪುಟ : 248
ರೂ : ₹200

ಕನ್ನಡದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್‌ ಅವರ ಕುರಿತಾಗಿ ಬಂದ 125 ಕವಿತೆಗಳು ‘ಅರಿವೇ ಅಂಬೇಡ್ಕರ್‌’ನಲ್ಲಿ ಸಂಕಲಿತಗೊಂಡಿವೆ. ಬಾಬಾ ಸಾಹೇಬ ಅವರ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಕವಿ ಹಂದಲಗೆರೆ ಗಿರೀಶ್‌ ಈ ಕವಿತೆಗಳ ಸಂಗ್ರಹವನ್ನು ಸಂಪಾದಿಸಿದ್ದಾರೆ. ಅಂಬೇಡ್ಕರ್‌ ಪ್ರಭಾವ ಎಲ್ಲ ಜಾತಿ ವರ್ಗಗಳನ್ನು ಮೀರಿದ್ದು. ಹಾಗಾಗಿ ಇಲ್ಲಿ ಜಾಗ ಪಡೆದಿರುವ ಕವಿಗಳು ಮೂರು ತಲೆಮಾರಿಗೆ ವಿವಿಧ ವರ್ಗ, ಧರ್ಮ, ಜಾತಿಗೆ ಸೇರಿದವರು. ಅವರು ಕಂಡ ಹಲವು ಬಗೆಯ ಅರಿವಿನ ಪ್ರತಿಬಿಂಬಗಳು ಇಲ್ಲಿ ದಾಖಲಾಗಿವೆ.

ಕನ್ನಡದ ಕವಿಗಳು ಅಂಬೇಡ್ಕರ್‌ ಅವರನ್ನು ಹೇಗೆ ನೋಡಿದರು ಮತ್ತು ಅವರ ವಿಚಾರಗಳಿಗೆ ಹೇಗೆ ಪ್ರತಿಸ್ಪಂದಿಸಿದರು ಎಂಬದನ್ನು ಇಲ್ಲಿನ ಕವಿತೆಗಳು ಓದುಗರಿಗೆ ಮನದಟ್ಟು ಮಾಡಬಲ್ಲವು. ಕನ್ನಡದ ಬಹುಮುಖ್ಯ ಕವಿಗಳಾದ ಚಂದ್ರಶೇಖರ ಕಂಬಾರ, ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಪಾಟೀಲರ ಜೊತೆಗೆ ಇತ್ತೀಚಿನ ರಾಜೇಂದ್ರ ಪ್ರಸಾದ್‌, ಹಂದಲಗೆರೆ ಗಿರೀಶರ ಕವಿತೆಗಳು ಅಂಬೇಡ್ಕರ್‌ ಅವರನ್ನು ಹಲಬಗೆಯಲ್ಲಿ ಮೂಡಿಸಿವೆ, ಮಂಡಿಸಿವೆ.

ಈ ಎಲ್ಲರೂ ಬರೆದ ರೇಖೆಗಳು ಸೇರಿ ಅಂಬೇಡ್ಕರ್‌ ಅವರ ಚಿತ್ರ ಪೂರ್ಣವಾಗುತ್ತದೆ. ಕಾವ್ಯ ಕರ್ಮದ ದೃಷ್ಟಿಯಿಂದಲೂ ಈ ವೈವಿಧ್ಯಮಯ ಲಯ, ವಿಚಾರಗಳ ಕವಿತೆಗಳು ಒಂದು ಓದಿಗೆ ಅರ್ಹವಾಗಿವೆ.

ಇಲ್ಲಿನ ಎಲ್ಲರೂ ಅಂಬೇಡ್ಕರ್‌ ಅವರ ಎಲ್ಲ ವಿಚಾರಗಳನ್ನು ಓದಿ, ತಿಳಿದು, ಅರಗಿಸಿಕೊಂಡು ಅವರ ಚಿತ್ರವನ್ನು ಕಡೆದಿಟ್ಟಿದ್ದಾರೆ ಎಂದು ಓದುಗರು ತಿಳಿಯಬೇಕಿಲ್ಲ. ಮನುಷ್ಯನ ಘನತೆ, ಸಮತೆ, ಮಾನವೀಯತೆಗೆ ಹೊಸ ದೃಷ್ಟಿಕೊಟ್ಟ ಅಂಬೇಡ್ಕರ್‌ ಎಲ್ಲ ವಿಚಾರವಂತರ, ಅಸಹಾಯಕರ ಬೆಳಕಿನ ದಾರಿ. ಆಗಾಗ ಆ ಬೆಳಕಿನ ಕಿರಣಗಳು ಎಲ್ಲರನ್ನೂ ಸೋಕುತ್ತಲೇ ಇರುತ್ತವೆ. ಆದ್ದರಿಂದ ಅಂಬೇಡ್ಕರ್‌, ಒಂದು ಪ್ರತಿಮೆಯಾಗಿ, ರೂಪಕವಾಗಿ ಬೆಳೆದ ಚಿತ್ರಗಳನ್ನು ಇಲ್ಲಿ ಕಾಣಬಹುದು. ಅವುಗಳಲ್ಲಿ ಕೆಲವು ಘೋಷಣೆಗಳಾಗಿವೆ, ವಾಚಾಳಿಗಳಾಗಿವೆ, ಸಡಿಲವಾಗಿವೆ. ಮತ್ತು ಕಾವ್ಯದ ಸಾಮಾನ್ಯ ಅಂಶಗಳಿಗೂ ಎರವಾಗಿವೆ.

ಎನ್‌.ಕೆ. ಹನುಮಂತಯ್ಯ ಅವರು ತಮ್ಮ ಕವಿತೆ ‘ಅರಿವೇ ಅಂಬೇಡ್ಕರ್‌’ನಲ್ಲಿ, ‘ನರನಾಡಿಗಳಿಗೆಲ್ಲ/ ಕಿಡಿಯ ಗೂಡು ಕಟ್ಟಿದೋನು/ ಗೂಡು ಸುಡುವ ನೆರಳಿಗೆ ನೊಂದು/ ಬುದ್ಧನೂರು ಸೇರಿದೋನು’ ಎನ್ನುತ್ತಾರೆ. ಇಲ್ಲಿನ ಇಂತಹ ಅನೇಕ ಸಾಲುಗಳು ಅಂಬೇಡ್ಕರ್‌ ಅವರನ್ನು ಓದುಗರ ಸನಿಹಕ್ಕೆ ಒಯ್ಯಲು ಶಕ್ತವಾಗಿವೆ.

 

Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.