ತರ್ಕ ಸಂಗ್ರಹ

ತರ್ಕ ಸಂಗ್ರಹ


ಲೇಖಕ : ಶ್ರೀಮದನ್ನಭಟ್ಟ
ಪ್ರಕಾಶಕರು : ಅಭಿಜ್ಞಾನ, ದತ್ತಾತ್ರೆಯ ದೇವಸ್ಥಾನ ರಸ್ತೆ ಮಲ್ಲೇಶ್ವರಂ ಬೆಂಗಳೂರು– 03
ಪ್ರಕಟವಾದ ವರ್ಷ : 2017
ಪುಟ : 136
ರೂ : 135

ಭಾರತೀಯ ಪರಂಪರೆಯಲ್ಲಿ ಆಸ್ತಿಕ ದರ್ಶನಗಳನ್ನು ಪ್ರಮಾಣಶಾಸ್ತ್ರ ಮತ್ತು ಪ್ರಮೇಯಶಾಸ್ತ್ರಗಳೆಂದು ವಿಭಾಗಿಸುವ ಕ್ರಮವಿದೆ. ಇದರ ಪ್ರಕಾರ ಸಾಂಖ್ಯ, ಯೋಗ ಮತ್ತು ಉತ್ತರಮೀಮಾಂಸೆ (ವೇದಾಂತ)ಗಳನ್ನು ಪ್ರಮೇಯಶಾಸ್ತ್ರಗಳೆಂದು ಕರೆದರೆ ನ್ಯಾಯ, ವೈಶೇಷಿಕ ಮತ್ತು ಪೂರ್ವಮೀಮಾಂಸಾ ಶಾಸ್ತ್ರಗಳನ್ನು ಪ್ರಮಾಣಶಾಸ್ತ್ರಗಳೆಂದು ಕರೆಯುವುದುಂಟು.

ಈ ವಿಭಾಗದ ಮೂಲಚಿಂತನೆಯನ್ನು ಹೀಗೆ ಗ್ರಹಿಸಬಹುದು; ಪ್ರಮೇಯಶಾಸ್ತ್ರಗಳೆಂದು ಕರೆದವು ಆತ್ಯಂತಿಕ ಸತ್ಯದ ಹುಡುಕಾಟದಲ್ಲಿ ಆಧ್ಯಾತ್ಮಿಕವಾದ ನೆಲೆಯನ್ನು ಪ್ರಧಾನವಾಗಿ ಇಟ್ಟುಕೊಂಡು ಮುನ್ನಡೆಯುತ್ತವೆಯಾದರೆ ಪ್ರಮಾಣಶಾಸ್ತ್ರಗಳು ವಿಶ್ಲೇಷಣಾತ್ಮಕವಾದ ದಾರಿಯನ್ನು ಹಿಡಿಯುತ್ತವೆ.

ಈ ವಿಭಾಗ ವಿಧಾನವನ್ನು ಇನ್ನೂ ಸ್ವಲ್ಪ ವಿಸ್ತರಿಸಿ ಎಲ್ಲ ಭಾರತೀಯ ದರ್ಶನಗಳನ್ನೂ ಈ ಭೂಮಿಕೆಯಲ್ಲಿ ಗ್ರಹಿಸಬಹುದು. ಮೇಲೆ ಹೇಳಿದ ಆಸ್ತಿಕದರ್ಶನಗಳಲ್ಲದೇ ನಾಸ್ತಿಕದರ್ಶನಗಳನ್ನೂ, ಶಾಕ್ತ ಶೈವಾದಿ ಆಗಮಿಕಶಾಸ್ತ್ರಗಳನ್ನೂ ಇದೇ ಬಗೆಯಲ್ಲಿ ವಿಭಜಿಸಬಹುದಾಗಿದೆ.

