ಜಾಡಮಾಲಿ ಇಲ್ಲದ ನಗರ

ಜಾಡಮಾಲಿ ಇಲ್ಲದ ನಗರ


ಲೇಖಕ : ಸಿದ್ಧಾರೂಢ ಗುರುನಾಥ ಕಟ್ಟಿಮನಿ
ಪ್ರಕಾಶಕರು : ಎಸ್‌.ಎಲ್‌.ಎನ್‌. ಪಬ್ಲಿಕೇಶನ್‌, ಬನಶಂಕರಿ, ಬೆಂಗಳೂರು– 28
ಪ್ರಕಟವಾದ ವರ್ಷ : .
ಪುಟ : 108
ರೂ : ₹90

‘ಬೃಹತ್ ಹುದ್ದೆಯಲ್ಲಿರುವವರೆಲ್ಲ ಕೊಳಕು ಮಾಡುವರೆಷ್ಟೋ

ಅವರಿಗಿದ್ದಷ್ಟು ಸ್ವಚ್ಛ ಮಾಡುವವರಿಗಿಲ್ಲ ಕೊರಗು ನನ್ನಲ್ಲಿ ಸರ್ಕಾರ ಹುಚ್ಚು

ಹಾದಿಯಲಿ ಝಗಝಗಾಯಮಾನ ದಾರಿ ನಿಮಗುಂಟು, ಬೇಕಾದರೆ

ಕಲ್ಪಿಸಿಕೊಳ್ಳಿ ಕಲ್ಲಣ್ಣಗಳಿರಾ ಜಾಡಮಾಲಿ ಇಲ್ಲದ ನಗರ

ಝರ್ಝರಾಮನೆಯಂತಾಗುತ್ತದೆ ಬೀದಿ ಅದಕ್ಕೆ ದೇಶದೊಳಗಿನ

ಯೋಧನಂತೆ ಗೋಚರಿಸುತ್ತಾನೆ ಎನಗೆ ಜಾಡಮಾಲಿ’

–ಹೀಗೆ ಜಾಡಮಾಲಿಯನ್ನು ದೇಶದೊಳಗಿನ ಯೋಧಕ್ಕೆ ಹೋಲಿತ್ತಾರೆ ಕವಿ ಸಿದ್ಧಾರೂಢ ಗುರುನಾಥ ಕಟ್ಟಿಮನಿ. ಉನ್ನತ ಹುದ್ದೆಯ ಅಧಿಕಾರದ ಅಮಲಿನಲ್ಲಿರುವ ಕೊಳಕು ಮನಸುಗಳಿಗೆ ಕನ್ನಡಿ ಹಿಡಿಯುವ ಕವಿ, ನಿಷ್ಕಲ್ಮಶ ಮನಸಿನ ಜಾಡಮಾಲಿ ಇಲ್ಲದಿದ್ದರೆ ಬೀದಿ ಏನಾಗಬಹುದು ಎಂಬುದನ್ನು ’ಜಾಡಮಾಲಿ ಇಲ್ಲದ ನಗರ’ ಕವಿತೆಯಲ್ಲಿ ಸೂಚ್ಯವಾಗಿ ಹೇಳುತ್ತಾರೆ.

ಈಗಾಗಲೇ ಕಾವ್ಯ ಲೋಕದಲ್ಲಿ ಪ್ರವೇಶಿಸಿ ಒಂದು ಹಂತದವರೆಗೆ ಕಾವ್ಯ ಕನ್ನಿಕೆಯನ್ನು ಒಲಿಸಿಕೊಂಡಿರುವ ಕವಿ, ನಿತ್ಯದ ಬದುಕಿನ ತವಕ–ತಲ್ಲಣಗಳನ್ನು ಕವಿತೆಯ ವಸ್ತುವನ್ನಾಗಿಸಿಕೊಂಡಿದ್ದಾರೆ. ಕವನ ಸಂಕಲನದ ಶೀರ್ಷಿಕೆ ತಕ್ಕಂತೆ ಇಲ್ಲಿನ ಕವಿತೆಗಳು ಸಮಾಜದ ಓರೆಕೋರೆಗಳನ್ನು ಹಸನು ಮಾಡುವ ಕಾಯಕಕ್ಕೆ ಕರೆ ನೀಡುವಂತಿವೆ. ಹೆಣ್ಣಿನ ಮೇಲಿನ ದೌರ್ಜನ್ಯಗಳನ್ನು ಖಂಡಿಸುವ ಕವಿತೆಗಳು, ಶೋಷಣೆಗೆ ಎದುರಾಗಿ ನಿಲ್ಲುವ ಹೆಣ್ಣಿನ ಚಿತ್ರಣವನ್ನೂ ಕಟ್ಟಿಕೊಡಲು ಪ್ರಯತ್ನಿಸಿರುವುದು ಗಮನೀಯ.

