ವಿಷಮ ಭಿನ್ನರಾಶಿ

ವಿಷಮ ಭಿನ್ನರಾಶಿ


ಲೇಖಕ : ವಸುಧೇಂದ್ರ
ಪ್ರಕಾಶಕರು : ಛಂದ ಪುಸ್ತಕ, ಐ– 004, ಮಂತ್ರಿ ಪ್ಯಾರಡೈಸ್‌, ಬನ್ನೇರುಘಟ್ಟ ರಸ್ತೆ, ಬೆಂಗಳೂರು –560076
ಪ್ರಕಟವಾದ ವರ್ಷ : .
ಪುಟ : 240
ರೂ : ₹180

ಈ ತಲೆಮಾರಿನ ಅನೇಕ ಮುಖ್ಯ ಕತೆಗಾರರಲ್ಲಿ ವಸುಧೇಂದ್ರ ಕೂಡ ಒಬ್ಬರು. ಅಮೃತ ಸೊಪ್ಪು, ವಾಹಿನಿ, ಡೆವಿಲ್‌ ಡಾಗ್‌, ವಿಷಮ ಭಿನ್ನರಾಶಿ, ನಿಯಮ ಬಾಹಿರ, ಸೈಕಲ್‌ ಸವಾರಿ, ಚತುರ್ಮುಖ, ಆಡಬಾರದ ಮಾತುಗಳು ಕಾಡುವಾಗ- ಹೀಗೆ ಎಂಟು ಕಥೆಗಳನ್ನು ಒಳಗೊಂಡ ಅವರ ‘ವಿಷಮ ಭಿನ್ನರಾಶಿ’ ಕಥಾಸಂಕಲನ ಹೊರಬಂದಿದೆ. ಪ್ರಕಟವಾದ ವರ್ಷವೇ ಮರುಮುದ್ರಣವನ್ನೂ ಕಂಡಿದೆ.

ಮೊದಲ ಐದು ಕತೆಗಳನ್ನು ‘ಅಂಶ‘ ಶೀರ್ಷಿಕೆಯಡಿ, ಕೊನೆಯ ಮೂರು ಕತೆಗಳನ್ನು 'ಛೇದ' ಶೀರ್ಷಿಕೆ ಅಡಿಯೂ ಛೇದಿಸಿರುವುದನ್ನು ಗಮನಿಸಿದರೆ, ಮೊದಲ ಭಾಗ ಎಲ್ಲರೂ, ಎಲ್ಲ ವಯೋಮಾನದವರು ಓದುವಂತಹ ಕತೆಗಳು, ಎರಡನೇ ಭಾಗದ ಕಥೆಗಳು ಆಯ್ದವರಿಗೆ ಅಥವಾ ‘ವಯಸ್ಕರಿಗೆ ಮಾತ್ರ’ವೆಂದು ಷರಾ ಬರೆಯದಿದ್ದರೂ ಅಂತಹ ಅರ್ಥ ಧ್ವನಿಸುತ್ತಿರಬಹುದೇ ಎನಿಸುತ್ತದೆ.

‘ಸೈಕಲ್‌ ಸವಾರಿ’ ಕತೆ ಓದಿದಾಗ ಇದು ವಯಸ್ಕರಿಗೆ ಮಾತ್ರ ಅನಿಸದೇ ಇರದು. ‘ಗೆ’ ಗಳು ಅನುಭವಿಸುವ ತಾಕಲಾಟ, ಅವರೊಳಗಿನ ಸುಪ್ತ ತೊಳಲಾಟ, ತುಮುಲಗಳನ್ನು ಲೇಖಕ ನಿರ್ಭಿಢೆಯಿಂದ ಕಟ್ಟಿಕೊಟ್ಟಿದ್ದಾರೆ. ಅನುಭವ, ವಾಸ್ತವ ಮತ್ತು ಸತ್ಯವನ್ನು ಸಮಾಜದ ಮುಂದೆ ಕತೆಯಾಗಿ ತೆರೆದಿಡಲು ಹಿಂಜರಿಕೆಯಲ್ಲಿ ಬಳಲುವವರ ನಡುವೆ ವಾಸ್ತವತೆಯನ್ನು ಅಕ್ಷರ ರೂಪದಲ್ಲಿ ಬಿಚ್ಚಿಡುವುದು ಎಲ್ಲರಿಗೂ ಸುಲಭಸಾಧ್ಯವಲ್ಲ. ಲೇಖಕ ಇಲ್ಲಿ ಅದನ್ನು ಆಗು ಮಾಡಿದ್ದಾರೆ.