ಭಾರತೀಯ ದರ್ಶನಗಳನ್ನು ಪಾಶ್ಚಾತ್ಯ ವಿಧಾನಗಳಲ್ಲಿ ಅಭ್ಯಾಸ ಮಾಡುತ್ತಿರುವ ಆಧುನಿಕ ಸಂದರ್ಭದಲ್ಲಿ ಭಾರತೀಯ ದರ್ಶನಗಳೆಂದರೆ ಅವು ಆಧ್ಯಾತ್ಮಿಕಮೂಲದವೇ ಆಗಿರುತ್ತವೆ. ಅವುಗಳನ್ನು ಪಾಶ್ಚಾತ್ಯವಾದ ‘ಫಿಲಾಸಫಿ’ಯ ಪರಿಭಾಷೆಯಲ್ಲಿ ಗ್ರಹಿಸುವುದು ಅಸಾಧ್ಯ ಎನ್ನುವಂತಹ ಕಲ್ಪನೆಯಿದೆ. ಏಕೆಂದರೆ ಭಾರತೀಯ ದರ್ಶನಗಳು ಬಹುತೇಕ ತರ್ಕಸೀಮೆಯಿಂದ ಹೊರಗಿನ ಭಾಷೆಯಲ್ಲಿ ಮಾತನಾಡುತ್ತವೆ, ‘ರೀಸನ್’ಗಿಂತ ‘ಎಕ್ಸ್‌ಪೀರಿಯನ್ಸ್‌’ ಕೇಂದ್ರಿತವಾಗಿರುತ್ತವೆ. ಆದ್ದರಿಂದ ಅವುಗಳನ್ನು ‘ಫಿಲಾಸಫಿಯ’ ಶಿಸ್ತಿನಲ್ಲಿ ಇಡುವುದು ಕಷ್ಟ ಎನ್ನಿಸುವುದುಂಟು.

ಭಾರತೀಯ ದರ್ಶನಗಳೆಂದರೇ ಅಧ್ಯಾತ್ಮ ಮತ್ತು ಧರ್ಮ ಎನ್ನುವಂತೆ ಬಹುತೇಕ ಭಾರತೀಯ ಚಿಂತಕರೂ ಪ್ರತಿಪಾದಿಸುತ್ತ ಬಂದಿರುವುದೂ ನಮಗೆ ಗೊತ್ತೇ ಇದೆ. ಹಿರಿಯ ವಿದ್ವಾಂಸರಾದ ಬಿ.ಕೆ.ಮತಿಲಾಲ್‍ ಅವರು ನಾವು ಪ್ರಮಾಣಶಾಸ್ತ್ರಗಳ ಬಗೆಗೆ ಉದಾಸೀನರಾಗಿದ್ದಕ್ಕೂ ಇದೇ ಕಾರಣವನ್ನು ನೀಡುತ್ತಾರೆ.

ವಾಸ್ತವವಾವಗಿ ದರ್ಶನಶಾಸ್ತ್ರಗಳ ಸಂರಚನೆ ಮತ್ತು ನಿರೂಪಣೆಯಲ್ಲಿ ಪ್ರಮಾಣಶಾಸ್ತ್ರಗಳ ಪಾತ್ರ ಬಹಳ ಮುಖ್ಯವಾದುದು. ಎಲ್ಲ ದರ್ಶನಗಳೂ ಈ ಪ್ರಮಾಣನಿರೂಪಣೆಯನ್ನೂ ಮಾಡಿಯೇ ಪ್ರಮೇಯಭಾಗವನ್ನು ಕಟ್ಟುತ್ತ ಹೋಗುವುದು. ನಮಗೆ ಚಿಂತನೆಯ ಶಿಸ್ತನ್ನು ಕಲಿಸುವ ಸಂರಚನಾ ಭಾಗವಾಗಿ (ಪೆಡಗಾಜಿ) ಇಂದಿಗೂ ಈ ಪ್ರಮಾಣಶಾಸ್ತ್ರಗಳ ಅಧ್ಯಯನ ಪ್ರಚಲಿತವಾಗಿದೆ. ಆದರೆ ಈ ಶಾಸ್ತ್ರಗಳು ಸತ್ಯದ ಬಗ್ಗೆ ತಮ್ಮದೇ ಆದ ಸಿದ್ಧಾಂತಗಳನ್ನು ಮಂಡಿಸುತ್ತವೆ. ಮತ್ತು ಈ ಬಗೆಯ ವಿಶ್ಲೇಷಣ ಮಾರ್ಗದಿಂದ ತಲುಪಬಹುದಾದ ಸತ್ಯದ ವ್ಯಾಖ್ಯಾನಗಳ ಸಾಧ್ಯತೆಗಳೂ ಭಿನ್ನವಾಗಿರುತ್ತವೆ.

