ಮಿಸ್ಡ್‌ ಕಾಲ

ಮಿಸ್ಡ್‌ ಕಾಲ


ಲೇಖಕ : ಗೋಪಾಲ್ ಯಡಗೆರೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್‌
ಪ್ರಕಟವಾದ ವರ್ಷ : .
ಪುಟ : 168
ರೂ : ₹ 150

‘ಮಲೆನಾಡು’ ಎಂದ ತಕ್ಷಣ ಕೆಲವಷ್ಟು ಜನರ ಮನಸ್ಸಿನಲ್ಲಿ ಬೆಚ್ಚನೆಯ ನೆನಪುಗಳ ಮೆರವಣಿಗೆ ಆರಂಭವಾಗುತ್ತದೆ. ಇನ್ನೊಂದಷ್ಟು ಜನರಿಗೆ ಈ ಪದ ಕೇಳಿದಾಕ್ಷಣ ‘ಅದೇನೋ ಕೌತುಕ, ಅದೇನೋ ನಿಗೂಢ’ ಎಂದೆನಿಸಲು ಶುರುವಾಗುತ್ತದೆ. ಬೆಂಗಳೂರಿನಲ್ಲಿಯೇ ಹುಟ್ಟಿ, ಅಲ್ಲಿಯೇ ಬೆಳೆದವರಿಗೆ ಮಲೆನಾಡು ಎಂಬುದು ವಾರಾಂತ್ಯದಲ್ಲಿ ಭೇಟಿ ಕೊಡುವ ಸ್ಥಳ ಮಾತ್ರ ಆಗಿಯೂ ಕಾಣಿಸಬಹುದು.

ಇಂತಿಪ್ಪ ಮಲೆನಾಡಿನ ಹಿಂದೊಂದು ಕಾಲದ ಬಗ್ಗೆ ಗೋಪಾಲ್ ಯಡಗೆರೆ ಅವರು ಬರೆದ ಪುಸ್ತಕದ ಹೆಸರು ‘ಮಿಲ್ಡ್‌ ಕಾಲ’. ಅಂದರೆ ಮಲೆನಾಡಿನ ಕಳೆದುಹೋದ (ಮಿಸ್ಡ್‌) ಕಾಲದ ಕಥೆಗಳನ್ನು ಹೇಳುವ ಪುಸ್ತಕ ಇದು.

‘ಹೊಸ ತಲೆಮಾರು ಹಳೆಯದನ್ನು ಮರೆತು ಅದೆಲ್ಲೋ ದೂರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿಯೇ ಇದ್ದರೂ ಒಂದೆರಡು ತಲೆಮಾರಿನ ಅಂತರದಲ್ಲಿ, ಆಧುನಿಕತೆಯ ಸ್ಪರ್ಶದಲ್ಲಿ ಬದಲಾಗಿ ಹೋಗಿದ್ದಾರೆ. ಇನ್ನೊಂದು ತಲೆಮಾರು ಸರಿದರೆ ಅವರಿಗೆ ಆ ಹಳೆಯ ಮಲೆನಾಡಿನ ಚಿತ್ರಣ ಎಂದೆಂದೂ ಅಪರಿಚಿತವಾಗಿಯೇ ಉಳಿದುಬಿಡುತ್ತದೆ. ಹೀಗಾಗಿ ಇವೆಲ್ಲವನ್ನೂ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ’ ಎಂದು ಪುಸ್ತಕದ ಆರಂಭದಲ್ಲಿ ಗೋಪಾಲ್ ಅವರು ಹೇಳಿಕೊಂಡಿದ್ದಾರೆ.

ಮಲೆನಾಡಿನ ಅಡಿಕೆ ತೋಟಗಳು, ಭತ್ತದ ಗದ್ದೆಗಳು, ಅಲ್ಲಿನ ಕವಳ, ರುಚಿಯಾದ ದೋಸೆ, ಕಾಡಿನ ಜೇನುತುಪ್ಪ, ಅಲ್ಲಿನವರ ಭಾಷೆಯಲ್ಲಿನ ಪ್ರೀತಿ... ಹೀಗೆ ಮಲೆನಾಡಿನ ಹತ್ತು ಹಲವು ಸಂಗತಿಗಳ ಬಗ್ಗೆ ಕುತೂಹಲ ಇರುವವರು ಅಥವಾ ಅವೆಲ್ಲವನ್ನೂ ಒಮ್ಮೆ ಕಂಡು, ಈಗ ಅವುಗಳನ್ನು ‘ಮಿಸ್‌’ ಮಾಡಿಕೊಳ್ಳುತ್ತಿರುವವರು ಒಮ್ಮೆ ಈ ಪುಸ್ತಕದ ಮೈದಡವಬಹುದು!

Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.