‘ಸೈಕಲ್‌ ಸವಾರಿ’ಯಲ್ಲಿ ಮೋಹನಸ್ವಾಮಿಗೆ 'ಏನು ನೀನು ಇನ್ನೂವರೆಗೆ ಯಾವ ಹುಡುಗಿಗೂ ಮಾ...' ಎಂದು ಸುಮಿತ್ ಗೋಯಲ್‌ ಅಚ್ಚರಿಯಿಂದ ಕೇಳುತ್ತಾನೆ. ‘ಗಂಡು ಸೂಳೆ’ ಪದ ಪ್ರಯೋಗ, 'ತನಗೆ ಇಷ್ಟವಾಗುವುದು ಗಂಡು ದೇಹವೇ ಹೊರತು ಹೆಣ್ಣಿನದಲ್ಲ, ಯಾವತ್ತೂ ಹೆಣ್ಣು ತನ್ನನ್ನು ಆಕರ್ಷಿಸಲು ಸಾಧ್ಯವಿಲ್ಲ' ಮೋಹನ ಸ್ವಾಮಿಯ ಮಾತು, 'ಚತುರ್ಮುಖ'ದಲ್ಲಿ 'ಗೆ' ದರ್ಶನ್ 'ಮಗಾ, ನೀನು ಹಾಸಿಗೆಯಾಗೆ..? ಇಲ್ಲಾ ..?' ಎಂದು ಮೋಹನ ಸ್ವಾಮಿಗೆ ಕೇಳುವುದು... ಇಂತಹದನ್ನು ಯಾವ ಭಿಡೆಯಿಲ್ಲದೆ ಬರೆಯುವ ಶಕ್ತಿ ವಸುಧೇಂದ್ರ ಅವರಂತಹವರಿಗೆ ಮಾತ್ರ ಸಾಧ್ಯವೇನೋ! 

ಸೈಕಲ್‌ ಸವಾರಿಯನ್ನು ಸ್ನೇಹಿತೆಯರೊಂದಿಗೆ ಅಥವಾ ಒಂದೇ ಕುಟುಂಬದೊಳಗಿನ ಸಾಹಿತ್ಯಾಸಕ್ತ ಸದಸ್ಯರು ಒಟ್ಟಿಗೆ ಕುಳಿತು ಮುಕ್ತವಾಗಿ ಚರ್ಚಿಸಲು ಸಾಧ್ಯವೇ ಇಂತಹ ಅನೇಕ ಪ್ರಶ್ನೆಗಳೂ ಕಾಡುವುದು ಸಹಜ. ಆದರೆ, ‘ಗೆ’ ಎಂದರೇ ಅಸ್ಪೃಶ್ಯರಂತೆ, ತಿರಸ್ಕೃತ ವ್ಯಕ್ತಿಯಂತೆ, ಅಪಾಯಕಾರಿ ವ್ಯಕ್ತಿಯಂತೆ, ಅಸಹ್ಯಕರವಾಗಿಯೂ ನೋಡುವವರೇ ಹೆಚ್ಚು ತುಂಬಿರುವ ಸಮಾಜವಿದು. ಪತ್ರ/ ಅರ್ಜಿ ಬರೆಯುವಾಗ ನಮ್ಮ ವಿಳಾಸದ ಮೇಲೆ ‘ಯಿಂದಾ’, ಯಾರನ್ನು ಕುರಿತು ಬರೆಯುತ್ತೀವೋ ಆ ವ್ಯಕ್ತಿ ವಿಳಾಸದ ಮೇಲೆ ‘ಗೆ’ ಒಕ್ಕಣೆ ಬರೆಯುವುದು ಸಹಜ.

ಕನ್ನಡ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡೂ, ಮುಖ್ಯ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರು ಅವರಿಗೆ ಬರುತ್ತಿದ್ದ ಪತ್ರಗಳಲ್ಲಿ ‘ಗೆ’ ಪದ ಬರೆದಿದ್ದರೆ ಆ ಅಕ್ಷರ ಬಳಸದಂತೆ ತಾಕೀತು ಮಾಡುತ್ತಿದ್ದುದು, ‘ಗೆ’ ಬದಲು ‘ಇವರಿಗೆ’ ಎಂದು ಬರೆದರೆ ನಿಮ್ಮ ಗಂಟೇನು ಹೋಗುತ್ತಾ? ಎಂದು ವ್ಯಗ್ರರಾಗುತ್ತಿದ್ದರು. ‘ಗೆ’ ಅಂದರೆ ಏನನ್ನು ಧ್ವನಿಸುತ್ತದೆ ಎನ್ನುವುದನ್ನೂ ಅವರೇ ನಮಗೆಲ್ಲ ವಿವರಿಸಿದ್ದು ನೆನಪಾಗುತ್ತದೆ. ವ್ಯಾಕರಣಬದ್ಧವಾಗಿ ಬಂದ ಕನ್ನಡದ ಪದ ಇಂಗ್ಲಿಷಿನಲ್ಲಿ ಅಂಥ ಅರ್ಥ ಸ್ಫುರಿಸುತ್ತಾ ಎಂದು ನಾವು ಅಚ್ಚರಿಪಟ್ಟಿದ್ದುಂಟು.

