ಸದಭಿರುಚಿಯ ತಲ್ಲೀನತೆ

ಸದಭಿರುಚಿಯ ತಲ್ಲೀನತೆ


ಲೇಖಕ : ಎಸ್‌.ಬಿ.ಶಾಪೇಟಿ
ಪ್ರಕಾಶಕರು : ವಾಚಸ್ಪತಿ ಪ್ರಕಾಶನ, ಮೈಸೂರು
ಪ್ರಕಟವಾದ ವರ್ಷ : .
ಪುಟ : 340
ರೂ : ₹ 275

‘Honesty thy name is shapeti’. ಎಸ್.ಬಿ. ಶಾಪೇಟಿ ಅವರ ಬಗ್ಗೆ ಸಿ.ಆರ್. ಯರವಿನತೆಲಿಮಠ ಅವರು ಹೇಳಿದ ಮಾತಿದು. ಧಾರವಾಡದ ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದಲ್ಲಿ ಈ ಮಾತು ಚಾಲ್ತಿಯಲ್ಲಿದ್ದುದು ನಿಜವೇ. ಧಾರವಾಡ ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾಗಿದ್ದ ದಕ್ಷ ಆಡಳಿಗಾರ ಪಾವಟೆ ಅವರ ಬಗ್ಗೆ ಮಾತನಾಡುವಾಗ ಶಾಪೇಟಿ ಅವರ ಹೆಸರೂ ನುಸುಳಿ ಹೋಗುವುದಿದೆ. ಕಾರಣ ಶಾಪೇಟಿ ಅವರ ನೇರ, ನಿಷ್ಠುರ ಆಡಳಿತ ವೈಖರಿ.

‘ಸದಭಿರುಚಿಯ ತಲ್ಲೀನತೆ’ ಎನ್ನುವ ಶಾಪೇಟಿ ಅವರ ಈ ಅನುಭವ ಕಥನ ವೈಯಕ್ತಿಕ ಬದುಕು ಬವಣೆ, ಸಾಧನೆಗಳ ಮಾಹಿತಿಯನ್ನಷ್ಟೇ ಒದಗಿಸುವುದಿಲ್ಲ. ಜೊತೆಗೆ ಯಾವುದೇ ಉತ್ಪ್ರೇಕ್ಷೆ, ವೈಭವೀಕರಣವಿಲ್ಲದೇ ಆ ಕಾಲದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಿತ್ರಣಗಳನ್ನೂ ಒದಗಿಸಿಕೊಡುವುದರಿಂದ ಹೆಚ್ಚು ಮಹತ್ವ ಪಡೆಯುತ್ತದೆ.

ಪಾವಟೆ ಕಾಲದಲ್ಲಿ ಧಾರವಾಡದ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ಸೇವೆ ಸಲ್ಲಿಸಿದ ಶಾಪೇಟಿ ಅವರು ಪ್ರಾಮಾಣಿಕತೆಗೆ ಹೆಸರಾದವರು. ಈ ಪುಸ್ತಕದಲ್ಲಿ ತಮ್ಮ ಬದುಕಿನ ಆರಂಭ, ಏರಿಳಿತ, ಸಮಸ್ಯೆ- ಸವಾಲುಗಳನ್ನೂ ಅವರು ಅಷ್ಟೇ ಪ್ರಾಮಾಣಿಕತೆಯಿಂದ ದಾಖಲಿಸುತ್ತ ಹೋಗುವ ಪರಿ ಅನನ್ಯವಾದುದು ಮತ್ತು ಈ ಕಾರಣದಿಂದಲೇ ಕೃತಿ ಆಪ್ತವಾಗುತ್ತದೆ.

