ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರು, ರೈತರನ್ನು ಕಡೆಗಣಿಸಿ ವಿಪಕ್ಷಗಳು ಕುರ್ಚಿ ಮೋಹದಲ್ಲಿವೆ: ಮೋದಿ

Last Updated 21 ಜುಲೈ 2018, 12:54 IST
ಅಕ್ಷರ ಗಾತ್ರ

ಶಹಜಾನ್‍ಪುರ್: ಉತ್ತರ ಪ್ರದೇಶದ ಶಹಜಹಾನ್ ಜಿಲ್ಲೆಯಲ್ಲಿ ರೈತರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳು ರೈತರು ಮತ್ತು ಬಡವರನ್ನು ಕಡೆಗಣಿಸಿ ಪ್ರಧಾನಿ ಕುರ್ಚಿಯ ಮೋಹದಲ್ಲಿವೆ ಎಂದಿದ್ದಾರೆ.

ಶಹಜಹಾನ್‍ಪುರ್‌ನಲ್ಲಿಶನಿವಾರ ಮಧ್ಯಾಹ್ನ ನಡೆದ ಕಿಸಾನ್ ಕಲ್ಯಾಣ್ ರ‍್ಯಾಲಿಯಲ್ಲಿ ಭಾಗವಹಿಸುವ ಮುನ್ನ ಮೋದಿ ಈ ರೀತಿ ಟ್ವೀಟ್ ಮಾಡಿದ್ದರು.

ನಾನು ನಮ್ಮ ರೈತರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ, ಅವರ ಕಠಿಣ ಪರಿಶ್ರಮದಿಂದಾಗಿ ಭಾರತ ಇಷ್ಟೊಂದು ಅಭಿವೃದ್ಧಿ ಹೊಂದಿದೆ, ಇಂದು ಮಧ್ಯಾಹ್ನ ಉತ್ತರ ಪ್ರದೇಶದ ಶಹಜಾನ್‍ಪುರ್‍‍ನಲ್ಲಿ ಕಿಸಾನ್ ಕಲ್ಯಾಣ್ ರ‍್ಯಾಲಿಯಲ್ಲಿ ಭಾಗವಹಿಸಲಿದ್ದೇನೆ.


ರ‍್ಯಾಲಿಯಲ್ಲಿ ಮೋದಿ ಹೇಳಿದ್ದೇನು?
* ತಮ್ಮ ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷಗಳ ಬಳಿ ಕಾರಣಗಳು ಇಲ್ಲದೇ ಇರುವುದರಿಂದ ಲೋಕಸಭೆಯಲ್ಲಿ ತಾವು ರಾಹುಲ್ ಗಾಂಧಿಯಿಂದ ಅನಗತ್ಯ ಅಪ್ಪುಗೆ ಪಡೆಯಬೇಕಾಯಿತು

*ಅವಿಶ್ವಾಸ ನಿರ್ಣಯ ಯಾಕೆ ಎಂದು ಕೇಳಿದರೆ ಅವರ ಬಳಿ ಉತ್ತರವಿರಲಿಲ್ಲ, ಹಾಗಾಗಿ ಅವರು ಅಪ್ಪುಗೆ ನೀಡಿದರು.

*ಒಂದು ದಳ (ಪಕ್ಷ) ಇನ್ನೊಂದರ ಜತೆ ಸೇರಿದರೆ ಅದು ದಳ-ದಳ (ಕೆಸರಿನಲ್ಲಿ) ಆಗುತ್ತದೆ, ಕಮಲ ಅರಳಲು ಇದು ಒಳ್ಳೆಯದು.

*ಈ ಹಿಂದಿನ ಸರ್ಕಾರ ರೈತರಿಗೆ ಸಹಾಯ ಮಾಡಿಲ್ಲ

*ಕಾಕಂಬಿಯಿಂದ ಎಥೆನಾಲ್ ಮತ್ತು ಕಬ್ಬಿನ ಹಾಲನ್ನು ತಯಾರಿಸಲು ಮೊದಲ ಬಾರಿ ನಮ್ಮ ಸರ್ಕಾರ ಮಿಲ್ಲುಗಳಿಗೆ ಅನುಮತಿ ನೀಡಿತು.

*ನಾವು ಅಧಿಕಾರಕ್ಕೆ ಬರುವ ಮುನ್ನ ಭಾರತದಲ್ಲಿ ತಯಾರಾಗುತ್ತಿದ್ದ ಎಥೆನಾಲ್ ಪ್ರಮಾಣ 40 ಕೋಟಿ ಲೀಟರ್ ಆಗಿತ್ತು. ಈಗ ಅದು 160 ಕೋಟಿ ಲೀಟರ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT