ಚೌರ ಸುಖ

ಚೌರ ಸುಖದ ನೆನಪ ಲಹರಿ


ಲೇಖಕ : ವೈ.ಎನ್.ಗುಂಡೂರಾವ್
ಪ್ರಕಾಶಕರು : ಅಂಕಿತ ಪುಸ್ತಕ, ಗಾಂಧಿ ಬಜಾರ್, ಬೆಂಗಳೂರು
ಪ್ರಕಟವಾದ ವರ್ಷ : ..
ಪುಟ : 200
ರೂ : 195

ಈಗೊಂದಿಷ್ಟು ವರ್ಷಗಳ ಹಿಂದೆ ಮಲೆನಾಡು, ಕರಾವಳಿ ಪ್ರದೇಶಗಳ ಜನರ ಬಾಯಲ್ಲಿ ಒಂದು ಮಾತು ಕೇಳಿಬರುತ್ತಿತ್ತು. ‘ಚೌರದಂಗಡಿಗೆ ಹೋಗಿ ಗಡ್ಡ ಮೀಸೆ ಬೋಳಿಸಿಕೊಳ್ಳುವಾಗ ಹುಷಾರು. ಬ್ಲೇಡ್‌ ಬದಲಾಯಿಸದಿದ್ದರೆ ಇನ್ನೊಬ್ಬರ ರಕ್ತ ನಮಗೆ ತಾಗಿ, ಆ ಇನ್ನೊಬ್ಬರಿಗೆ ಇದ್ದಿರಬಹುದಾದ ಕಾಯಿಲೆಗಳಲು ನಮಗೂ ಬರಬಹುದು. ಯಾರಿಗೆ ಗೊತ್ತು, ಏಡ್ಸ್‌ ಕೂಡ ಬರಬಹುದು’ ಎಂಬ ಮಾತು ಅದು.

 

ಯಾರಿಗೆ ಕಾಯಿಲೆ ಬಂತೋ ಅಥವಾ ಇನ್ನೇನಾದರೂ ಆಯಿತೋ ಗೊತ್ತಿಲ್ಲ. ಆ ಮಾತು ಜನರ ಬಾಯಿಂದ ಬಾಯಿಗೆ ಹರಡಿದ ನಂತರವಂತೂ, ಕ್ಷೌರಿಕರು ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಸರಿಯಾಗಿ ಕಾಣುವಂತೆ ಹಳೆ ಬ್ಲೇಡ್ ತೆಗೆದು, ಹೊಸ ಬ್ಲೇಡ್ ಹಾಕುತ್ತಿದ್ದರು – ಗಡ್ಡ ಮೀಸೆ ಬೋಳಿಸುವ ಸಾಧನಕ್ಕೆ! ಈ ಒಂದು ನೆನಪನ್ನು ಇಟ್ಟುಕೊಂಡು ‘ಚೌರ ಸುಖ’ ಎಂಬ ಪುಸ್ತಕ ಓದಲಿಕ್ಕೆ ಕುಳಿತರೆ ಸಿಗುವುದು ಕನ್ನಡದ ಹೆಸರಾಂತ ಸಾಹಿತಿಗಳು ಚೌರದ ಬಗ್ಗೆ ಬರೆದಿರುವ ವಿವಿಧ ಬರಹಗಳು ಹಾಗೂ ಆ ಬರಹಗಳು ನೀಡುವ ಓದಿನ ಸುಖ. ಈ ಪುಸ್ತಕವನ್ನು ಸಂಪಾದಿಸಿದವರು ವೈ.ಎನ್. ಗುಂಡೂರಾವ್. ಪುಸ್ತಕ ಪ್ರಕಟಿಸಿರುವುದು ‘ಅಂಕಿತ ಪುಸ್ತಕ’.

