ನಾಳೆಯನ್ನು ಕಂಡವರು

ನಾಳೆಯನ್ನು ಕಂಡವರು


ಲೇಖಕ : .
ಪ್ರಕಾಶಕರು : ಅಖಿಲಾ ಭಾರತ ಮಹಿಳಾ ಸಂಸ್ಕೃತಿಕ ಸಂಘಟನೆ
ಪ್ರಕಟವಾದ ವರ್ಷ : .
ಪುಟ : 112
ರೂ : ₹ 50

ರಷ್ಯಾ ಕ್ರಾಂತಿಯ ಶತಮಾನೋತ್ಸವ ಅಂಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎ.ಐ.ಎಂ.ಎಸ್‌.ಎಸ್‌) ಹೊರತಂದಿರುವ ‘ನಾಳೆಯನ್ನು ಕಂಡವರು’ ಮತ್ತು ‘ಫ್ಯಾಸಿವಾದಕ್ಕೆ ಸವಾಲೊಡ್ಡಿದ ಜೋಯಾ ಮತ್ತಿತರ ರಷ್ಯನ್‌ ಧೀರೆಯರು’ ಹೊತ್ತಿಗೆಗಳು 1917ರ ರಷ್ಯಾ ಕ್ರಾಂತಿಯ ಪೂರ್ವ ಹಾಗೂ ನಂತರದಲ್ಲಿನ ಮಹಿಳೆಯರ ಸ್ಥಿತಿಗತಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ವಿರುದ್ಧದ ಸೆಣಸಾಟದಲ್ಲಿ ಮಹಿಳೆಯರ ಪಾತ್ರವನ್ನು ವಿಸ್ತಾರವಾಗಿ ಕಟ್ಟಿಕೊಟ್ಟಿವೆ.

ಜಾರ್‌ ದೊರೆಯ ನಿರಂಕುಶ ಪ್ರಭುತ್ವ, ಬಂಡವಾಳಶಾಹಿ ಶೋಷಣೆ ಮತ್ತು ಜಮೀನುದಾರರ ದಾಸ್ಯದಡಿ ನಲುಗಿಹೋಗಿದ್ದ ರಷ್ಯಾದ ಮಹಿಳೆಯರ ಚಿತ್ರಣ ನೀಡುತ್ತಲೇ, ಜಾಗತಿಕವಾಗಿ ಮಹಿಳೆಯರು ಸಮಾನದುಃಖಿಗಳು ಎಂಬ ಅಂಶವನ್ನು ಒತ್ತಿಹೇಳಿದೆ.ಕ್ರಾಂತಿ ಪೂರ್ವ ರಷ್ಯಾ ಮಹಿಳೆಯರ ಪರಿಸ್ಥಿತಿ ಮನ ಕಲಕುತ್ತದೆ.

ಕ್ರಾಂತಿಯ ನಂತರ ಜಾರ್‌ ಕಾಲದ ಕಾನೂನುಗಳು ರದ್ದಾಗುತ್ತಿದ್ದಂತೆ, ಮಹಿಳೆಯರ ಸ್ಥಾನಮಾನಗಳಲ್ಲಿ ಮಹತ್ತರ ಬದಲಾವಣೆಗಳಾದವು. ಉತ್ಪಾದನೆಯ ಎಲ್ಲ ಕ್ಷೇತ್ರಗಳನ್ನು ಪ್ರವೇಶಿಸಿದ ಮಹಿಳೆ ಮತದಾನದ ಹಕ್ಕನ್ನೂ ಪಡೆದುಕೊಂಡಳು. ‘ಮನುಕುಲ ಹಾಗೂ ಶೋಷಿತ ವರ್ಗಗಳ ಇತಿಹಾಸದಲ್ಲಿ ಶ್ರಮಿಕ ಮಹಿಳೆಯರ ಭಾಗವಹಿಸುವಿಕೆಯಿಲ್ಲದೆ ಯಾವುದೇ ಹೋರಾಟ ಸಾಧ್ಯವಾಗಿಲ್ಲ ಎಂಬ ಸ್ಟಾಲಿನ್‌ ಮಾತು ಸೇರಿದಂತೆ ಅನೇಕ ನಾಯಕರ ಮಾತುಗಳು ಇಲ್ಲಿ ಸಮಂಜಸವೆನಿಸುತ್ತದೆ.