78 ಕವನಗಳನ್ನು ಒಳಗೊಂಡಿರುವ ಈ ಕವನ ಸಂಕಲನದಲ್ಲಿ ಬಹುತೇಕ ಕವಿತೆಗಳು ವಾಚ್ಯವಾಗಿವೆ. ಕವಿಯ ಮಾತಿನಲ್ಲೇ ಹೇಳುವುದಾದರೆ ‘ಚಿಂತನೆ, ಗಾಂಭೀರ್ಯದ ನವ್ಯಕ್ಕಿಂತ ಮಾಧುರ್ಯ ಬೆರೆಸಿದ ಕವಿತೆಗಳು’. ಹಾಡಲು ಅನುವಾಗಲೆಂಬಂತೆ ರಚನಾ ವಿನ್ಯಾಸ ಹೊಂದಿರುವ ಕಾರಣ, ಅಲ್ಲಲ್ಲಿ ಕಾವ್ಯದ ಗೇಯತೆ ಗೌಣವಾಗಿದೆ. ಹರೆಯದ ಪ್ರೇಮ, ಆಕರ್ಷಣೆ, ಹೆಣ್ಣಿನ ಒಲವಿನ ಕುರಿತು ಕೆಲ ಕವಿತೆಗಳು ಗಮನ ಸೆಳೆಯುವಂತಿವೆ.

‘ಕರಗಿದಳು ಮರುಗಿದಳು ಆಟವೇ

ಪಾಠವಾಗಿಸಿ ಹೊತ್ತುಹೊತ್ತಿಗೆ ಉಣ್ಣಿಸಿ ತಿನ್ನಿಸಿದಳು’

‘ಗಾಣದ ಎತ್ತಾಗಿ ದುಡಿದಳು ಕರಗಿದವು ರುಧಿರದ

ಹನಿಗಳು ಬೆವರಾಗಿ ಸದಾ ಹಗಲಿರುಳು’ (ಅಜ್ಜಿ ಹುಟ್ಟಿದಳು)

ಈ ಸಾಲುಗಳು ಅಜ್ಜಿಯ ಪ್ರೀತಿ, ಕಕ್ಕುಲಾತಿಯನ್ನು ಕಟ್ಟಿಕೊಡುತ್ತಾ, ತೀರಿಹೋದ ಅಜ್ಜಿಯನ್ನು ಮಗಳಲ್ಲಿ ಕಂಡುಕೊಳ್ಳುವ ಬಗೆ ಓದುಗನ ಮನ ತಟ್ಟುತ್ತದೆ. ಚದುರಿದ ಚಿತ್ರಗಳಿಂತಿರುವ ಇಲ್ಲಿನ ಕವನಗಳು ನಿಧಾನಗತಿಯಲ್ಲಿ ಸಹೃದಯರನ್ನು ತಲುಪುತ್ತವೆ. ಆದರೆ, ಕವನ ಸಂಕಲನದ ನಡುವೆ ಅಲ್ಲಲ್ಲಿ ಕಂಡುಬರುವ ಮುದ್ರಾರಾಕ್ಷಸನ ಹಾವಳಿ ಕಾವ್ಯದ ಚೆಲುವನ್ನು ಅಂದಗೆಡಿಸುವಂತಿದೆ.

Comments (Click here to Expand)
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