ಭೀಮಾ ದಂಡೆಯ ಮೇಲಿನ ಒಂದು ಹಳ್ಳಿಯ ಕುಟುಂಬ, ಬಾಹ್ಯ ಮತ್ತು ಆಂತರಿಕ ಪಲ್ಲಟಕ್ಕೆ ಒಳಗಾಗುತ್ತ ಸಾಗುವ ಪರಿ, ಆ ಕುಟುಂಬದ ಜೊತೆ ಜೊತೆಗೇ ಬದಲಾಗುವ ಹಲವರ ಬದುಕುಗಳು, ಬವಣೆಗಳ ಜೊತೆ ಜೊತೆಗೇ ದೇಶದ ಅಂದಿನ ಆರ್ಥಿಕ, ಸಾಮಾಜಿಕ ಸಾಂಸ್ಕೃತಿಕ ಒಳನೋಟಗಳೂ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಹಾಲು ಆಗ ಮಾರುವ ವಸ್ತುವಾಗಿರಲಿಲ್ಲ. ಮನೆಗೆ ಆಗಿ ಉಳಿದ ಹಾಲು– ಮಜ್ಜಿಗೆಯನ್ನು ಅಕ್ಕಪಕ್ಕದ ಮನೆಗಳಿಗೆ ಪುಕ್ಕಟೆಯಾಗಿ ಕೊಡುವ ಪರಿಪಾಠವಿತ್ತು. ನಾಲ್ಕೈದು ರೂಪಾಯಿಗೆ ಕ್ವಿಂಟಲ್ ಜೋಳ, ಗೋಧಿ, ಅಕ್ಕಿ ಬರುತ್ತಿತ್ತು. ಹದಿನಾರು ರೂಪಾಯಿಗೆ ಒಂದು ತೊಲಿ ಬಂಗಾರ... ಎನ್ನುವ ಸಂಗತಿಯನ್ನು ಓದುವುದೇ ಒಂದು ಖುಷಿ.

ಅವರು ತಮ್ಮದೇ ಕಥೆಯನ್ನು ಹೇಳುತ್ತ ಹೋದರೂ ಅವರ ಕಾಲದ ಅನೇಕ ಗಣ್ಯರೂ ಇಲ್ಲಿ ಎದುರಾಗುತ್ತಾರೆ. ವಿಜಯಪುರ, ಕೊಲ್ಲಾಪುರ, ಧಾರವಾಡದ ಅಂದಿನ ಸ್ಥಿತಿಗತಿಗಳು, ಆ ಭಾಗಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬೆಳವಣಿಗೆಗಳಿಗೂ ಈ ಪುಸ್ತಕ ಸಾಕ್ಷ್ಯ ಒದಗಿಸುತ್ತದೆ.

ದ್ವಿತೀಯಾರ್ಧದಲ್ಲಿ ಧಾರವಾಡ ವಿಶ್ವವಿದ್ಯಾಲಯದ ಇತಿಹಾಸವೂ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಯಾವುದೇ ಮುಚ್ಚು ಮರೆ, ಸಂಕೋಚವಿಲ್ಲದೇ ಶಾಪೇಟಿ ಅವರು ಕೆಲ ಮಹತ್ವದ ಘಟನಾವಳಿಗಳನ್ನೂ, ಬೆಳವಣಿಗೆಗಳನ್ನೂ ಇಲ್ಲಿ ವಿವರಿಸಿದ್ದಾರೆ.

ಶಾಪೇಟಿ ಅವರ ಕತೆಯ ಜೊತೆ ಜೊತೆಗೇ ಕಣವಿ, ಪಾಪು, ಜಿ.ಎಂ. ಪಾಟೀಲ, ಆರ್.ಬಿ. ಪಾಟೀಲ, ನಾಡಗೌಡರು, ಕೆ.ಜಿ. ಕುಂದಣಗಾರರು, ಎಂ.ಕೆ. ನಾಯಕ ಸೇರಿದಂತೆ ಹಲವು ಗಣ್ಯರು ಇಲ್ಲಿ ಎದುರಾಗುತ್ತಾರೆ.

Comments (Click here to Expand)
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