ಮಕ್ಕಳನ್ನು ಹೊತ್ತು ಹೆತ್ತು ಪೋಷಿಸುವ ಮಹಿಳೆ ಒಬ್ಬ ಶ್ರಮಜೀವಿಯೇ ಎಂದು ಪರಿಗಣಿಸಿದ್ದ ಕಮ್ಯುನಿಸಂ ‘ತಾಯ್ತನ ಮತ್ತು ಬಾಲ್ಯ ಸಂರಕ್ಷಣಾ ಸಂಸ್ಥೆ’ ಸ್ಥಾಪಿಸಿತ್ತು. ಈ ಮೂಲಕ ಮಕ್ಕಳಿಗಾಗಿ ‘ಬಾಲವಾಡಿ’ಗಳನ್ನು ತೆರೆದಿತ್ತು. ಉದ್ಯೋಗಸ್ಥ ಮಹಿಳೆಯರು ಕೆಲಸಕ್ಕೆ ತೆರಳುವ ಮುನ್ನ ಮಕ್ಕಳನ್ನು ಬಾಲವಾಡಿಗಳಲ್ಲಿ ಬಿಟ್ಟು ಸಂಜೆ ಮನೆಗೆ ಹೋಗುವಾಗ ವಾಪಸ್‌ ಕರೆದುಕೊಂಡು ಹೋಗಬಹುದಾದ ವ್ಯವಸ್ಥೆ ಅವರು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಮಹಿಳೆಯರನ್ನು ಅಡುಗೆ ಕೋಣೆಯಿಂದ ಮುಕ್ತಿಗೊಳಿಸುವ ‘ಮಡಿಕೆ ಕುಡಿಕೆ ಇನ್ನು ಬೇಡ’, ‘ಬಾಣಲಿ ಮಹಿಳೆಯ ಶತ್ರು’ ಎನ್ನುವ ಘೋಷವಾಕ್ಯಗಳು, ಮದುವೆ ಹಾಗೂ ವಿಚ್ಛೇದನ, ಗರ್ಭಪಾತಕ್ಕೆ ಅವಕಾಶ, ಶಿಕ್ಷಣ, ಆರೋಗ್ಯ, ವೇಶ್ಯಾವಾಟಿಕೆ ರದ್ದು, ಕುಡಿತದ ಬಗ್ಗೆ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮಗಳು, ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ದೊರೆತ ಉತ್ತೇಜನದ ಬಗ್ಗೆ ಪುಸ್ತಕ ಬೆಳಕು ಚೆಲ್ಲಿದೆ.

ಎರಡನೇ ಮಹಾಯುದ್ಧದ ವೇಳೆ ಜರ್ಮನಿ ಸೈನಿಕರು ಅಂದಿನ ಸಮಾಜವಾದಿ ಸೋವಿಯತ್‌ ಒಕ್ಕೂಟದ ಮೇಲೆ ದಾಳಿ ಮಾಡಿದಾಗ ಸಹಾಯಕ್ಕೆ ಬರುವೆವೆಂದು ಮಾತುಕೊಟ್ಟಿದ್ದ ಅಮೆರಿಕ, ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ದೇಶಗಳು ನೆರವಿಗೆ ಬಾರದಿದ್ದಾಗ, ಕೆಂಪು ಸೇನೆ ಜನತೆಯೊಂದಿಗೆ ದೃಢವಾಗಿ ಹೋರಾಡುತ್ತದೆ. ನೇರವಾಗಿ ಯುದ್ಧದಲ್ಲಿ ಧುಮುಕಿದ ಲಕ್ಷಾಂತರ ಜನರೊಂದಿಗೆ ಪರೋಕ್ಷವಾಗಿ ಸೇವೆ ಸಲ್ಲಿಸಿದವರು ಅಸಂಖ್ಯಾತರು. ಈ ವಿಚಾರದಲ್ಲಿ ಮಹಿಳೆಯರು, ಮಕ್ಕಳೂ ಹಿಂದೆ ಬೀಳಲಿಲ್ಲ. ಮಾಹಿತಿ ಸಂಗ್ರಹಕಾರರಾಗಿ, ಗೆರಿಲ್ಲಾ ತಂಡಗಳಲ್ಲಿ, ಆಸ್ಪತ್ರೆಗಳಲ್ಲಿ ದಾದಿಯರಾಗಿ, ಕೃಷಿ, ಕಾರ್ಖಾನೆ, ಶಸ್ತ್ರಾಸ್ತ್ರಗಳ ತಯಾರಕರಾಗಿ ಜವಾಬ್ದಾರಿ ನಿರ್ವಹಿಸಿದ ಬಗೆ ಅವಿಸ್ಮರಣೀಯ.

