ಸರ್ವಋತು ಬಂದರು

ಸರ್ವಋತು ಬಂದರು


ಲೇಖಕ : ಸಿಂಧು ರಾವ್‌ ಟಿ
ಪ್ರಕಾಶಕರು : ಅಂಕಿತ ಪುಸ್ತಕ, ಗಾಂಧಿ ಬಜಾರ್‌, ಬಸವನಗುಡಿ, ಬೆಂಗಳೂರು – 560004
ಪ್ರಕಟವಾದ ವರ್ಷ : .
ಪುಟ : 152
ರೂ : ₹130

ತೀರಿಹೋದ ಅಪ್ಪ ಕಣ್ಣೆದುರಿಗಿದ್ದಾಗ ತಾನು ನೀಡಿದ ಕಿರಿಕಿರಿಯ ಅರಿವು ಕಂಡುಕೊಳ್ಳುವ ಸೀತಾರಾಮ, ತಂದೆ ಇದ್ದಿದ್ದರೆ ಅವರಿಗೆ ಮಾಡಬಹುದಾಗಿತ್ತು ಎನ್ನುವ ಸೇವೆಯನ್ನು ಭಿಕ್ಷುಕನೊಬ್ಬನಿಗೆ ಮಾಡುತ್ತಾನೆ. ಈ ಮೂಲಕ ತನ್ನೊಳಗೇ ಕಾಣೆಯಾಗಿದ್ದ ಸೂಕ್ಷ್ಮತೆಯನ್ನು ಪತ್ತೆ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಅಪ್ಪನಿಗೆ ನೀಡಿದ್ದ ಕಿರಿಕಿರಿಗೆ ಶಮನ ಇಲ್ಲದೆ ಇದ್ದರೂ, ಸ್ವಾನುಕಂಪದಲ್ಲಿ ಸೊರಗುವ ಸಂಕಟದಿಂದ ಮುಕ್ತನಾಗುತ್ತಾನೆ. ಮರೆತಂತಿದ್ದ ಸೂಕ್ಷ್ಮತೆ ಮತ್ತೆ ಮೈತಳೆಯುವುದಕ್ಕಿಂತ ಹೆಚ್ಚಿನದೇನಿದೆ ಎನ್ನುವುದನ್ನು ಧ್ವನಿಸುವಂತಿರುವ ಇದು ಸಂಕಲನದ ಮೊದಲ ಕತೆ ‘ಸ್ನಾನ’ದ ಆವರಣ.

ಅಮ್ಮನ ಕೈಯಲ್ಲಿ ಹದಗೊಳ್ಳುವ ಕಾಫಿಯ ಘಮ ಆವರಿಸುತ್ತಿದ್ದಂತೆ, ನಿದ್ದೆಯಲ್ಲಿರುವ ಎಳೆಯ ಮಗಳು ಥಟ್ಟನೆ ಎದ್ದುಬಿಡುತ್ತಾಳೆ. ಬೆಳಗಿನ ಹೊತ್ತಿನಲ್ಲಿ ಕಾಫಿಗಾಗಿ ಮುದ್ದುಮುದ್ದಾಗಿ ಪೀಡಿಸುವ ಪುಟ್ಟ ಕೂಸು ಅದು. ಆ ಪುಟ್ಟ ಕೂಸಿನ ಸಣ್ಣ ಸಣ್ಣ ವಿವರಗಳ ವರ್ಣನೆ ಆಪ್ತವಾಗಿದೆ. ಆದರೆ ಇಡೀ ಕಥೆಯ ರಚನೆ ಗರ್ಭತಳೆದಿರುವುದು ಅಮ್ಮನ ಭಾವಕೋಶದಲ್ಲಿ. ಕಾಫಿಗೆ ಪೀಡಿಸುವ ಮುದ್ದು ಕೂಸಿನ್ನೂ ಹೊರಲೋಕ ಕಂಡು ಕಣ್ಣರಳಿಸಲಿಕ್ಕಿದೆ. ಇದು ಕಥೆಯ ಕೊನೆಗೆ ತಿಳಿದಾಗ ಓಹೊ ಎನಿಸಿ ನಗೆ ಅರಳುತ್ತದೆ.

ಅಪ್ಪನ ಸಾವಿನ ನಂತರದಲ್ಲಿ ವ್ಯಕ್ತಿಯೊಬ್ಬನಲ್ಲಿ ಮೂಡುವ ಸೂಕ್ಷ್ಮತೆ ಒಂದು ಕಡೆ. ಮತ್ತೊಂದರಲ್ಲಿ ಜನ್ಮತಳೆಯಲಿರುವ ಕೂಸಿನ ಮುದ್ದು ಪೀಡನೆಯ ಕನಸು ಕಾಣುವ ಸೂಕ್ಷ್ಮ ಮನಸಿನ ಅನಾವರಣ. ಇವೆರಡು ಸುಮ್ಮನೆ ಹೆಕ್ಕಿ ತೆಗೆದಿರುವ ಕತೆಗಳ ಒಳಗಿನ ಕಿರು ಆವರಣಗಳಷ್ಟೆ.

‘ಮೊದಲ ದಿನ ಮೌನ’, ‘ನರಸ, ಅಜ್ಜ ಮತ್ತು ಪುಟ್ಟಿ’, ಹೀಗೆ ಹಲವು ಕಥೆಗಳಲ್ಲಿ, ಭಿನ್ನ ತಲೆಮಾರುಗಳು ತಮ್ಮ ತಮ್ಮ ಭಾವಲೋಕದಲ್ಲಿ ಒಡಮೂಡುವ ತಲ್ಲಣ, ತವಕ, ಸಂತಸ, ಹಳವಂಡಗಳನ್ನು ಹಂಚಿಕೊಳ್ಳುವ ಪರಿಚಯಿಸಿಕೊಳ್ಳುವ ಆವರಣದಲ್ಲಿ ಕಥೆಗಳು ಆಪ್ತಭಾವ ಮೂಡಿಸುತ್ತವೆ. ಹಾಗೂ ಇನ್ನು ಕೆಲವು ಕಥೆಗಳು ಮತ್ತಷ್ಟು ವಿಸ್ತಾರವಾದ ಆವರಣದಲ್ಲಿ ರೂಪುಗೊಳ್ಳುವ ಸಾಧ್ಯತೆಗಳನ್ನು ಹೊಂದಿವೆ. ಹಾಗೆ ವಿಸ್ತರಿಸಿದರೂ ವಿವರಗಳು ವಾಚ್ಯವಾಗದಂತೆ ನೋಡಿಕೊಳ್ಳುವ ಸುಳುಹುಗಳನ್ನು ಸಂಕಲನದಲ್ಲಿ ಅಲ್ಲಲ್ಲಿ ಕಾಣಬಹುದಾಗಿದೆ. ಹಾಗಾಗಿ ಮತ್ತಷ್ಟು ದಟ್ಟ ಎನಿಸುವಂತಹ ಆವರಣದಲ್ಲಿ ಲೇಖಕಿ ಹೊಸ ಹೊಸ ಕಥೆಗಳನ್ನು ರೂಪುಗೊಳಿಸಲಿ ಎಂದು ನಿರೀಕ್ಷಿಸಿಬಹುದು.

Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.