‘ವಿಶ್ವ ಪುಸ್ತಕ ದಿನ’ದಂದು ಫೇಸ್ಬುಕ್ ಎಂದಿನಿಂತಿರಲಿಲ್ಲ. ಅಲ್ಲಿ ಇಷ್ಟದ ಪುಸ್ತಕಗಳ ಮುಖಪುಟವಿತ್ತು. ಕಪಾಟುಗಳಲ್ಲಿ ಸಾಲಾಗಿ ನಿಂತಿದ್ದ ಪುಸ್ತಕಗಳ ನೋಟ ಕಣ್ಸೆಳೆಯುತ್ತಿತ್ತು ಸದಾ ಮೊಬೈಲ್ ಮೇಲೆ ಬೆರಳಾಡಿಸುತ್ತಿದ್ದವರೂ ಅಂದು ಪುಸ್ತಕಗಳ ಹಾಳೆಗಳನ್ನು ತಿರುವಿ ಹಾಕಿದರು. ಪುಸ್ತಕ ದಿನವನ್ನು ನಿಮಿತ್ತ ಮಾಡಿಕೊಂಡು ಇಷ್ಟದ ಪುಸ್ತಕಗಳನ್ನು ಹೇಗೆಲ್ಲಾ ಕೊಂಡಾಡಿದರು ಗೊತ್ತೆ?