ವಚನ ವರ್ಷ

ಅರಿವಿನ ದೀವಿಗೆ


ಲೇಖಕ : ಸಂ: ಡಾ. ಬಸವರಾಜ ಸಾದರ
ಪ್ರಕಾಶಕರು : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು
ಪ್ರಕಟವಾದ ವರ್ಷ : ..
ಪುಟ : 390
ರೂ : 300

ಹೆಸರೇ ಸೂಚಿಸುವಂತೆ ವರ್ಷಕ್ಕೆ ಆಗುವಷ್ಟು 365 ವಚನಗಳ ಸಂಗ್ರಹವಿದು. ಸುಲಭವಾಗಿ ಪರ್ಸಿನಲ್ಲಿ ಅಥವಾ ಸಂಚಿಯಲ್ಲಿ ಇಲ್ಲವೇ ಪ್ಯಾಂಟಿನ ಜೇಬಿನಲ್ಲಿಯೂ ಇಟ್ಟುಕೊಂಡು ಹೋಗಬಹುದಾದ ವಿಶೇಷ ಗಾತ್ರದ ಪುಸ್ತಕ ಇದು. 12ನೇ ಶತಮಾನ ಹಾಗೂ ನಂತರದ ಕಾಲಮಾನದಲ್ಲಿದ್ದ 143 ಶರಣರ 365 ವಚನಗಳನ್ನು ಸಂಗ್ರಹಿಸಲಾಗಿದೆ.

 

ಈ ವಚನಗಳು ದೇವರು ಅಥವಾ ದೈವಗಳನ್ನು ಮೆಚ್ಚುವ ವಚನಗಳಲ್ಲ. ಜೀವನ ವಿಧಾನವನ್ನು ಹೇಳಿಕೊಡುವ ಸರಳವಾಗಿಯೇ ಜೀವನ ಧರ್ಮವನ್ನು ಮನವರಿಕೆ ಮಾಡಿಕೊಡುವಂಥ ವಚನಗಳಾಗಿವೆ. ಧರ್ಮ ಎಂಬುದನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ನೋಡದೇ... ಅನಾಚಾರವಿಲ್ಲದ, ಅಸೂಯೆ ಅಥವಾ ಅಹಂಕಾರವಿಲ್ಲದ ಬದುಕನ್ನು ಕಟ್ಟಿಕೊಳ್ಳುವ ಸುಲಭದ ಮಾರ್ಗವನ್ನು ಸೂಚಿಸುವ ವಚನಗಳಾಗಿವೆ.

 

ಓದು ಕೇವಲ ಆನಂದಿಸಲು ಅಲ್ಲ, ಬದುಕಿನಲ್ಲಿ ಅನ್ವಯಿಸಿಕೊಳ್ಳಲು ಎಂಬಂತೆ ಇರುವ ಸರಳ ವಚನಗಳ ಸಂಗ್ರಹ ಇದು. ಹೆಸರುಗಳೇ ಗೊತ್ತಿರದ ವಚನಕಾರರ ವಚನಗಳೂ ಇಲ್ಲಿವೆ. ಈ ನಿಟ್ಟಿನಲ್ಲಿ ವಚನಕಾರರ ಪರಿಚಯವನ್ನು ಅವರ ಕೃತಿಯಿಂದಲೇ ಮಾಡಿಸುವ ಅನನ್ಯ ಕೆಲಸ ಈ ಪುಸ್ತಕದಿಂದ ಆಗಿದೆ. ಮೇಲ್ನೋಟಕ್ಕೆ ಬದುಕಿನ ಸೂತ್ರಗಳನ್ನೇ ಹೇಳುವ ಇವು ಓದುತ್ತ, ಓದುತ್ತ ಹೋದಂತೆ ನಮ್ಮೊಳಗೊಂದು ಅರಿವಿನ ದೀವಿಗೆ ಹೊತ್ತಿಸುತ್ತವೆ. ಸಂಗ್ರಹಯೋಗ್ಯ ಕೃತಿ. 

Comments (Click here to Expand)
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ
ವಚನ ವರ್ಷ
ವಚನ ವರ್ಷ
ಸಂ: ಡಾ. ಬಸವರಾಜ ಸಾದರ
 ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
ಸುಮಂಗಲಾ ಎಸ್‌. ಮುಮ್ಮಿಗಟ್ಟಿ
ತರ್ಕ ಸಂಗ್ರಹ
ತರ್ಕ ಸಂಗ್ರಹ
ಶ್ರೀಮದನ್ನಭಟ್ಟ
ಆತಿಥಿ ದೇವೋಭವ
ಆತಿಥಿ ದೇವೋಭವ
ಡಾ. ಸ್ವಾಮಿರಾವ್‌ ಕುಲಕರ್ಣಿ