ಇಂತಹ ಆಯ್ದ ಹನ್ನೆರಡು ಹೋರಾಟಗಾರ್ತಿಯರ ಕಥೆಯನ್ನು ‘ಜೋಯಾ’ ಮತ್ತಿತರ ರಷ್ಯನ್‌ ಧೀರೆಯರು ಪುಸ್ತಕ ಒಳಗೊಂಡಿದೆ. 18ರ ಬಾಲೆ ಜೋಯಾಳ ಧೈರ್ಯ ಜರ್ಮನಿ ಸೈನಿಕರನ್ನೂ ಬೆಚ್ಚಿಬೀಳುವಂತೆ ಮಾಡಿತ್ತು.

‘ಯಂಗ್‌ ಅವೇಂಜರ್ಸ್‌’ ಗುಂಪು ಸೇರಿದ್ದ ಜಿನೈದಾ, ಕೆಂಪು ಸೈನ್ಯದ ಮಹಿಳಾ ಸ್ನೈಪರ್‌ (ಮರೆಯಿಂದ ಗುಂಡು ಹಾರಿಸುವವರು) ಲುಡ್‌ಮಿಲಾ ಪಾವ್ಲಿಚೆಂಕೊ, ಜರ್ಮನಿ ಸೈನಿಕರು ಅಡಗಿಸಿಡುತ್ತಿದ್ದ ನೆಲಸ್ಫೋಟಕಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಗಾಲ್ಯ, ಸೈನಿಕರಿಗೆ ಉಪಚರಿಸುವ ನೆಪದಲ್ಲಿ ಮನೆಗೆ ಬೆಂಕಿ ಕೊಟ್ಟುಕೊಂಡ ಫೆದೋಸ್ಯಾ ಇವಾನೊವ್ನಾ, ಕೆಂಪು ಸೇನೆಯ ಸೈನಿಕರಿಗೆ ರಕ್ತ ನೀಡುತ್ತಿದ್ದ ಎಲಿನಾ ಮುಂತಾದ ಮಹಿಳೆಯರ ಸೇವೆ ಶ್ಲಾಘನೀಯ. ರಾತ್ರಿ ವೇಳೆ ಸಣ್ಣ ವಿಮಾನಗಳ ಮೂಲಕ ದಾಳಿ ನಡೆಸುತ್ತಿದ್ದ ಯುವತಿಯರಿಗೆ ಜರ್ಮನಿ ಸೈನಿಕರು ‘ಇರುಳ ಮಾಟಗಾತಿಯರು’ ಎಂದು ಹೆಸರಿಟ್ಟಿದ್ದರಂತೆ, ಪಾರ್ಟಿಸಾನ ಅಂದರೆ ಕೆಂಪು ಸೇನೆಯ ಸೈನಿಕರಲ್ಲದ ಜನಸಾಮಾನ್ಯರು ನಡೆಸಿದ ಕಾರ್ಯಾಚರಣೆ (ಮೊದಲು ಶತ್ರುಗಳನ್ನು ಒಳ ಬರಲು ಬಿಡುವುದು ನಂತರ ಹಠಾತ್ತನೆ ದಾಳಿ ನಡೆಸುವುದು ಇದರ ತಂತ್ರ) ಇಂತಹ ಎಷ್ಟೋ ಅಂಶಗಳು ಕುತೂಹಲಕಾರಿಯಾಗಿವೆ.

1939– 45ರ ನಡುವೆ ಸುಮಾರು ನಾಲ್ಕು ಸಾವಿರ ಹೆಣ್ಣುಮಕ್ಕಳನ್ನು ಗಲ್ಲಿಗೇರಿಸಲಾಯಿತು ಎಂಬ ಅಂಕಿ– ಅಂಶ ಆಘಾತಕಾರಿ. ಸ್ಟಾಲಿನ್‌ ಮರಣಾನಂತರ ಸಮಾಜವಾದಿ ರಷ್ಯಾದ ಧೋರಣೆಗಳಲ್ಲಾದ ಬದಲಾವಣೆಯ ಕುರಿತೂ ಪುಸ್ತಕ ಬೆಳಕು ಚೆಲ್ಲಬೇಕಿತ್ತು.

Comments (Click here to Expand)
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