ಹಸಿವು, ಬಡತನ, ಹಿಂಸೆ, ಯುದ್ಧ, ಪ್ರೀತಿ, ಪ್ರೇಮ ಎಲ್ಲವೂ ಸಾರ್ವತ್ರಿಕ. ಇವು ಎಲ್ಲ ಕಾಲದ ಸಮಸ್ಯೆ ಕೂಡ. 'ಗೆ' ಎನ್ನುವುದು ಮಾನಸಿಕ- ದೈಹಿಕ ವಾಂಛೆಗೆ ಸಂಬಂಧಿಸಿದ ಸಮಸ್ಯೆ. ಇದನ್ನು ಸಾಹಿತ್ಯದಲ್ಲಿ ಹೀಗೂ ಸಾರ್ವತ್ರಿಕಗೊಳಿಸಲು ಸಾಧ್ಯವೆ? ಆದರೆ, ಪೂರ್ವಗ್ರಹ, ತಿರಸ್ಕಾರ ಭಾವಗಳನ್ನು ಬಿಟ್ಟು ಓದಿದರಷ್ಟೇ ಈ ಕತೆಗಳು ಹೆಚ್ಚು ಆಪ್ತವೆನಿಸುತ್ತವೆ.

ಆರಂಭದ ಕತೆ ‘ಅಮೃತ ಸೊಪ್ಪು’ ಓದುವಾಗ, ಮನುಷ್ಯ ಬದುಕಿರುವುದೇ ಅನ್ನಾಹಾರದಿಂದ. ಅದರಲ್ಲೂ ಅನ್ನಾಹಾರ, ನೀರಿನ ಅಗತ್ಯವೇ ಇಲ್ಲದೆ ಬದುಕುವಂತಹ ಅವಕಾಶ ಆಕಸ್ಮಿಕವಾಗಿ ಸಿದ್ಧಿಸಿದ್ದನ್ನು ಅಂಬಾಬಾಯಿ ಅನ್ಯಾಯವಾಗಿ ಕಳೆದುಕೊಂಡುಬಿಟ್ಟಳಲ್ಲ! ಛೇ! ದೇವರು ದಯಪಾಲಿಸಿದ್ದ ಎಂಥ ವರವನ್ನು ಆಕೆ ಕಳೆದುಕೊಂಡಳೆಂದು ‘ಅಮೃತ ಸೊಪ್ಪು’ ಕಾಡಿಸುತ್ತದೆ.

ಇನ್ನು ‘ವಾಹಿನಿ’ ಕತೆಯೂ ಅಷ್ಟೇ. ಮನೋರೋಗ ವ್ಯಕ್ತಿಗೆ ವಂಶಪಾರಂಪರ‍್ಯವಾಗಿ ಬರುತ್ತದೋ, ಇಲ್ಲವೋ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಆದರೆ, ಇಡೀ ಮನುಕುಲವನ್ನು ಒತ್ತಡದ ಬದುಕೇ ಖಿನ್ನತೆ, ಮಾನಸಿಕ ಕಾಯಿಲೆಗ ಈಡು ಮಾಡುತ್ತಿರುವುದನ್ನ ಧ್ವನಿಸುತ್ತದೆ.