ಭಾರತದಲ್ಲಿ ಬಹುತ್ವದ ಚರ್ಚೆ ಬಿರುಸಿನಿಂದ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ಈ ದೃಷ್ಟಿಯಿಂದ ಈ ಶಾಸ್ತ್ರಗಳ ಅಧ್ಯಯನಕ್ಕೆ ವಿಶೇಷ ಮಹತ್ವವಿದೆ ಎನಿಸುತ್ತದೆ. ಅನೇಕ ಪಾಶ್ಚಾತ್ಯ ವಿದ್ವಾಂಸರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಬೌದ್ಧಿಕವಲಯ ಮಾತ್ರ ಇನ್ನೂ ಈ ವಿಷಯವನ್ನು ಗಂಭೀರವಾಗಿ ಗಮನಿಸಿದಂತಿಲ್ಲ. ಅಭಿಜ್ಞಾನದಿಂದ ಇತ್ತೀಚೆಗೆ ಮರುಮುದ್ರಣಗೊಂಡ ತರ್ಕಸಂಗ್ರಹ ಪುಸ್ತಿಕೆಯು ಇಂತಹ ಅಧ್ಯಯನವೊಂದಕ್ಕೆ ಇಂಬುಕೊಡವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನ.

ಪ್ರಸ್ತುತ ತರ್ಕಸಂಗ್ರಹದ ಆವೃತ್ತಿಯು ಮೂಲಗ್ರಂಥದೊಂದಿಗೆ ಗ್ರಂಥಕರ್ತ ಶ್ರೀ ಅನ್ನಂಭಟ್ಟನೇ ಬರೆದ ದೀಪಿಕಾ ವ್ಯಾಖ್ಯಾನವನ್ನೂ ಒಳಗೊಂಡಿದೆ. ಮೂಲ ಕೃತಿ, ವ್ಯಾಖ್ಯಾನಗಳು ಸಂಸ್ಕೃತದಲ್ಲಿ ಮುದ್ರಿತವಾಗಿವೆ. ಜೊತೆಗೆ ಅವುಗಳ ಕನ್ನಡ ಅನುವಾದವಿದೆ. ಅದಕ್ಕೂ ಮುಖ್ಯವಾಗಿ ಇಡಿಯ ಗ್ರಂಥಕ್ಕೆ ವಿಸ್ತೃತವಾದ ಟಿಪ್ಪಣಿಯನ್ನು ಕನ್ನಡದಲ್ಲಿ ನೀಡಲಾಗಿದೆ.

ಇದು ಶಾಸ್ತ್ರಾಭ್ಯಾಸಿಗಳಿಗೆ, ಅದರಲ್ಲೂ ವ್ಯಾಸಂಗವನ್ನು ಇದೀಗ ಪ್ರಾರಂಭಿಸುವವರಿಗೂ ತುಂಬಾ ಉಪಯುಕ್ತವಾಗಿದೆ. ಅನುವಾದ ಮತ್ತು ಟಿಪ್ಪಣಿಯನ್ನು ವಿದ್ವಾನ್ ಮಹೇಶ್ ಭಟ್ಟ ಅಡಕೋಳಿಯವರು ಮತ್ತು ಶಂಕರ ಭಟ್ಟ ಅವರು ತುಂಬಾ ಅಚ್ಚುಕಟ್ಟಾಗಿ, ವಿವರವಾಗಿ ಒದಗಿಸಿ ಅಭ್ಯಾಸಿಗಳಿಗೆ ಅನುಕೂಲವಾಗುವಾಂತೆ ಮಾಡಿದ್ದಾರೆ. 

Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.