 

 ‘ಚೌರ ಸುಖ’ ಪುಸ್ತಕವು ಮೂವತ್ತಮೂರು ಪ್ರಬಂಧಗಳ ಗುಚ್ಛ. ಇದರಲ್ಲಿ ಗೊರೂರು, ಡಾ. ಕೃಷ್ಣಾನಂದ ಕಾಮತ್, ವೈ.ಎನ್. ಗುಂಡೂರಾವ್, ಪಾ.ವೆಂ. ಆಚಾರ್ಯ, ಶ್ರೀನಿವಾಸ ವೈದ್ಯ, ಶರತ್ ಕಲ್ಕೋಡ್, ಕೆ.ಎನ್. ಭಗವಾನ್, ಅನಕೃ, ಎಂ.ವಿ. ಸೀತಾರಾಮಯ್ಯ, ವಿ. ಸೀತಾರಾಮಯ್ಯ, ಶಿವರಾಮ ಕಾರಂತ, ಕೃಷ್ಣಮೂರ್ತಿ ಪುರಾಣಿಕ ಸೇರಿದಂತೆ ಹಲವರ ಪ್ರಬಂಧಗಳು ಇವೆ.

 

ಪುಸ್ತಕದ ಆರಂಭದಲ್ಲೇ ಸಿಗುವ ಗೊರೂರು ಬರೆದಿರುವ ‘ಹಾರುವಯ್ಯ ಕ್ಷೌರಿಕನಾದುದು’ ಬರಹ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತಿದೆ. ಮಲ್ಲಿಗೆಹಳ್ಳಿ ಎಂಬ ಊರಿನ ಬ್ರಾಹ್ಮಣರಿಗೆ ಕ್ಷೌರ ಮಾಡುವವರು ಇಲ್ಲವಾದ ಕಾರಣ, ಬ್ರಾಹ್ಮಣರಲ್ಲಿಯೇ ಒಬ್ಬರು ಆ ವೃತ್ತಿಗೆ ಕೈಹಾಕಿದ್ದು, ನಂತರ ತಮ್ಮ ಮಾವನವರಿಂದ ಬೈಸಿಕೊಂಡು ಕ್ಷೌರ ವೃತ್ತಿ ತ್ಯಜಿಸಿದ್ದನ್ನು ಈ ಬರಹದಲ್ಲಿ ಗೊರೂರು ಬಹಳ ಸೊಗಸಾಗಿ ವಿವರಿಸಿದ್ದಾರೆ. ಈ ಲೇಖನವು ಪುಸ್ತಕದ ಕುರಿತ ಒಂದು ಉದಾಹರಣೆ ಮಾತ್ರ. ವಿರಾಮದ ಓದಿಗೆ ಬೇಕಾಗುವ ಇಂತಹ ಹಲವು ಬರಹಗಳು ‘ಚೌರ ಸುಖ’ದಲ್ಲಿ ಇವೆ.

 

ಪುಸ್ತಕದ ಕೊನೆಯತ್ತ ಸಾಗಿದಂತೆ, ಶಿವರಾಮ ಕಾರಂತರ ಬರಹವೊಂದು ಕಾಣಸಿಗುತ್ತದೆ. ಎರಡೇ ಎರಡು ಪುಟಗಳ ಆ ಬರಹವು ಗಡ್ಡದ ಕಾರಣದಿಂದಾಗಿ ಗಂಡಸಿಗೆ ಅಯಾಚಿತವಾಗಿ ಸಿಗುವ ಗೌರವವೊಂದರ ಬಗ್ಗೆ, ಆ ಗೌರವವು ಕಾರಂತರಲ್ಲಿ ಮೂಡಿಸಿದ ಮುಜುಗರದ ಭಾವದ ಬಗ್ಗೆ ಮಾತನಾಡುತ್ತದೆ. ಬಳಲಿದ ಮನಸ್ಸನ್ನು ಲವಲವಿಕೆಯ ಹಾದಿಗೆ ಮರಳಿ ತರುವ ಬರಹಗಳು ಈ ಪುಸ್ತಕದಲ್ಲಿವೆ.

Comments (Click here to Expand)
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