ಹತ್ತಿರದ ರಕ್ತ ಸಂಬಂಧಗಳಲ್ಲಿ ನಡೆಯುವ ವೈವಾಹಿಕ ಸಂಬಂಧದಿಂದ ಹುಟ್ಟುವ ಮಕ್ಕಳು ಹುಟ್ಟಿನಲ್ಲೇ ವೈಕಲ್ಯದ ಸಮಸ್ಯೆ ಅನುಭವಿಸುತ್ತಾರೆ ಎನ್ನುವುದನ್ನು ‘ವಿಷಮ ಭಿನ್ನರಾಶಿ’ ತೆರೆದಿಡುತ್ತದೆ. ಪರಿಮಳ ತನ್ನ ತಾಯಿ ತಂದೆ ರಕ್ತ ಸಂಬಂಧಿಕರಾಗಿದ್ದರಿಂದಲೇ ತನ್ನ ತಮ್ಮ ರಘು ಹುಟ್ಟು ಸಮಸ್ಯೆಯಿಂದ ಅನುಭವಿಸುತ್ತಿದ್ದಾನೆ ಎನ್ನುವುದನ್ನು ಖಚಿತಪಡಿಸಿಕೊಂಡು, ತಾನು ಪ್ರೀತಿಸುತ್ತಿದ್ದ ಸುಮಿತ್ ಕೂಡ ರಕ್ತ ಸಂಬಂಧಿ ಎನ್ನುವ ಸತ್ಯವನ್ನು ತನ್ನ ಅಜ್ಜಿಯಿಂದ ಗೊತ್ತಾದ ಮೇಲೆ ಮದುವೆಯಾಗಲು ನಿರಾಕರಿಸುತ್ತಾಳೆ. ರಕ್ತ ಸಂಬಂಧ ಅದರಲ್ಲೂ ಸೋದರ ಸಂಬಂಧದಲ್ಲಿ ವಿವಾಹವಾದ ದಂಪತಿಗಳಲ್ಲಿ ಇಂತಹ ವೈಕಲ್ಯದ ಮಕ್ಕಳು ಜನಿಸಿದವರನ್ನು ಹತ್ತಿರದಿಂದ ನೋಡಿದ್ದವರಿಗೆ ಪರಿಮಳ ತೆಗೆದುಕೊಂಡ ನಿರ್ಧಾರ ಸರಿ ಅನಿಸಿಬಿಡುತ್ತದೆ.

ಐ.ಟಿ ಉದ್ಯೋಗಿಗಳಲ್ಲಿ ಅಮೆರಿಕದ ಕನಸು ಕಾಣುವ ಕೆಲವರು ತುಳಿಯುವ ವಾಮಮಾರ್ಗಕ್ಕೆ 'ನಿಯಮ ಬಾಹಿರ’ ಎಚ್ಚರಿಕೆ ಪಾಠದಂತೆ ಕಾಣಿಸುತ್ತದೆ. ಆದರೆ, ತಳ ವರ್ಗದಿಂದ ಪರಿಶ್ರಮ, ಪ್ರತಿಭೆಯಿಂದ ಬಂದ ವೆಂಕಯ್ಯನನ್ನು ದುರಂತ ನಾಯಕನಾಗಿ ಬಿಂಬಿಸಿರುವುದು ಲೇಖಕರ ದೃಷ್ಟಿಯಲ್ಲಿ ವೆಂಕಯ್ಯನಂತಹವರು ತಳವರ್ಗದಲ್ಲಿ ಮಾತ್ರ ಇರುತ್ತಾರೆಯೇ ಎಂದು ಪ್ರಶ್ನಿಸಬೇಕೆನಿಸುತ್ತದೆ. 

ವಿಶೇಷ ಚತುರತೆಯ ಶ್ವಾನ ‘ಡೆವಿಲ್ ಡಾಗ್’ ಓದಿಸಿಕೊಳ್ಳುತ್ತದೆ. ತಂದೆ- ತಾಯಿ, ಸಂಸ್ಕಾರವನ್ನೂ ಮರೆತು ತಂತ್ರಜ್ಞಾನ ಜಗತ್ತಿನಲ್ಲಿ ಹುದ್ದೆಯಲ್ಲಿ ಮೇಲೇರಲು ಹಪಾಹಪಿಸುವ ಯುವ ಜನಾಂಗವನ್ನು ಕುಟುಕಿ ಕಣ್ತೆರೆಸುವಂತೆ ಈ ಕತೆಯಲ್ಲಿನ ಶ್ರೀನಿವಾಸರಾಯರು ಮತ್ತು ನಿಮ್ಮಿ ಒಂದು ಆದರ್ಶವಾಗಿ ಕಾಣಿಸುತ್ತಾರೆ. ಒಂದಕ್ಕಿಂತ ಒಂದು ಕತೆ ಭಿನ್ನವಾಗಿವೆ. ಸಾಫ್ಟ್‌ವೇರ್ ಲೋಕದಲ್ಲಿ ವಿಹರಿಸುವ ಲೇಖಕರ ಬರವಣಿಗೆ, ‘ಅಮೃತ ಸೊಪ್ಪು’ ಕತೆಯಲ್ಲಿ ಆಚೆ ಬಂದಿರುವುದು ಗಮನಾರ್ಹ.

Comments (Click here to Expand)
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