ಮಹಿಳೆ– ಕಾನೂನು– ಪರಿಹಾರ

ಮಹಿಳೆ– ಕಾನೂನು– ಪರಿಹಾರ


ಲೇಖಕ : ಪೊ.ಆರ್‌. ಸುನಂದಮ್ಮ
ಪ್ರಕಾಶಕರು : ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ಪ್ರಕಟವಾದ ವರ್ಷ : .
ಪುಟ : ₹ 300
ರೂ : 274

ಕಾನೂನಿನ ಬಗ್ಗೆ ಕನ್ನಡದಲ್ಲಿ ಇರುವ ಪುಸ್ತಕಗಳ ಸಂಖ್ಯೆ ಇಂಗ್ಲಿಷ್‌ಗೆ ಹೋಲಿಸಿದರೆ ಕಡಿಮೆ. ಅಲ್ಲದೆ, ಕಾನೂನು ಮತ್ತು ನ್ಯಾಯಶಾಸ್ತ್ರದ ಬಗ್ಗೆ ಕನ್ನಡದಲ್ಲಿ ನಿರಂತರವಾಗಿ ಬರೆಯುವವರ ಸಂಖ್ಯೆಯೂ ಕಡಿಮೆ. ಪರಿಸ್ಥಿತಿ ಹೀಗಿದ್ದರೂ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಸಾರಾಂಗವು ‘ಮಹಿಳೆ–ಕಾನೂನು–ಪರಿಹಾರ’ ಎನ್ನುವ ಪುಸ್ತಕವನ್ನು ಹೊರತಂದಿದೆ.

ಪ್ರೊ.ಆರ್. ಸುನಂದಮ್ಮ ಅವರು ಈ ಪುಸ್ತಕದ ಸಂಪಾದಕಿ. ಮಹಿಳೆಯ ರಕ್ಷಣೆಗಾಗಿ ದೇಶದಲ್ಲಿ ಹಲವು ಕಾನೂನುಗಳನ್ನು ರೂಪಿಸಲಾಗಿದೆ. ಹೀಗಿದ್ದರೂ, ‘ಕಾನೂನುಗಳೇ ಸ್ವಯಂ ಆಗಿ ನ್ಯಾಯವನ್ನು ಒದಗಿಸಲಾರವು.

ಕಾನೂನುಗಳನ್ನು ಪರಿಣಾಮಕಾರಿಯಾಗಿ ಬಳಸುವ ಶಕ್ತಿ ಮಹಿಳೆಯರಿಗೆ ಬೇಕಾಗುತ್ತದೆ’ ಎಂದು ಪ್ರೊ. ಸುನಂದಮ್ಮ ಅವರು ಪುಸ್ತಕದಲ್ಲಿ ಬರೆದಿದ್ದಾರೆ. ತನ್ನ ರಕ್ಷಣೆಗಾಗಿ ಇರುವ ಕಾನೂನುಗಳ ಬಗ್ಗೆ ಮಹಿಳೆಗೆ ಮಾಹಿತಿ ನೀಡಿ, ಆ ಮೂಲಕ ಆಕೆಯನ್ನು ಸಶಕ್ತಗೊಳಿಸುವ ಉದ್ದೇಶದ ಪುಸ್ತಕ ಇದು.

ವರದಕ್ಷಿಣೆ, ಭ್ರೂಣ ಲಿಂಗ ಪತ್ತೆ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಆಗದಂತೆ ಮಹಿಳೆಗೆ ರಕ್ಷಣೆಗೆ ಒದಗಿಸುವುದು, ದೇವದಾಸಿ ಪದ್ಧತಿಯ ನಿಷೇಧಕ್ಕೆ ಜಾರಿಗೆ ತಂದ ಕಾಯ್ದೆ, ಹೆರಿಗೆ ಸೌಲಭ್ಯಕ್ಕೆ ಸಂಬಂಧಿಸಿದ ಕಾಯ್ದೆ, ಅತ್ಯಾಚಾರ ತಡೆ ಕಾಯ್ದೆ, ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು, ಕೌಟುಂಬಿಕ ಹಿಂಸೆ ತಡೆ ಕಾಯ್ದೆ, ಬಾಲ್ಯವಿವಾಹ ತಡೆ ಕಾಯ್ದೆ ಕುರಿತ ಲೇಖನ ಸೇರಿದಂತೆ ಒಟ್ಟು 11 ಲೇಖನಗಳ ಗುಚ್ಛ ಈ ಪುಸ್ತಕ.

ವಿವಿಧ ಕಾಯ್ದೆಗಳಲ್ಲಿ ಹೇಳಿರುವ ಅಂಶಗಳನ್ನು ಗುರುತಿಸಿ, ಕಾಯ್ದೆಯ ಮಿತಿಗಳ ಕುರಿತು ಚರ್ಚಿಸುವ ಯತ್ನವನ್ನೂ ಈ ಪುಸ್ತಕದಲ್ಲಿ ಮಾಡಲಾಗಿದೆ.

Comments (Click here to Expand)
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